ಚೈತ್ರ ಕುಂದಾಪುರ ಬಣ್ಣ ಬಯಲು ಮಾಡಿದ್ದು ದೈವ ಶಕ್ತಿನಾ? ಆ ಒಂದು ಭಾಷಣ ಈಕೆಯ ಜೀವನವನ್ನೇ ಹಾಳುಮಾಡಿತು

 | 
Jd

ಬೆಂಗಳೂರು:‌ ಸ್ನೇಹಿತರೆ ನಮಸ್ಕಾರ, ಖ್ಯಾತ ಹಿಂದೂ ವಾಗ್ಮಿ ಚೈತ್ರ ಕುಂದಾಪುರ ಇದೀಗ ಸಿಸಿಬಿ ಅಧಿಕಾರಿಗಳ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಹೌದು, ಸುಮಾರು ಮೂರು ದಿನಗಳ ಹಿಂದೆಯೇ ಚೈತ್ರ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಚೈತ್ರ ಕುಂದಾಪುರ ಅವರ ವಂಚನೆ ಆರೋಪ ವಿಚಾರವಾಗಿ ಸಾಕಷ್ಟು ತನಿಖೆ ನಡೆಯುತ್ತಿದೆ. ಜೊತೆಗೆ ಮೋಸ ಹೋದ ಗೋವಿಂದ ಪೂಜಾರಿ ಕೂಡ ಚೈತ್ರ ವಿರುದ್ಧ ಮತ್ತಷ್ಟು ಆಡಿಯೋ ಹಾಗೂ ವಿಡಿಯೋ ಸಿಸಿಬಿ ಪೊಲೀಸರಿಗೆ ನೀಡುತ್ತಿದ್ದಾರೆ. 

ಇನ್ನು ಚೈತ್ರ ಕುಂದಾಪುರ ಅವರು ರಾಜ್ಯಾದ್ಯಂತ ಸಾಕಷ್ಟು ಭಾಷಣಗಳನ್ನು ಮಾಡುತ್ತಾ ಹಿಂದೂ ಹಾಗೂ ಮುಸ್ಲಿಮರ ನಡುವೆ ದ್ವೇಷದ ವಾತಾವರಣ ಉಂಟು ಮಾಡಿದ್ದರು. ಜೊತೆಗೆ ಹಿಂದೂತ್ವ ಎನುತ್ತಾ, ವಂಚನೆ ಕೂಡ ಮಾಡುತ್ತಿದ್ದಾರೆ ಎಂಬ ವಿಚಾರ ಕೂಡ ಇದೀಗ ಬೆಳಕಿಗೆ ಬಂದಿದೆ.

ಇನ್ನು ಚೈತ್ರ ಕುಂದಾಪುರ ಅವರು ಕಳೆದ ವರ್ಷ ಮಾವಿನ ಕಟ್ಟೆ, ಜಟಿಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹಿಂದೂತ್ವದ ಭಾಷಣ ಮಾಡಿ ಅಲ್ಲಿದ್ದ ಬಿಸಿ ರಕ್ತ ಯುವಕರನ್ನು ಮತ್ತಷ್ಟು ಧರ್ಮ ದ್ವೇಷ ಹುಟ್ಟುವಂತೆ ಮಾಡಿದ್ದರು. ಚೈತ್ರ ಕುಂದಾಪುರ ಯಾವಾಗ ಮಾವಿನ ಕಟ್ಟೆ ಜಟಿಲೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರಚೋದನಕಾರಿ ಭಾಷಣ ಮಾಡುತ್ತಾರೋ, ಅವತ್ತಿನಿಂದ ಈ ಚೈತ್ರ ಕುಂದಾಪುರ ಸಾಕಷ್ಟು ಹಿನ್ನಡೆ ಅನುಭವಿಸಲಾರಂಭಿಸಿದರು. 

ಇದೀಗ ಚೈತ್ರ ಕುಂದಾಪುರ ವಂಚನೆ ಆರೋಪದಲ್ಲಿ ಸಿಸಿಬಿ ಬಲೆಗೆ ಬಿದ್ದು ನರಳಾಡುತ್ತಿದ್ದಾರೆ‌. ಹಿಂದೂ ಧರ್ಮದ ಹೆಸರಲ್ಲಿ ಇಂತಹ ವಂಚನೆ ಕೆಲಸಕ್ಕೆ ಕೈ ಹಾಕುವ ಯಾವುದೇ ವ್ಯಕ್ತಿ ಕೂಡ ಸುಖ ಜೀವನ ಅನುಭವಿಸಲು ಸಾಧ್ಯವಿಲ್ಲ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.