ಮಗು ಅಳ್ತಾ ಇರುವಾಗ ಎದೆ ಚುರ್ ಅನ್ನುತ್ತೆ; ಎಲ್ಲರು ಹಾಲು ಕೊಡು ಅನ್ನುತ್ತಾರೆ ಎಂದ ಶ್ರುತಿ ಹರಿಹರನ್

 | 
೭೭

ಲೂಸಿಯಾ ಚಿತ್ರ ತೆರೆಕಂಡ ಮೇಲೆ ಶೃತಿ ಹರಿಹರನ್ ಇನ್ನಷ್ಟು ಫೇಮಸ್ ಆಗಿದ್ದರು.ಮಲೆಯಾಳಂ ಹಾಗೂ ಸ್ಯಾಂಡಲ್‌ವುಡ್ ಸಿನಿಪ್ರೇಕ್ಷಕರಿಗೆ ನಟಿ ಶ್ರುತಿ ಹರಿಹರನ್  ಅವರು ಅಪರಿಚಿತರಲ್ಲ. ಲೂಸಿಯಾ, ತಾರಕ್, ಉಪೇಂದ್ರ ಮತ್ತೆ ಬಾ ಸೇರಿದಂತೆ ಕನ್ನಡದಲ್ಲಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿರುವ ಶ್ರುತಿ ಹರಿಹರನ್ ಮೀ ಟೂ ಮೂಲಕ ಕೂಡ ಬಹಳಷ್ಟು ಸುದ್ದಿ ಮಾಡಿದವರು. 

ನಟಿ ಶ್ರುತಿ ಹರಿಹರನ್ ಅವರ ಮೀಟೂ ಅಭಿಯಾನ ಹಳ್ಳ ಹಿಡಿದು ಹೋಗಿದ್ದರೂ ಅವರ ಅಮೋಘ ಎನಿಸುವ ನಟನೆಯನ್ನು ಯಾವತ್ತೂ ಪ್ರೇಕ್ಷಕರು ಮರೆಯಲು ಸಾಧ್ಯವಿಲ್ಲ. ಇಂಥ ನಟಿ ಈಗ ಮದುವೆಯಾಗಿ ತಾಯ್ತನದ ಸುಖವನ್ನು ಅನುಭವಿಸುತ್ತಿದ್ದು, ಅದನ್ನು ಜಗತ್ತಿನ ಜೊತೆ ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ನಟಿ ಶ್ರುತಿ ಹರಿಹರನ್ ಅವರು ತಾಯ್ತನದ ಬಗ್ಗೆ ಮಾತನಾಡಿದ್ದಾರೆ.

 ಮಗು ಆದ ತಕ್ಷಣ ಹೆಣ್ಣು ತಾಯಿ ಆಗುತ್ತಾಳೆ. ಅವಳ ಪ್ರಯಾರಿಟಿ ಬೇರೆ ಆಗುತ್ತದೆ. ಮಗು ಎನ್ನುವುದು ತುಂಬಾ ದೊಡ್ಡ ರೆಸ್ಪಾನ್ಸಿಬಿಲಿಟಿ. ನಾವು ಅದನ್ನು ನಮಗೆ ಮಗು ಆಗುವ ಮೊದಲು ಊಹಿಸಲೂ ಸಾಧ್ಯವಿಲ್ಲ. ನಾವು ಒಂದು ಜೀವಕ್ಕೆ ಜವಾಬ್ದಾರಿ ಆಗುತ್ತೇವೆ. ನನಗೆ ಮಗು ಆಗಿ ಒಂದೂವರೆ ತಿಂಗಳು ಆದ ಬಳಿಕ ನಾನು ನಿಜವಾಗಿಯೂ ತಾಯ್ತನ ಹಾಗೂ ಮಗುವಿನ ಲಾಲನೆ-ಪಾಲನೆಯನ್ನು ಎಂಜಾಯ್ ಮಾಡಲು ಶುರು ಮಾಡಿದೆ. 

ಮಗು ಅಳುತ್ತೆ. ಆಗ ನಂಗೆ ಟೆನ್ಷನ್ ಆಗುತ್ತೆ. ಮಗು ಅಳ್ತಾ ಇದ್ಯಾ, ಹಾಲು ಕೊಡು ಅಂತಾರೆ ಎಲ್ಲರೂ ಸೇರಿ. ನಮ್ಮಮ್ಮ ಅಮ್ಮ, ಅಮ್ಮ ಅಜ್ಜಿ ಹಾಗೂ ಸುತ್ತಮುತ್ತ ಇರೋರು ಎಲ್ರೂ ಮಗು ಬಗ್ಗೆನೇ ಯೋಚ್ನೆ ಮಾಡೋಕೆ ಶುರು ಮಾಡ್ತಾರೆ. ಮಗುಗೆ ಹಾಲು ಕೊಡು, ಮಗುಗೆ ಹಾಲ್ ಕೊಡು ಅಂತಾರೆ. ಆದರೆ, ಮಗು ಅಳೋದು ಕೇವಲ ಹಾಲಿಗಾಗಿ ಮಾತ್ರ ಅಲ್ಲ, ಬೇರೆ ಬಹಳಷ್ಟು ಕಾರಣಗಳು ಇರ್ತಾವೆ. ಮೊದಲ ಆರು ತಿಂಗಳು ಮಗುವನ್ನು ನೋಡಿಕೊಳ್ಳುವುದು ತುಂಬಾ ಕಷ್ಟ. ಮಗುಗೆ ಹುಟ್ಟಿದ ಮೊದಲ ಕೆಲವು ತಿಂಗಳುಗಳು ಅಥವಾ ವರ್ಷ ಆಗುವಷ್ಟರವರೆಗೆ ಏನೋ ಗೊತ್ತಿರುವುದಿಲ್ಲ ಎಂದಿದ್ದಾರೆ ನಟಿ ಶ್ರುತಿ ಹರಿಹರನ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.