ಈ ಬಾರಿ ಬಿಗ್ ಬಾಸ್ ಮನೆಯಿಂದ ಯಾರು ಜೌಟ್ ಆಗಲಿದ್ದಾರೆ ಗೊತ್ತಾ

 | 
Bdhs

ಕನ್ನಡ ಕಿರುತೆರೆಯಲ್ಲಿ ಬಿಗ್‌ಬಾಸ್ ಸೀಸನ್10 ಶೋ ಒಂದು ವಾರ ಪೂರೈಸುತ್ತಾ ಬಂತು. ಈ ಬಾರಿ 17 ಜನ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿದ್ದಾರೆ. ಸಂಭಾವ್ಯರ ಪಟ್ಟಿಯಲ್ಲಿ ಇಲ್ಲದ ಹಲವರು ಈ ಬಾರಿ ಬಿಗ್‌ಬಾಸ್ ಮನೆ ಒಳಗೆ ಹೋಗಿದ್ದು ವಿಶೇಷ. ಸ್ಪರ್ಧಿಗಳ ನಡುವೆ ಗಲಾಟೆ, ಕಿತ್ತಾಟ, ಸ್ನೇಹ, ಟಾಸ್ಕ್ ಎಲ್ಲವೂ ಶುರುವಾಗಿದೆ. 

ಗ್ರ್ಯಾಂಡ್ ಪ್ರೀಮಿಯರ್ ವೇಳೆ ಆಡಿಯನ್ಸ್ ಲೈವ್ ವೋಟಿಂಗ್‌ನಲ್ಲಿ 6 ಜನ ಫೇಲ್ ಆಗಿದ್ದರು. ಅಸಮರ್ಥರು ಎಂದು ಅವರನ್ನು ಗುಂಪು ಮಾಡಿ ಮನೆಯೊಳಗೆ ಕಳುಹಿಸಲಾಗಿದೆ. ಅವರಿಗೆ ಒಂದಷ್ಟು ಷರತ್ತುಗಳನ್ನು ವಿಧಿಸಲಾಗಿದೆ. ಜೊತೆಗೆ ಕೇಸರಿ ಬಣ್ಣದ ಯೂನಿಫಾರ್ಮ್ ನೀಡಿ ಮನೆಯಲ್ಲಿ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಅಂತೂ ಇಂತೂ ಒಂದು ವಾರ ಮುಗಿಯೇ ಹೋಯ್ತು. 

ವಾರದ ಕತೆ ಕಿಚ್ಚನ ಜೊತೆ ಟೈಮ್ ಬಂದಿದೆ. ಕಿಚ್ಚನ ಪಂಚಾಯಿತಿಯಲ್ಲಿ ಯಾರು ಯಾರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ? ಯಾರಿಗೆ ಕಿಚ್ಚನ ಮೆಚ್ಚುಗೆ ಸಿಗುತ್ತದೆ? ಎನ್ನುವುದನ್ನು ಕಾದು ನೋಡಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ 8 ಜನರ ಮೇಲೆ ಎಲಿಮಿನೇಷನ್ ತೂಗುಗತ್ತಿ ನೇತಾಡುತ್ತಿದೆ. ಬಿಗ್‌ಬಾಸ್ ಸೀಸನ್-10 ಶೋನಿಂದ ಮೊದಲ ವಾರ ಯಾರು ಎಲಿಮಿನೇಷನ್ ಆಗಿ ಹೊರಗೆ ಬರುತ್ತಾರೆ? ಎನ್ನುವ ಕುತೂಹಲ ಇದೆ. 

ವೀಕ್ಷಕರು ವೋಟ್ ಮಾಡಿ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಮನೆಯೊಳಗೆ ಉಳಿಸುವ ಅವಕಾಶವೂ ಇದೆ. ಈ ವಾರ ಎಲಿಮಿನೇಷನ್ ಆಗಲು 8 ಜನ ನಾಮಿನೇಟ್ ಆಗಿದ್ದಾರೆ. ಮೈಕೆಲ್, ತನಿಷಾ ಕುಪ್ಪಂಡ, ನೀತು ವನಜಾಕ್ಷಿ, ಸಿರಿ, ಸಂತೋಷ್ ಹಳ್ಳಿಕೆರೆ, ಸ್ನೇಕ್ ಶ್ಯಾಮ್, ಕಾರ್ತಿಕ್, ಡ್ರೋನ್ ಪ್ರತಾಪ್ ಈ ಲಿಸ್ಟ್‌ನಲ್ಲಿದ್ದಾರೆ. ಈ 8 ಜನರಲ್ಲಿ ಯಾರಿಗೆ ಬಿಗ್‌ಬಾಸ್ ಮನೆಯಲ್ಲಿ ಕೊನೆ ದಿನ ಅನ್ನೋದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.

ಮೊದಲ ವಾರದ ಕಳಪೆ ಪಟ್ಟ ಭಾಗ್ಯಶ್ರೀಗೆ ಸಿಕ್ಕಿದೆ. ಅದೇ ರೀತಿ ಉತ್ತಮ ಸ್ಪರ್ಧಿ ಎನ್ನುವ ಪಟ್ಟ ನಟಿ ತನಿಷಾ ಕುಪ್ಪಂಡಗೆ ಸಿಕ್ಕಿದೆ. ಹಾಗಾಗಿ ತನಿಷಾ ಎಲಿಮಿನೇಟ್ ಆಗುವುದು ಅನುಮಾನ ಎನ್ನಲಾಗ್ತಿದೆ. ಇನ್ನುಳಿದಂತೆ ಯಾರೆಲ್ಲಾ ಉತ್ತಮ ಪ್ರದರ್ಶನ ತೋರಿದ್ದಾರೆ? ಯಾರು ವೀಕ್ಷಕರ ಮನ ಗೆದ್ದಿದ್ದಾರೆ? ಎನ್ನುವುದರ ಮೇಲೆ ಈ ವಾರದ ಎಲಿಮಿನೇಟ್ ಯಾರಾಗುತ್ತಾರೆ ಅನ್ನೋದು ತಿಳಿಯಲಿದೆ.

ಕತೆ ಶುರುವಾಗುವ ಮುನ್ನವೇ ಮುಗಿಯೋದು ಯಾರ ಪಾಲಿಗೆ ಅಂತ ಕಲರ್ಸ್ ಕನ್ನಡ ಹೊಸ ಪ್ರೋಮೊ ರಿಲೀಸ್ ಆಗಿದೆ. ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ ಹೊರತು ಪಡಿಸಿ ಬಹುತೇಕರಿಗೆ ಎಲ್ಲರೂ ಹೊಸ ಪರಿಚಯ. ಎಲ್ಲರೂ ತಮ್ಮ ತಮ್ಮ ಪರಿಚಯ ಮಾಡಿಕೊಳ್ಳುವುದರಲ್ಲಿ ವಾರ ಕಳೆದು ಹೋಗಿದೆ. ನಿಧಾನವಾಗಿ ಒಬ್ಬರ ಜೊತೆಗೆ ಒಬ್ಬರು ಬೆರೆಯಲು ಆರಂಭಿಸಿದ್ದಾರೆ. ಕಾಮಿಡಿ, ಗಲಾಟೆ, ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ ಬಿಗ್ಬಾಸ್ ಮನೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.