ಉಮಾಪತಿ ಮುಂದೆ ನಿಲ್ಲೋಕೆ ಕೆಲವರು ಭಯ ಪಡುವುದು ಯಾಕೆ, 'ಈತನ್ ಬಳಿ ಇರುವ ಆಸ್ತಿ ಎಷ್ಟು ಕೋಟಿ ಗೊ.ತ್ತಾ

 | 
ರ್

ನಮ್ಮ ಈ ಐದೂ ಬೆರಳುಗಳು ಹೇಗೆ ಸಮಾನವಾಗಿ ಇರುವುದಿಲ್ಲ. ಹಾಗೆ ಮನುಷ್ಯ ಕೂಡ ಮನುಷ್ಯನ ವ್ಯಕ್ತಿತ್ವವೂ ಕೂಡ ಎಲ್ಲರಲ್ಲಿಯೂ ಸಮಾನತೆ ಯಾಗಿರುವುದಿಲ್ಲ. ಸಿನಿಮಾರಂಗಕ್ಕೆ ಸಾಮಾನ್ಯವಾಗಿ ನಟರಾಗಬೇಕು, ನಟಿಯಾಗಬೇಕು ಅಂತ ಹಲವು ಮಂದಿ ಕನಸು ಹೊತ್ತು ಬರುತ್ತಾರೆ ಅವಕಾಶಗಳಿಗಾಗಿ ಬಹಳಷ್ಟು ಹುಡುಕಾಟ ಕೂಡ ಮಾಡ್ತಾರೆ .ಇಲ್ಲಿಯವರೆಗೂ ಹಲವು ಮಂದಿ ಅವಕಾಶಗಳಿಗಾಗಿ ಬಹಳ ಕಷ್ಟಪಟ್ಟು ದೊಡ್ಡದಾದ ಸ್ಥಾನಕ್ಕೇರಿದ್ದಾರೆ.

 ಆದರೆ ಸಿನಿಮಾರಂಗಕ್ಕೆ ನಾನು ದೊಡ್ಡ ನಿರ್ಮಾಪಕರಾಗಿ ಹೆಸರು ಮಾಡಬೇಕು. ಎಂದು ಬರುವವರ ಸಂಖ್ಯೆ ಬಹಳ ಕಡಿಮೆ ಮತ್ತು ಅತಿ ವಿರಳ ಕೂಡ ಹೌದು. ಹೌದು ಇಂತಹದೊಂದು ಕನಸನ್ನ ಹೊತ್ತು ಸಿನಿಮಾರಂಗಕ್ಕೆ ಬಂದವರಲ್ಲಿ ಉಮಾಪತಿ ಶ್ರೀನಿವಾಸ್ ಅವರು ಕೂಡ ಒಬ್ಬರು. 2017 ರಲ್ಲಿ ಛಾಯಾಗ್ರಾಹಕ ಎಸ್. ಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಂತಹ ಹೆಬ್ಬುಲಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ನಿರ್ಮಾಪಕರಾಗಿ ಬಂದವರು.

ಹೌದು ಕಿಚ್ಚ ಸುದೀಪ್ ಅವರ ಅಭಿನಯದ ಹೆಬ್ಬುಲಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡಿತ್ತು ಕೂಡ ಹಾಗೂ ಹೆಚ್ಚು ಗಳಿಕೆ ಕಂಡಿತ್ತು. ತಮ್ಮ ಮೊದಲ ಚಿತ್ರದ ನಿರ್ಮಾಣದಲ್ಲಿ ಭಾರಿ ಯಶಸ್ಸು ಕಂಡ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಸ್ಟಾರ್ ನಟರೊಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದಾರೆ. ಹಾಗಾಗಿ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದಲ್ಲಿ ದರ್ಶನ್ ಅವರ ಒಟ್ಟಿಗೆ ಚಿತ್ರವೊಂದನ್ನು ನಿರ್ಮಾಣ ಮಾಡುವ ಆಸೆ ಇಟ್ಟಿಕೊಂಡಿದ್ದರು. ಆದರೆ ಪ್ರೇಮ್ ಅವರ ಡೇಟ್ ಸಮಸ್ಯೆಯಿಂದಾಗಿ ಪ್ರೇಮ್ ಅವರ ಜಾಗಕ್ಕೆ ತರುಣ್ ಸುಧೀರ್ ಎಂಟ್ರಿ ಆಗಿ ರಾಬರ್ಟ್ ಸಿನಿಮಾ ಸಟ್ಟೇರಿತು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದಲ್ಲಿ ಮೂಡಿ ಬಂದ ರಾಬರ್ಟ್ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿತು.ದರ್ಶನ್ ಸಿನಿಮಾಗಳು ಅಂದಮೇಲೆ ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡೇ ಮಾಡುತ್ತವೆ. ಇನ್ನೂ ರಾಬರ್ಟ್ ಸಿನೆಮಾದ ಕ್ರೇಜ್ ಕೂಡ ಅಷ್ಟೇ ಇತ್ತೋ ಮತ್ತು ಗಳಿಕೆ ಕೂಡಾ ಹೆಚ್ಚಾಗಿಯೇ ಮಾಡಿತ್ತು ಇದರಿಂದ ಮತ್ತೆ ಗೆಲುವಿನತ್ತ ಮುಖ ಮಾಡಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ದರ್ಶನ್ ಅವರೊಂದಿಗೆ ಬಾಂಧವ್ಯವನ್ನು ಕೂಡ ಉತ್ತಮವಾಗಿ ಬಳಸಿಕೊಂಡರು.
 
ಆದರೆ ಕೆಲವು ತಿಂಗಳುಗಳ ಹಿಂದೆ ನಡೆದ ಘಟನೆಯಿಂದ ದರ್ಶನ್ ಮತ್ತು ಉಮಾಪತಿ ಶ್ರೀನಿವಾಸ್ ಗೌಡ ಅವರ ನಡುವೆ ಮನಸ್ತಾಪ ಉಂಟುಮಾಡಿದೆ. ಅವರ ಹೆಸರನ್ನು ಬಳಸಿಕೊಂಡು ಬರೋಬ್ಬರಿ ಇಪ್ಪತ್ತೈದು ಕೋಟಿ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಿಸಿ ನಟ ದರ್ಶನ್ ಅವರನ್ನೇ ಶ್ಯೂರಿಟಿಯಾಗಿ ಮಾಡಿದ್ದರು ಎಂಬ ವಿಚಾರ ಭಾರಿ ಸುದ್ದಿ ಆಗಿ ದರ್ಶನ್ ಆಪ್ತರ ನಡುವೆ ಕಂದಕ ಸೃಷ್ಟಿಯಾಗಿದೆ. ಈ ವಿವಾದದ ನಡುವೆ ಪರಸ್ಪರ ತಮ್ಮ ಹೇಳಿಕೆ ನೀಡುವುದರ ಮೂಲಕ ಆಪ್ತ ಸ್ನೇಹಿತರು ಸದ್ಯದ ಮಟ್ಟಿಗೆ ಅಂತರ ಕಾಯ್ದುಕೊಂಡಿದ್ದಾರೆ.

ಇನ್ನು ನಿರ್ಮಾಪಕ ಶ್ರೀನಿವಾಸ್ ಗೌಡ ಅವರು ಶ್ರೀ ಮುರುಳಿ ನಟಿಸಿರುವ ಮದಗಜ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.  ಉಮಾಪತಿ ಶ್ರೀನಿವಾಸ್ ಗೌಡ ಅವರು ಮೂಲತಃ ಬೆಂಗಳೂರಿನವರೇ ಆಗಿದ್ದಾರೆ ಆಗರ್ಭ ಶ್ರೀಮಂತ ಕುಟುಂಬ ಹಿನ್ನೆಲೆಯನ್ನು ಹೊಂದಿರುವ ಉಮಾಪತಿ ಅವರು ಇತ್ತೀಚೆಗೆ ಖಾಸಗಿ ವಾಹಿನಿಯಲ್ಲಿ ಅವರೇ ತಿಳಿಸಿರುವ ಹಾಗೆ ಬೆಂಗಳೂರು ನಗರದಲ್ಲಿ ತಮಗೆ ನೂರಾರು ಎಕರೆ ಆಸ್ತಿ ಇದೆ ಎಂದು ಸಹ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.