ಕೊರಗಜ್ಜನಿಗೆ ಹರಕೆ ಹೊತ್ತ ಕೆಲ ಗಂಟೆಗಳಲ್ಲಿ ಚೈತ್ರ ಉಂಗುರ ಸಿಕ್ಕಿತ್ತು; ಹಿಂದೂ ಹುಲಿ ಚೈತ್ರ ಸ್ಪಷ್ಟತೆ
Nov 15, 2024, 12:25 IST
|

ಹೌದು.. ಬಿಗ್ ಬಾಸ್’ ಮನೆಯಲ್ಲೀಗ ಜೋಡಿ ಟಾಸ್ಕ್ ಚಾಲ್ತಿಯಲ್ಲಿದೆ. ಜೋಡಿಗಳಿಗೆ ಕೆಸರಿನ ಟಾಸ್ಕ್‌ನ ‘ಬಿಗ್ ಬಾಸ್’ ನೀಡಿದ್ದರು. ಟಾಸ್ಕ್ ಆಡುವ ಭರದಲ್ಲಿ ಕೈಯಲ್ಲಿದ್ದ ಉಂಗುರವನ್ನ ಚೈತ್ರಾ ಕುಂದಾಪುರ ಕಳೆದುಕೊಂಡರು. ಕೆಸರಿನಿಂದಾಗಿ ಕೈಬೆರಳಿನಲ್ಲಿದ್ದ ಉಂಗುರ ಆಚೆ ಬಂದುಬಿಡ್ತು. ಅದಾಗಲೇ ಕೆಸರೆರಚಾಟ ನಡೆದಿದ್ದ ಕಾರಣ ಉಂಗುರ ಎಲ್ಲಿ ಮಿಸ್ ಆಯ್ತು ಅಂತ ಹುಡುಕೋದೇ ಕಷ್ಟವಾಗಿಬಿಡ್ತು.
ತಮ್ಮ ಕೈಬೆರಳಿನಲ್ಲಿ ಉಂಗುರ ಇಲ್ಲ ಎಂದು ಅರಿವಿಗೆ ಬಂದ ಕೂಡಲೆ ಚೈತ್ರಾ ಕುಂದಾಪುರ ಗಾಬರಿಗೊಂಡರು. ಯಾಕಂದ್ರೆ, ಆ ಉಂಗುರವನ್ನ ಚೈತ್ರಾಗೆ ಕೊಟ್ಟಿದ್ದು ಅವರ ಹುಡುಗ! ‘ಮದುವೆಯನ್ನ ಫಿಕ್ಸ್ ಮಾಡಿಕೊಂಡೇ ಇಲ್ಲಿಗೆ ಬಂದಿದ್ದೇನೆ’ ಎಂದು ಈ ಹಿಂದೆ ಚೈತ್ರಾ ಕುಂದಾಪುರ ಹೇಳಿದ್ದರು. ಹೀಗಾಗಿ, ತಮ್ಮ ಜೀವನದ ಬಹುಮುಖ್ಯವಾದ ಉಂಗುರವನ್ನ ಕಳೆದುಕೊಂಡ ಚೈತ್ರಾ ಕುಂದಾಪುರಗೆ ಆತಂಕ ಆವರಿಸಿತು.
ಚೈತ್ರಾ ಕುಂದಾಪುರ ಅವರ ಉಂಗುರಕ್ಕಾಗಿ ಎಲ್ಲರೂ ಹುಡುಕಾಡಿದರು. ಸಿಗದಿದ್ದಾಗ ಬಿಗ್ ಬಾಸ್’ ಬಳಿ ಚೈತ್ರಾ ಕುಂದಾಪುರ ಮನವಿ ಮಾಡಿದರು. ಅದು ತುಂಬಾ ಇಂಟಾರ್ಟೆಂಟ್ ಉಂಗುರ. ದಯವಿಟ್ಟು ಹುಡುಕಿಸಿಕೊಡಿ ಎಂದು ಚೈತ್ರಾ ಕುಂದಾಪುರ ಕೇಳಿಕೊಂಡರು.ಉಂಗುರ ವಾಪಸ್ ಸಿಗುವಂತೆ ಕೊರಗಜ್ಜನ ಬಳಿಯೂ ಚೈತ್ರಾ ಕುಂದಾಪುರ ಪ್ರಾರ್ಥಿಸಿದರು.
ಅಚ್ಚರಿ ಎಂಬಂತೆ ಕೆಲವೇ ಕ್ಷಣಗಳಲ್ಲಿ ಚೈತ್ರಾ ಕುಂದಾಪುರಗೆ ‘ಬಿಗ್ ಬಾಸ್’ ಉಂಗುರ ಕಳುಹಿಸಿಕೊಟ್ಟರು. ತಮ್ಮ ಉಂಗುರ ಕಂಡು ಚೈತ್ರಾ ಕುಂದಾಪುರ ಸಂತಸ ಪಟ್ಟರು. ‘ಬಿಗ್ ಬಾಸ್’ಗೆ ಮತ್ತು ‘ಕೊರಗಜ್ಜ’ನಿಗೆ ಚೈತ್ರಾ ಕುಂದಾಪುರ ಧನ್ಯವಾದ ತಿಳಿಸಿದರು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadutech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025