11 ಮಂದಿ ನಟರ ಜೊತೆ ಡೇಟಿಂಗ್ ಮಾಡುತ್ತಿರುವ ಯಶ್ ಜೊತೆ ನಟಿಸಿದ ಜನಪ್ರಿಯ ನ ಟಿ

 | 
Hs

ಬಾಲಿವುಡ್‌ನ ಖ್ಯಾತ ನಟಿ ಸುಶ್ಮಿತಾ ಸೇನ್  ಅವರು ಹಿಂದಿ ಚಲನಚಿತ್ರಗಳಲ್ಲಿ ತಮ್ಮ ನಟನೆ ಮತ್ತು ಸಿನಿಮಾಗಳಿಂದಾಗಿ ಸೂಪರ್ ಜನಪ್ರಿಯರಾಗಿದ್ದಾರೆ. ಸುಶ್ಮಿತಾ ತೆಲುಗಿನಲ್ಲಿ ನಾಗಾರ್ಜುನ ಎದುರು ರಕ್ಷಕುಡು ಚಿತ್ರದಲ್ಲೂ ನಟಿಸಿದ್ದರು. ಸದ್ಯ ಅವರು ಒಂದೇ ಒಂದು ಟ್ವೀಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದಾರೆ.

ಸುಶ್ಮಿತಾ ಸೇನ್ ಪ್ರಸಿದ್ಧ ವ್ಯಕ್ತಿಗಳೊಂದಿಗೆ ರಿಲೇಶನ್‌ಶಿಪ್‌ ಹೊಂದಿದ್ದಕ್ಕಾಗಿಯೂ ಸುದ್ದಿಯಲ್ಲಿದ್ದಾರೆ, ಆದರೆ ಅವರು ಯಾರನ್ನೂ ಇಲ್ಲಿಯವರೆಗೆ ಮದುವೆಯಾಗಿಲ್ಲ. ಲಲಿತ್ ಮೋದಿ, ಸಂಜಯ್ ನಾರಂಗ್, ರಣದೀಪ್ ಹೂಡಾ, ಇಮ್ತಿಯಾಜ್ ಖತ್ರಿ, ವಾಸಿಂ ಅಕ್ರಮ್ ಮತ್ತು ಮುದಸ್ಸರ್ ಅಜೀಜ್ ಸೇರಿದಂತೆ 11 ಜನರೊಂದಿಗೆ ಸುಶ್ಮಿತಾ ಡೇಟಿಂಗ್ ನಡೆಸಿದ್ದಾರೆ. ಇತ್ತೀಚೆಗೆ ಅವರು ರೋಹ್ಮನ್ ಶಾಲ್ ಅವರೊಂದಿಗೆ ಕಾಣಿಸಿಕೊಂಡಿದ್ದರು, ಈಗ ಅವರೊಂದಿಗಿನ ಸಂಬಂಧವೂ ಬ್ರೇಕ್ಅಪ್‌ ಆಗಿದೆ ಎಂದು ಹೇಳಲಾಗ್ತಿದೆ.

ಮಿಸ್ ಯೂನಿವರ್ಸ್ ಪಟ್ಟ ಗೆದ್ದ ನಟಿ ಸುಶ್ಮಿತಾ ಸೇನ್ ಅವರ ವೃತ್ತಿಜೀವನದ ಪ್ರಸ್ತುತ ಉತ್ತುಂಗದಲ್ಲಿದೆ. 'ತಾಲಿ' ಮತ್ತು ಆರ್ಯ 3 ಚಿತ್ರಗಳಲ್ಲಿ ಅವರ ನಟನೆಗೆ ಉತ್ತಮ ಮೆಚ್ಚುಗೆ ಸಿಕ್ಕಿದೆ. ಸುಶ್ಮಿತಾ ಅವರು ಅವಿವಾಹಿತರಾಗಿದ್ದರೂ ಸಹ ಇಬ್ಬರು ಹೆಣ್ಣು ಮಕ್ಕಳ ತಾಯಿ. ಕೆಲವು ದಿನಗಳ ಹಿಂದೆ, ಸುಶ್ಮಿತಾ ಅವರು ತನ್ನ ಮಗಳು ರೆನೀ ಸೇನ್‌ಗಾಗಿ ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ಜೊತೆಗಿನ ಸಿನಿಮಾವನ್ನು ಕೈಬಿಡಬೇಕಾಯಿತು ಎಂದು ಹೇಳಿದ್ದರು.

ಸಂದರ್ಶನವೊಂದರಲ್ಲಿ, ಸುಶ್ಮಿತಾ ಅವರು ತಮ್ಮ ಮಗಳು ರಿನಿ ಸೇನ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಮತ್ತು ಆಕೆ ಆಸ್ಪತ್ರೆಗೆ ದಾಖಲಾಗಿದ್ದರಿಂದ ಚಿತ್ರದ ಚಿತ್ರೀಕರಣವನ್ನು ಅರ್ಧದಲ್ಲಿಯೇ ಬಿಡಬೇಕಾಯಿತು ಎಂದು ಹೇಳಿದ್ದರು. ತನ್ನ 24 ನೇ ವಯಸ್ಸಿನಲ್ಲಿ ಸುಶ್ಮಿತಾ ಸೇನ್ ಅವರು ಪುಟ್ಟ ಹೆಣ್ಣು ಮಗಳನ್ನು ದತ್ತು ಪಡೆದ ಕಾರಣ ತನ್ನ ವೃತ್ತಿಜೀವನವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪವೂ ಅವರ ಮೇಲೆ ಬಂದಿತ್ತು.

ಆದರೆ ತನ್ನ ದತ್ತು ಮಗಳು ಅನಾರೋಗ್ಯದಿಂದ ಇದ್ದಾಗ ಸುಶ್ಮಿತಾ ಸೇನ್ ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೆ ಫ್ಲೈಟ್ ಹತ್ತಿ ಮಗಳ ಬಳಿ ಬಂದಿದ್ದರು. ಸಿನಿಮಾ ನಿರ್ಮಾಪಕರು ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರು, ಆದ್ದರಿಂದ ಅವರು ಸುಶ್ಮಿತಾರನ್ನು ತಡೆಯಲಿಲ್ಲ. ಸುಶ್ಮಿತಾ 2000ನೇ ಇಸವಿಯಲ್ಲಿ ರಿನಿ ಎಂಬ 6 ತಿಂಗಳ ಹೆಣ್ಣು ಮಗುವನ್ನು ದತ್ತು ಪಡೆದಿದ್ದರು. ಅದೇ ಸಮಯದಲ್ಲಿ, ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ಅಜ್ಞಾಬಿ ಮತ್ತು ಐತ್ರಾಜ್  ಚಿತ್ರಗಳಿಗೂ ಸಹಿ ಹಾಕಿದ್ದರು. ಅದೇ ಸಮಯದಲ್ಲಿ ಮಗಳಿಗೆ ಹುಷಾರಿಲ್ಲದ ಕಾರಣ ಅವರು ಒತ್ತಡಕ್ಕೆ ಸಿಲುಕಿದ್ದರು.