ಹನುಮಂತನ ಹಾಡಿಗೆ ಜಮೀರ್ ಅಹ್ಮದ್ ಭಾವುಕ, ಹಳೆ ದಿನಗಳ ನೆನಪು ಕಣ್ಣಾಮುಂದೆ

 | 
ಕ್
ಹಂಪಿ ಉತ್ಸವ ಜೋರಾಗಿ ನಡೆಯುತ್ತಿದೆ. ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಬಿಗ್ ಬಾಸ್​ ವಿನ್ನರ್ ಹನುಮಂತ ಕೂಡ ಅತಿಥಿಯಾಗಿ ಬಂದಿದ್ದಾರೆ. ವೇದಿಕೆಯಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ ಉತ್ತರ ಕರ್ನಾಟಕದ ಹುಲಿಗೆ ಜೈ ಎಂದು ಜೈಕಾರ ಹಾಕಲಾಗಿದೆ. ಎಲ್ಲಿ ಹುಲಿ ಬಿಡೋ ಮಾರಾಯ. ನಿದ್ದಿ ಕೆಟ್ಟು ಇಲಿ ಆಗೇನಿ ಎಂದರು ಹನುಮಂತ. ವೋಟ್ ಮಾಡಿ ಬಿಗ್ ಬಾಸ್ ಶೋನಲ್ಲಿ ತಮ್ಮನ್ನು ಗೆಲ್ಲಿಸಿದ ಜನತೆಗೆ ಅವರು ಧನ್ಯವಾದ ತಿಳಿಸಿದರು.
ಈ ಬಾರಿಯ ಬಿಗ್‌ಬಾಸ್ ವಿಜೇತ ಹನುಮಂತ ಹಂಪಿಯ ವೇದಿಕೆಯಲ್ಲಿ ತನ್ನ ಎಂದಿನ ಶೈಲಿಯ ಜಾನಪದ ಮತ್ತು ಶಿಶುನಾಳ ಷರೀಫರ ಹಾಡು ಹೇಳಿ ಮೋಡಿ ಮಾಡಿಬಿಟ್ಟರು.
ಕೇಳೋ ಜಾಣ ಶಿವಧ್ಯಾನ ಮಾಡಣ್ಣ, ನಿನ್ನೊಳಗೆ ನೀನು ತಿಳಿದು ನೋಡಣ್ಣ, ಬಡವನ ಮಗಳಾದರೂ ಕಪ್ಪಾಗಿರಬಾರದು, ನಿನ್ನ ಮಾರಿ ನೋಡಂಗ ಆಗೈತಿ ಹಾಡುಗಳನ್ನು ಹಾಡಿದಾಗ ಜನ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಿದರು. ಇನ್ನು ಅಲ್ಲಿಯೇ ಕುಳಿತಿದ್ದ ಮಂತ್ರಿ ಜಮೀರ್ ಅಹ್ಮದ್ ಅವರ ಕಣ್ಣಲ್ಲಿ ಕಣ್ಣೀರುಧಾರೆಯಾಗಿ ಹರಿದಿತ್ತು.
ಈ ವೇಳೆ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಜಮೀರ್ ಅಹ್ಮದ್, ಸಿಎಂ ಸಿದ್ದರಾಮಯ್ಯ ಅವರು ಹಂಪಿ ಉತ್ಸವಕ್ಕೆ ಬರಬೇಕಿತ್ತು. ಅವರು ನನ್ನೊಂದಿಗೆ ಮಾತನಾಡುವಾಗ ಈ ಬಾರಿ ಹಂಪಿ ಉತ್ಸವ ನೋಡಬೇಕು. ಬರುವ ಆಸೆ ತುಂಬಾ ಇದೆ. ಆದರೆ ನನಗೆ ಕಾಲು ನೋವಿನಿಂದಾಗಿ ಉತ್ಸವಕ್ಕೆ ಬರಲು ಆಗುವುದಿಲ್ಲ. ಹಾಗಾಗಿ ನನ್ನ ಕಡೆಯಿಂದ ಕ್ಷಮೆಯನ್ನು ಕೇಳು ಎಂದು ಹೇಳಿದ್ದಾರೆ ಎಂದು ಹೇಳಿದರು.
ಉತ್ಸವದಲ್ಲಿ ಐದು ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾವಿರಾರು ಜನ ಸೇರಿದ್ದರು. ನಟ ರಮೆಶ್, ಪೂಜಾ ಗಾಂಧಿ ಮತ್ತು ಪ್ರೇಮ ಹಾಡು ಹಾಡಿ ನೆರೆದವರನ್ನು ರಂಜಿಸಿದರು. ಅಲ್ಲದೆ ಸಂಜೆ ಕಾರ್ಯಕ್ರಮದಲ್ಲಿ ಅನೇಕ ಜನ ಭಾಗಿಯಾಗಿದ್ದು ಕಂಡು ಬಂದಿದೆ. ಅಲ್ಲದೆ ಮೂರು ದಿನ ದೂರದೂರುಗಳಿಂದಲೂ ಜನ ಸೇರುವ ಸಾಧ್ಯತೆ ಇದೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.