ಇಬ್ಬರ ನಡುವೆ ನಡೆದಿತ್ತಾ ಆ ಕೆಲಸ, ಆಯ್ನಾಜ್ ಮೇಲಿನ ದ್ವೇಷಕ್ಕೆ ನಾಲ್ವರ ಕೊ.ಲೆ

 | 
Hd

ಎರಡು ದಿನಗಳ ಹಿಂದೆ ಉಡುಪಿಯಲ್ಲಿ ಬೆಚ್ಚಿ ಬೀಳಿಸಿದ್ದ ಘಟನೆಗೆ ಮೂಲ ಕಾರಣವಾಗಿದ್ದ ಅಪರಾಧಿಯೀಗ ಪೊಲೀಸರ ಕೈಗೆ ಸಿಕ್ಕಿದ್ದು ಒಂದೊಂದೇ ಕಾರಣಗಳು ಹೊರಗೆ ಬರ್ತಿವೆ. ಹೌದು ಈ ಕೊಲೆ ನಡೆದಿದ್ದು ಹಣಕ್ಕೆಂದು ಕೆಲವರು ಹೇಳಿದರೆ ಇನ್ನು ಕೆಲವರು ಇದು ಪಕ್ಕಾ ಕುಟುಂಬ ಸಮಸ್ಯೆ ಎಂದು ಹೇಳುತ್ತಿದ್ದರು. 

ಸದ್ದಿಲ್ಲದೆ ಬಂದು ಉಡುಪಿಯ ನೇಜಾರಿನಲ್ಲಿ ಗಗನಸಖಿ ಸೇರಿದಂತೆ ಒಂದೇ ಕುಟುಂಬದ ನಾಲ್ವರ‌ನ್ನು ಹತ್ಯೆಗೈದು ಹೋಗಿದ್ದ. ಪ್ರವೀಣ್ ಮೂಲತಃ ಮಹಾರಾಷ್ಟ್ರದ  ಸಾಂಗ್ಲಿಯವನಾಗಿದ್ದು, ಭಾನುವಾರ ಘಟನೆಯ ಬಳಿಕ ಕುಡಚಿಯ ನೀರಾವರಿ ಇಲಾಖೆ ಅಧಿಕಾರಿ ಸಂಬಂಧಿ ಮನೆಯಲ್ಲಿ ತಲೆಮರೆಸಿಕೊಂಡಿದ್ದ. 

ಇಂದು ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಲು ಮುಂದಾಗಿದ್ದ ವೇಳೆ ಕುಡಚಿ ಪೊಲೀಸರ ಸಹಾಯದಿಂದ ಮಿಂಚಿನ ಕಾರ್ಯಚರಣೆ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರವೀಣ್ ಮಂಗಳೂರ ವಿಮಾನ ನಿಲ್ದಾಣದ ಸಿಆರ್‌ಪಿಎಸ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಅಲ್ಲಿ ಅಯ್ನಾಜ್‌ ಪರಿಚಯವಾಗಿತ್ತು.
ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರವೀಣ್ ಚೌಗಲೆ  ಎಂಬಾತನನ್ನು ಬಂಧಿಸಿದ್ದು, ಆತನ ಬಂಧನದ ಬಳಿಕ ಕೆಲವು ಸಂಗತಿಗಳು ಬೆಳಕಿಗೆ ಬಂದಿವೆ. 

ಪ್ರವೀಣ್ ಚೌಗಲೆ ಮತ್ತು ಹತ್ಯೆಯಾದ ಗಗನಸಖಿ ಅಯ್ನಾಜ್‌ ಅವರು ಸಹೋದ್ಯೋಗಿಗಳಾಗಿದ್ದರು ಎಂದು ತಿಳಿದು ಬಂದಿದೆ. ಇನ್ನು ಅಯ್ನಾಜ್‌ ಮತ್ತು ಆರೋಪಿ ಪ್ರವೀಣ್ ನಡುವಿನ ಪ್ರೇಮದಿಂದ ಒಂದೇ ಕುಟುಂಬದ ನಾಲ್ವರ ಹತ್ಯೆ ನಡೆದಿದೆ ಎನ್ನಲಾಗುತ್ತಿದ್ದು ಈ ಬಗ್ಗೆ ಪೊಲೀಸರು ಎಲ್ಲಾ ರೀತಿಯ ತನಿಖೆಯನ್ನು ನಡೆಸುತ್ತಿದ್ದಾರೆ.

ಅವನು ಕೇವಲ ಒಬ್ಬರನ್ನು ಕೊಲ್ಲಲು ಹೋಗಿದ್ದ ಅವರು ತಡೆಯಲು ಬಂದಾಗ ಇತರರನ್ನು ಕೊಂದಿದ್ದಾನೆ. ಆಯ್ನಾಝ್ ಕೊಲ್ಲಲು ಹೋದಾಗ ಇತರರನ್ನು ಕೊಂದಿದ್ದಾನೆ‌. ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರೂ ಆಯ್ನಾಝ್ ಮೇಲೆ ಪ್ರೀತಿ ಹೊಂದಿದ್ದ. 

ಹಾಗಾಗಿ ಸಾಕ್ಷ್ಯಾಧಾರ ನಾಶದ ಕಾರಣ ಇತರ ಕೊಲೆ ಮಾಡಿದ್ದಾನೆ ಎಂಬುವುದು ಸಾಬೀತಾಗಿದೆ. ಕೊಲೆಗೆ ಚಾಕು ಬಳಸಿದ್ದ. ಇದೊಂದು ಪೂರ್ವನಿಯೋಜಿತವಾಗಿ ಕೃತ್ಯ ಎಂದು ಪೋಲಿಸರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.