ರೂಪೇಶ್ ಶೆಟ್ಟಿ ಮನೆಯಲ್ಲಿ ರಾತ್ರಿ ಹೊತ್ತು ಏನು ಕಾಣಿಸುತ್ತದೆ ಗೊತ್ತಾ, ಕತ್ತಲಾದರೆ ರೂಪೇಶ್ ಶೆಟ್ಟಿ ಭಯ ಯಾಕೆ

 | 
ಪರ

ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ. ರೂಪೇಶ್ ಆಟಕ್ಕೆ ಇಡೀ ಕರ್ನಾಟಕ ಜನತೆಯ ಮೆಚ್ಚುಗೆ ಸೂಚಿಸಿದ್ದಾರೆ. ತಾಯ್ನಾಡು ಮಂಗಳೂರಿಗೆ ಕಾಲಿಟ್ಟಿರುವ ರೂಪೇಶ್, ತಮ್ಮ ಗೆಲುವನ್ನು ಕೊರಗಜ್ಜನ ದೇವರಿಗೆ ಸಮರ್ಪಿಸಿದ್ದಾರೆ. ಕೊರಗಜ್ಜನ  ಸನ್ನಿಧಾನಕ್ಕೆ ರೂಪೇಶ್‌ ಭೇಟಿ ನೀಡಿದ್ದಾರೆ. ಒಟಿಟಿಯಿಂದ ಟಿವಿ ಬಿಗ್ ಬಾಸ್ ಶೋನ ವಿನ್ನರ್ ಆಗಿ ರೂಪೇಶ್ ಶೆಟ್ಟಿ  ಜಯಭೇರಿ ಬಾರಿಸಿದ್ದಾರೆ. 

ಮಂಗಳೂರಿಗೆ  ಅದ್ದೂರಿಯಾಗಿ ಎಂಟ್ರಿ ಕೂಡ ಪಡೆದಿದ್ದಾರೆ. ಈ ವೇಳೆ ಬಿಗ್ ಬಾಸ್ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ನಾನು ಕೊರಗಜ್ಜ ದೇವರನ್ನು ತುಂಬ ಆರಾಧನೆ ಮಾಡುತ್ತೇನೆ. ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡುವಾಗ ಕೊರಗಜ್ಜನ ಹೆಸರು ಹೇಳುತ್ತಿದ್ದೆ. ನಾನು ಗೆಲ್ಲುವುದು ಬೇಡ, ಕನಿಷ್ಠ ಪಕ್ಷ ಟಾಪ್ 5ರಲ್ಲಿ ಬಂದರೂ ಕೂಡ ಮೊದಲು ಹೋಗುವುದು ಕೊರಗಜ್ಜ ಕ್ಷೇತ್ರಕ್ಕೆ ಅಂದುಕೊಂಡಿದ್ದೆ. ಆದರೆ ಬಿಗ್ ಬಾಸ್‌ನಲ್ಲಿ ನನ್ನನ್ನು ಅವರೇ ಗೆಲ್ಲಿಸಿದ್ದಾರೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಕರಾವಳಿ ಮಂಗಳೂರಿಗೆ ಬಂದ ರೂಪೇಶ್ ಶೆಟ್ಟಿಗೆ ಹುಲಿ ವೇಷದ ಕಲಾವಿದರು ಸ್ವಾಗತ ಕೋರಿದ್ದಾರೆ. ರಗ

ಅದು ಅವರಿಗೆ ಹೆಚ್ಚು ಸಂತಸ ತಂದಿದೆ. ಆ ಬಗ್ಗೆಯೂ ಅವರು ಮಾತನಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನನಗೆ ಹುಲಿ ವೇಷ ಎಂದರೆ ಇಷ್ಟ. ತುಳುನಾಡಿನ ಈ ಸಂಸ್ಕೃತಿಕ ಕಲೆಯನ್ನು ಬಿಗ್ ಬಾಸ್ ಮನೆಯಲ್ಲಿ ಪ್ರದರ್ಶನ ಮಾಡಲು ಅವಕಾಶ ಸಿಕ್ಕಿತು. ಇಲ್ಲಿಯೂ ಹುಲಿವೇಷವನ್ನು ನನ್ನ ಸ್ನೇಹಿತರು ಪ್ಲ್ಯಾನ್ ಮಾಡಿದ್ದಾರೆ. ನಾನು ಇದನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ತಾವು ಗೆದ್ದಿರುವ ಹಣದಲ್ಲಿ ಕೊರಗಜ್ಜ ದೈವಕೋಲ ಮಾಡಿಸುವುದಾಗಿ ಹೇಳಿಕೊಂಡಿದ್ದಾರೆ. ಸದ್ಯದಲ್ಲೇ ದೈವಾರಾಧನೆ ಕಾರ್ಯರೂಪಕ್ಕೆ ಬರಲಿದೆ.ಅಲ್ಲದೇ ಟಿವಿ ಸಂದರ್ಶನ ಒಂದರಲ್ಲಿ ಮಾತನಾಡಿದ ರೂಪೇಶ್ ಶೆಟ್ಟಿ ನನಗೆ ಮೊದಲಿನಿಂದಲೂ ಕತ್ತಲಲ್ಲಿ ಮಲಗುವುದೆಂದರೆ ಭಯ.ರಕ

ಬಹಳ ಹಿಂದಿನಿಂದಲೂ ಆ ಭಯ ತಲೆಯಲ್ಲಿ ಉಳಿದಿರುವ ಕಾರಣ ಒಬ್ಬನೇ ಕತ್ತಲಲ್ಲಿ ನಿದ್ರಿಸಲು ಕೂಡ ಭಯ ಎಂದಿದ್ದಾರೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಸಿ ಶೋ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ 60 ಲಕ್ಷ ರೂಪಾಯಿ ಮತ್ತು ಟ್ರೋಫಿ ಗಿಟ್ಟಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ವಿನ್ನರ್‌ಗಳು ಗೆದ್ದಿರುವ ಹಣದಿಂದ ಸಮಾಜ ಸೇವೆ ಮಾಡುವುದಾಗಿ, ಸ್ವಂತ ಮನೆ ಕಟ್ಟಿಸುವುದಾಗಿ ನೂರಾರು ಕನಸುಗಳನ್ನು ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಳ್ಳುತ್ತಾರೆ. ಅದರಂತೆ ರೂಪಿ ಕೂಡ ಮೊದಲು ನನ್ನ ಭವಿಷ್ಯ ರೂಪಿಸಿಕೊಳ್ಳುತ್ತೇನೆ ಎಂದು ಬಂದ ಹಣವನ್ನು ಬಳಸುವುದರ ಕುರಿತಾಗಿ ಮಾತಾಡಿದ್ದಾರೆ.ರಕ
(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.