ಪರಪುರುಷನ ಜೊತೆ ಏಕಾಂತದಲ್ಲಿದ್ದ ಮಗಳಿಗೆ ಬಿತ್ತು ಗೂಸಾ, ಸ್ಥಳದಿಂದ ಪರಾರಿಯಾದ ಹುಡುಗ

ಇವತ್ತಿನ ಕಾಲದಲ್ಲಿ ಎಲ್ಲರಿಗೂ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್ ಇದ್ದೇ ಇರ್ತಾರೆ. ಆದ್ರೆ ಹಿಂದೆಲ್ಲಾ ಲವ್ ಮ್ಯಾರೇಜ್ ಅನ್ನೋ ಕಾನ್ಸೆಪ್ಟ್ ಕಡಿಮೆಯಿತ್ತು. ಅದರಲ್ಲೂ ಭಾರತದಲ್ಲಿ ಸ್ಟ್ರಿಕ್ಟ್ ಪೇರೆಂಟಿಂಗ್‌ಗೇ ಹೆಚ್ಚು. ಪೋಷಕರು ತಮ್ಮ ಮಕ್ಕಳು ಹದ್ದುಬಸ್ತಿನಲ್ಲಿ ಬೆಳೆಸ್ತಿದ್ರು. ಗಂಡು ಮಕ್ಕಳು ಕೆಟ್ಟ ಅಭ್ಯಾಸ ಬೆಳೆಸಿಕೊಳ್ಳಬಾರದು, ಹೆಣ್ಣು ಮಕ್ಕಳು ತಲೆಯೆತ್ತಿ ನಡೀಬಾರದು, ಗಂಡು ಮಕ್ಕಳ ಜೊತೆ ಮಾತನಾಡಬಾರದು ಎಂಬೆಲ್ಲಾ ಷರತ್ತನ್ನು ವಿಧಿಸ್ತಿದ್ರು.
ಮಗ, ಮಗಳು ಯಾರನ್ನೋ ಲವ್ ಮಾಡ್ತಿದ್ದಾರೆ ಅಂತ ಗೊತ್ತಾದ್ರೆ ಆಕಾಶ-ಭೂಮಿ ಒಂದ್ ಮಾಡಿಬಿಡ್ತಿದ್ರು. ಮಕ್ಕಳು ವಯಸ್ಸಿಗೆ ಬಂದಾಗ ಪೋಷಕರೇ ಗಂಡು-ಅಥವಾ ಹೆಣ್ಣನ್ನು ಹುಡುಕಿ ಮದುವೆ ಮಾಡೋದು ರೂಢಿಯಾಗಿತ್ತು. ಆದ್ರೆ ಈಗ ಸಾಮಾನ್ಯವಾಗಿ ಎಲ್ಲಾ ಪೋಷಕರು ಸಹ ಲವ್ ಮ್ಯಾರೇಜ್‌ನ್ನು ಒಪ್ಪಿಕೊಳ್ತಿದ್ದಾರೆ. ಅವರೇ ನಿಂತು ಮದುವೆ ಮಾಡಿಕೊಡುತ್ತಾರೆ.
ಪೋಷಕರು ಸಹ ಲವ್ ಮ್ಯಾರೇಜ್ ಅಂದ್ರೆ ಗಾಬರಿಗೊಳ್ಳೋದು, ಮಕ್ಕಳಿಗೆ ಬೈಯೋದು, ಮನೆಯಲ್ಲಿ ಕೂಡಿ ಹಾಕೋದು ಮಾಡ್ತಿಲ್ಲ. ಎರಡೂ ಕುಟುಂಬದವರು ಮಾತನಾಡಿ ಮದುವೆ ಮಾಡಿಕೊಡ್ತಾರೆ ಅಷ್ಟೆ. ಆದರೆ ಹೀಗೆ ಬದಲಾಗಿರುವ ಪೋಷಕರ ಮಧ್ಯೆಯೂ ಇಲ್ಲೊಬ್ಬ ತಾಯಿ
ಬಾಯ್‌ಫ್ರೆಂಡ್ ಇದ್ದಾನೆ ಅನ್ನೋ ಕಾರಣಕ್ಕೆ ತನ್ನ ಮಗಳಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಾಯ್‌ಫ್ರೆಂಡ್ ಇದ್ದ ಕಾರಣಕ್ಕೆ ಮಗಳನ್ನು ಹೊಡೆಯುತ್ತಿರುವ ತಾಯಿಯ ವಿಡಿಯೋ ಟ್ವಿಟರ್‌ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಬಾಯ್ ಫ್ರೆಂಡ್ ಇದ್ದಾನೆ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ತನ್ನ ಮಗಳನ್ನು ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದು ಯಾವುದೇ ಕಾರಣಕ್ಕಾಗಿರಲಿ ಪೋಷಕರು ತಮ್ಮ ಮಕ್ಕಳನ್ನು ಹೀಗೆ ಹೊಡೆಯುವುದನ್ನು ಎಷ್ಟು ಸರಿ ಎಂದು ಇದು ಕಳವಳವನ್ನು ಹುಟ್ಟುಹಾಕಿದೆ. ಮಗಳಿಗೆ ಬಾಯ್‌ಫ್ರೆಂಡ್ ಇದ್ದಾನೆ ಎಂದು ತಿಳಿದ ಕೂಡಲೇ ತಾಯಿ ಮಗಳಿಗೆ ಕಪಾಳಮೋಕ್ಷ ಮಾಡುತ್ತಾಳೆ. ಹೊಡೆಯದಂತೆ ಮಗಳು ಪದೇ ಪದೇ ಕೇಳಿಕೊಂಡರೂ ತಾಯಿ ಮತ್ತೆ ಮತ್ತೆ ಹೊಡೆಯುವುದನ್ನು ನೋಡಬಹುದು. ಮಗಳು ಅಳುತ್ತಾ ಏನನ್ನೋ ವಿವರಿಸುತ್ತಿದ್ದರೂ ತಾಯಿ ತನ್ನ ಮಗಳನ್ನು ನಿರ್ದಯವಾಗಿ ಹೊಡೆಯುತ್ತಲೇ ಇರುತ್ತಾಳೆ. ನಂತರ ಅವಳನ್ನು ಕೋಣೆಯಿಂದ ಹೊರಗೆ ಎಳೆದುಕೊಂಡು ಹೋಗುತ್ತಾಳೆ. ಈ ವಿಡಿಯೋ ಅಪ್ಲೋಡ್ ಆದ ನಂತರ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.