ಡ್ರೋನ್ ಪ್ರತಾಪ್ ನನ್ನು ನೋಡಲು ಸೌದಿ ಅರೇಬಿಯಾ ದಿಂದ ಬಂದ ಅಭಿಮಾನಿ, ಏನಪ್ಪ ಈ ರೇಂಜ್ ಗೆ ಕ್ರೇಜ್

 | 
Jk

ಈ ಬಾರಿ ಬಿಗ್ ಬಾಸ್  ಸೀಸನ್ 10 ತುಂಬಾ ಸದ್ದು ಮಾಡಿತ್ತು. ಎಲ್ಲಾ ಸ್ಪರ್ಧಿಗಳು ವಿಭಿನ್ನವಾಗಿ ಗುರುತಿಸಿಕೊಂಡಿದ್ದರು. ಬಿಗ್ ಬಾಸ್ ಮುಗಿದ್ರೂ ಅದರ ಕ್ರೇಜ್ ಮುಗಿದಿಲ್ಲ. ಬಿಗ್ ಸ್ಪರ್ಧಿಗಳು ಫ್ಯಾನ್ಸ್ ಬೇಟಿ ಮಾಡುತ್ತಾ, ಎಂಜಾಯ್ ಮಾಡ್ತಾ ಇದ್ದಾರೆ. ಡ್ರೋನ್ ಪ್ರತಾಪ್  ಮಾತ್ರ ಮಹದೇಶ್ವರ ಬೆಟ್ಟಕ್ಕೆ ಹೋಗಿ ನೆಲದಲ್ಲಿ ಊಟ ಮಾಡಿ ಹರಕೆ ತೀರಿಸಿದ್ದಾರೆ.

ಬಿಗ್ ಬಾಸ್‌' ಶೋಗೆ ಕಾಲಿಡುವುದಕ್ಕೂ ಮುನ್ನ 'ಡ್ರೋನ್' ಪ್ರತಾಪ್‌ ಸಾಕಷ್ಟು ನೆಗೆಟಿವ್ ಕಾರಣಗಳಿಗೆ ಸುದ್ದಿಯಾಗಿದ್ದರು. ಸದ್ಯ ಬಿಗ್ ಬಾಸ್‌ ಮನೆಯಿಂದ ಆಚೆ ಬಂದಿರುವ ಡ್ರೋನ್ ಪ್ರತಾಪ್‌ಗೆ ಬೇಡಿಕೆ ಹೆಚ್ಚಾಗಿದೆ. ಅವರು ಕಂಡಲೆಲ್ಲ ಜನರು ಮುತ್ತಿಕೊಳ್ಳುತ್ತಿದ್ದಾರೆ. ಅವರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ನಾ ಮುಂದು ತಾ ಮುಂದು ಅಂತ ಮುಗಿಬೀಳುತ್ತಿದ್ದಾರೆ. ಒಂದೇ ಒಂದು 'ಬಿಗ್ ಬಾಸ್' ಶೋ ಪ್ರತಾಪ್ ಅವರ ಬದುಕಿನ ದಿಕ್ಕನ್ನೇ ಬದಲಿಸಿದೆ ಎಂದು ಹೇಳಬಹುದು.

ಅವರ ಅಭಿಮಾನಿಯೊಬ್ಬ ಅವರಿಗಾಗಿ ಟ್ಯಾಟು ಹಾಕಿಸಿಕೊಂಡು ಅವರೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ ಅಷ್ಟೇ ಅಲ್ಲ ಮತ್ತೊಬ್ಬ ಅಭಿಮಾನಿ 560 ಕಿಲೋಮೀಟರ್ ದೂರದಿಂದ ನಡೆದು ಕೊಂಡು ಬಂದಿದ್ದಾನೆ. ಹಾಗೂ ಪಾಕಿಸ್ತಾನ ,ಅಮೇರಿಕಾ , ಸೌದಿ ಅರೇಬಿಯಾ ಅಲ್ಲಿ ಕೂಡ ಪ್ರತಾಪ ಅವರ ಅಭಿಮಾನಿಗಳಿದ್ದಾರೆ. ಮತ್ತೊಮ್ಮೆ ಗಿ ಚ್ಚಿ ಗಿಲಿ ಗಿಲಿ ಶೋನಲ್ಲಿ ಭಾಗವಹಿಸುತ್ತಿರೋದು ಬಹಳ ಸಂತೋಷ ತಂದಿದೆ.

ಒಬ್ಬ ಅಭಿಮಾನಿ ಇವರು ಗೆಲ್ಲಲಿಲ್ಲ ಎಂದು ಅರ್ಧ ಮೀಸೆ ತೆಗೆದು ಮೊದಲೇ ಹೇಳಿದಂತೆ ಸೋಶಿಯಲ್ ಮೀಡಿಯಾ ಅಲ್ಲಿ ಫೋಟೋ ಹಾಕಿದ್ದಾರೆ. ಇನ್ನೊಬ್ಬರಂತು ಒಮ್ಮೆ ನಿಮ್ಮನ ಭೇಟಿ ಮಾಡಬೇಕು ಎಂದು ಪ್ರೀತಿಯಿಂದ ಕೇಳಿ ಕೊಂಡಿದ್ದಾರೆ. ಡ್ರೋನ್ ಪ್ರತಾಪ್ ಮಾತ್ರವಲ್ಲ, ತುಕಾಲಿ ಸಂತೋಷ್, ಮೈಕಲ್ ಮತ್ತು ಇಶಾನಿ ಕೂಡ ಈ ಬಾರಿ ಗಿಚ್ಚಿಗಿಲಿಗಿಲಿಯಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸಲಿದ್ದಾರೆ. ಮೂವರು ಕೂಡ ಇಂದಿನಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.