ಆಸ್ಟ್ರೇಲಿಯಾ ಸರ್ಕಾರದ ಈ ಒಂದು ನಿಯಮದಿಂದ ಸ್ವಂತ ಮಗಳನ್ನ ಕಳೆದುಕೊಂಡ ತಾಯಿ, ಯಾಕೆ ಗೊತ್ತಾ

 | 
Nx

ಧಾರವಾಡದ ಎಸ್.ಎಸ್. ದೇಸಾಯಿ ಹಾಗೂ ಶೋಭಾ ದೇಸಾಯಿ ದಂಪತಿಯ ಮಗಳು ಪ್ರಿಯದರ್ಶಿನಿ. ಅವರಿಗೆ ಕಲ್ಯಾಣ ನಗರ ಬಡಾವಣೆಯ ಲಿಂಗರಾಜ್ ಪಾಟೀಲ್ ಎಂಬುವರೊಂದಿಗೆ ಮದುವೆಯಾಗಿತ್ತು. ಬಳಿಕ ಇಬ್ಬರೂ ಇಂಜಿನಿಯರ್ ಆಗಿದ್ದರಿಂದ ಆಸ್ಟ್ರೇಲಿಯಾಕ್ಕೆ ಹೋಗಿ ನೆಲೆಸಿದ್ದರು. ಅಲ್ಲಿಯೇ ಈ ದಂಪತಿಗೆ ಎರಡು ಮಕ್ಕಳು ಜನಿಸಿದ್ದರು. 

ಮಕ್ಕಳು ಆಸ್ಟ್ರೇಲಿಯಾದಲ್ಲಿ ಜನಿಸಿದ್ದರಿಂದ ಅಲ್ಲಿನ ಪೌರತ್ವ ಸಿಕ್ಕಿತ್ತು. ಇದೀಗ ಮಗ ಅಮರ್ತ್ಯನಿಗೆ 17 ವರ್ಷ, ಮಗಳು ಅಪರಾಜಿತಾಳಿಗೆ 13 ವರ್ಷ ವಯಸ್ಸು. ಕೆಲ ದಿನಗಳ ಹಿಂದೆ ಮಗ ಅಮರ್ತ್ಯನ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದರಿಂದ ಅಲ್ಲಿನ ವೈದ್ಯರಿಗೆ ತೋರಿಸಲಾಗಿತ್ತು. ಆಗ ವೈದ್ಯರು ನೀಡಿದ್ದ ಔಷಧಗಳಿಂದಾಗಿ ಅಡ್ಡಪರಿಣಾಮ ಬೀರಿತ್ತು. 

ಇದನ್ನು ಪ್ರಶ್ನಿಸಿ ಸಂಬಂಧಿಸಿದವರ ವಿರುದ್ಧ ಪ್ರಿಯದರ್ಶಿನಿ ದೂರು ನೀಡಿದ್ದರು. ಹೀಗೆ ದೂರು ನೀಡಿದ್ದೇ ಪ್ರಿಯದರ್ಶಿನಿ ಕುಟುಂಬಕ್ಕೆ ಮುಳುವಾಗಿ ಹೋಯಿತು. ದೂರು ನೀಡಿದ್ದರಿಂದ ನಿರಂತರವಾಗಿ ಇವರ ವಿರುದ್ಧವೇ ಷಡ್ಯಂತ್ರ ಶುರುವಾಯಿತು. ನೀವೇ ಮಕ್ಕಳನ್ನು ಸರಿಯಾಗಿ ನೋಡಿಕೊಂಡಿಲ್ಲ ಅಂತಾ ಕಿರುಕುಳ ಮಾಡೋದು ಶುರುವಾಯಿತಂತೆ. 

ಇದರಿಂದಾಗಿ ಮನನೊಂದ ಪ್ರಿಯದರ್ಶಿನಿ ಭಾರತಕ್ಕೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತಳ ತಾಯಿ ಶೋಭಾ ಆರೋಪ‌ ಮಾಡುತ್ತಿದ್ದಾರೆ. ಕಳೆದ ವಾರ ಆಸ್ಟ್ರೇಲಿಯಾದಿಂದ ಒಬ್ಬಳೇ ಬೆಂಗಳೂರಿಗೆ ಬಂದಿದ್ದ ಪ್ರಿಯದರ್ಶಿನಿ, ಆಗಸ್ಟ್ 19 ರಂದು ಧಾರವಾಡಕ್ಕೆ ಬರಲು ಬಸ್ ಕೂಡ ಬುಕ್ ಮಾಡಿದ್ದರು. ಆದರೆ ಆ ಬಸ್ ಪ್ರಯಾಣ ಮಾಡಿರಲಿಲ್ಲ. ಬಳಿಕ ಆಕೆ ಮತ್ತೊಂದು ಬಸ್ ಮೂಲಕ ಹುಬ್ಬಳ್ಳಿಗೆ ಬಂದು, ಅಲ್ಲಿನ ಕೋರಿಯರ್ ಕಚೇರಿಗೆ ಹೋಗಿ ತಮ್ಮಲ್ಲಿದ್ದ ಹಣ ಹಾಗೂ ಚಿನ್ನಾಭರಣಗಳನ್ನು ಬ್ಯಾಗ್ ನಲ್ಲಿ ಹಾಕಿ ತಮ್ಮ ತಂದೆಯ ಹೆಸರಿನಲ್ಲಿ ಪಾರ್ಸೆಲ್ ಬುಕ್ ಮಾಡಿದ್ದಾರೆ. 

ಅದೇ ಬ್ಯಾಗ್ ನಲ್ಲಿ ಪತ್ರವೊಂದನ್ನು ಬರೆದು ಕೂಡ ಇಟ್ಟಿದ್ದಾರೆ. ಅಲ್ಲಿಂದ ನೇರವಾಗಿ ಬೆಳಗಾವಿ ಜಿಲ್ಲೆಯ ಗೋಕಾಕ್ ಗೆ ಹೋಗೋದಾಗಿ ಕೋರಿಯರ್‌ನವರಿಗೆ ಹೇಳಿದ್ದಾರೆ. ಯಾವಾಗ ಮಗಳು ಮನೆಗೆ ಬರಲಿಲ್ಲವೋ ಆಗ ಆತಂಕಗೊಂಡ ಮನೆಯವರು ಸುತ್ತಮುತ್ತಲಿನ ಎಲ್ಲ ಕಡೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಹುಬ್ಬಳ್ಳಿಯಿಂದ ಸವದತ್ತಿ ತಾಲೂಕಿನ ಮುನವಳ್ಳಿಗೆ ಹೋದ ಆಕೆ ಅಲ್ಲಿ ಇಳಿದುಕೊಂಡಿದ್ದಾರೆ. ಬಳಿಕ ಅಲ್ಲಿಂದ ಮಲಪ್ರಭಾ ನದಿಗುಂಟ ನಡೆದು ಬಂದ ಪ್ರಿಯದರ್ಶಿನಿ ನದಿಗೆ ಹಾರಿದ್ದಾರೆ. ಮರುದಿನ ಶವ ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಪತ್ತೆಯಾಗಿದೆ. 

ಪತಿ ಲಿಂಗರಾಜ ಪಾಟೀಲ್ ಆಸ್ಟ್ರೇಲಿಯಾದಿಂದ ಬಂದ ಬಳಿಕ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಇನ್ನು ತಾವು ಬರುವಾಗ ಪ್ರಿಯದರ್ಶಿನಿ ಎರಡೂ ಮಕ್ಕಳ ಪಾಸ್ಪೋರ್ಟ್ ಕೂಡ ತಂದಿದ್ದರು. ಹೀಗಾಗಿ ಈ ವೇಳೆ ಮಕ್ಕಳಿಗೆ ಬರಲು ಅವಕಾಶವೇ ಸಿಕ್ಕಿಲ್ಲ. ಇದೇ ವೇಳೆ ಕುಟುಂಬಸ್ಥರು ತಮಗೆ ಆಗಿರೋ ಅನ್ಯಾಯದ ವಿರುದ್ಧ ಭಾರತ ಸರಕಾರದ ಮೂಲಕ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.