ಸುಡು ಬಿಸಿಲಿನಲ್ಲಿ ಹಸುಗೂಸನ್ನು ಹಿಡಿದುಕೊಂಡು ಡ್ಯೂಟಿ ಮಾಡುತ್ತಿದ್ದ ಮಹಿಳಾ ಪೋಲೀಸ್, ಮುಂದೇನಾಯ್ತು ಗೊತ್ತಾ

 | 
ಲ್

 ಸಂಚಾರಿ ಮಹಿಳಾ ಪೇದೆಯೊಬ್ಬರು ಮಗುವನ್ನು ಹೆಗಲ ಮೇಲೆ ಹೊತ್ತು ಕರ್ತವ್ಯ ನಿರ್ವಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಉಂಟು ಮಾಡಿದೆ. ಆದರೆ, ವೈರಲ್‌ ಆಗುವುದರ ಜತೆಗೆ ಈ ವಿಡಿಯೋ ತನಿಖೆಯ ಮೆಟ್ಟಿಲೇರಿದೆ. ಈ ಘಟನೆ ನಡೆದಿರುವುದು ಚಂಡೀಗಢದಲ್ಲಿ. 

ಇಲ್ಲಿನ ಪ್ರಿಯಾಂಕಾ ಎಂಬ ಮಹಿಳಾ ಪೇದೆಯೊಬ್ಬರು ಮಾರ್ಚ್ 6 ರ ಶುಕ್ರವಾರ ಸುಮಾರು 11 ಗಂಟೆಗೆ ತಮ್ಮ ಚಿಕ್ಕ ಮಗುವನ್ನು ಹೊತ್ತು ಕೆಲಸ ಮಾಡಿದ್ದು, ಇವರ ಈ ಕೆಲಸಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇದು ಸರಿಯಲ್ಲ ಎಂಬ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೌದು ಪ್ರಿಯಾಂಕಾ ಮಾರ್ಚ್ 6 ರ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ಹಾಜರಾಗಬೇಕಾಗಿತ್ತು. ಆದರೆ ಬೆಳಗ್ಗೆ 11 ಗಂಟೆಗೆ ಕೆಲಸಕ್ಕೆ ಬಂದಿದ್ದಾರೆ. ಇದನ್ನು ಮೇಲಧಿಕಾರಿ ಪ್ರಶ್ನಿಸಿದಾಗ ಬೇಸರಗೊಂಡ ಅವರು ಮಗುವನ್ನೇ ಹೊತ್ತು ಕರ್ತವ್ಯ ನಿರ್ವಹಿಸಿದ್ದಾರೆ.


ಇನ್ನು ತನಿಖೆಯ ಪ್ರಕಾರ, ಶುಕ್ರವಾರ ಮಹಿಳಾ ಪೇದೆಯು ನಿಯೋಜನೆಗೊಂಡ ಸ್ಥಳಕ್ಕೆ ಬರುವ ವೇಳೆ ಚಂಡೀಗಢದ ಟ್ರಾಫಿಕ್ 29ಗೆ ಬರುವಂತೆ ಪೊಲೀಸ್ ಅಧಿಕಾರಿ ಸೂಚಿಸಿದ್ದರು. ಅಕಸ್ಮಾತ್ ಬರಲು ಸಾಧ್ಯವಾಗದಿದ್ದರೆ ರಜೆ ತೆಗೆದುಕೊಳ್ಳುವಂತೆಯೂ ಹೇಳಿದ್ದರು. ಆದರೆ 8 ಗಂಟೆಗೆ ಬರಬೇಕಾಗಿದ್ದ ಪೇದೆಯು ತನ್ನ ಮಗುವಿನ ಸಮೇತ 11 ಗಂಟೆಗೆ ಬಂದು ಮಗುವನ್ನು ಎತ್ತಿಕೊಂಡೇ ಕಾರ್ಯ ನಿರ್ವಹಿಸಿದ್ದಾರೆ.


ಇದೀಗ ಪ್ರಿಯಾಂಕಾ ಸರಿಯಾದ ಸಮಯಕ್ಕೆ ಬಾರದಿರುವ ಬಗ್ಗೆ ಹಾಗೂ ಮಗುವನ್ನು ಹೊತ್ತು ಕೆಲಸ ಮಾಡಿರುವ ಬಗ್ಗೆ ತನಿಖೆ ಎದುರಿಸುತ್ತಿದ್ದಾರೆ ಎಂದು ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.


ಅಲ್ಲದೇ ಈ ಮೊದಲೇ ಪ್ರಿಯಾಂಕಾ, ನನ್ನ ಮಗು ಇನ್ನೂ ಸಣ್ಣದು. ಆ ಮಗುವನ್ನು ಬಿಟ್ಟು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಮಗು ಅಳಲು ಶುರುಮಾಡಿದಾಗ ಪ್ರಿಯಾಂಕಾ ಅವರ ಪತಿ ಅಥವಾ ಕುಟುಂಬದವರು ಯಾರಾದರೂ ಮಗುವನ್ನು ಅವರು ಕೆಲಸ ಮಾಡುವ ಸ್ಥಳಕ್ಕೆ ತರುತ್ತಿದ್ದರು. ತಾಯಿ ಎತ್ತಿಕೊಂಡ ಕೂಡಲೇ ಮಗು ಅಳುವುದನ್ನು ನಿಲ್ಲಿಸುತ್ತಿತ್ತು ಎಂದು ತಿಳಿದುಬಂದಿದೆ.


ಪ್ರಿಯಾಂಕಾ ಮಗು ಹೊತ್ತು ಕೆಲಸ ಮಾಡಿರುವ ವಿಡಿಯೋ ಟ್ವಿಟ್ಟರ್‌, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಮಿಲಿಯನ್‌ಗಟ್ಟಲೇ ಶೇರ್ ಆಗಿದೆ. ಕೆಲವರು ಇವರು ಮಗು ಮತ್ತು ಕೆಲಸವನ್ನು ನಿಭಾಯಿಸುವ ರೀತಿ ಕಂಡು ಖುಷಿ ಪಟ್ಟರೆ ಇನ್ನು ಕೆಲವರು ಇವರ ಈ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಒಟ್ಟಿನಲ್ಲಿ ಹೇಳುವುದಾದರೆ ತಾಯಿ ಎಂದಿದ್ದರೂ ದೇವರೇ ಆಗಿರುತ್ತಾಳೆ.

ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.