BMW ಕಾರು ನೋಡಿ ಮದುವೆಯಾದ ಯುವತಿ; ಮೊದಲರಾತ್ರಿ ಬಳಿಕ ಕಾರು ನನ್ನದಲ್ಲ ಎಂದ ವಧು
Oct 29, 2024, 08:43 IST
|

ಯುವಕನ ಬಹುತೇಕ ಫೋಟೋದಲ್ಲಿ ಐಷರಾಮಿ BMW ಕಾರಿತ್ತು.BMW ಕಾರಿನಿಂದ ಶುರುವಾದ ಪ್ರೀತಿಗೆ ಇದೀಗ ಅದೇ BMW ಕಾರು ಸಂಕಷ್ಟ ತಂದಿದೆ. ಉತ್ತರ ಪ್ರದೇಶದ ಆಗ್ರಾದ ಯುವತಿ ಕೆಲಸ ಮಾಡಿಕೊಂಡು ಆರಾಮಾಗಿದ್ದಳು. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಯುವಕನೊಬ್ಬನ ಫೋಟೋ ಕಣ್ಣಿಗೆ ಬಿದ್ದಿದೆ. ಯುವಕ ನೋಡಲು ಆಕರ್ಷಕವಾಗಿದ್ದ. ಆದರೆ ಅದಕ್ಕಿಂತ ಹೆಚ್ಚಾಗಿ, ಆತನ ಸೋಶಿಯಲ್ ಮೀಡಿಯಾ ಖಾತೆಯ ಗ್ಯಾಲರಿಯಲ್ಲಿರುವ ಬಹುತೇಕ ಎಲ್ಲಾ ಫೋಟೋಗಳಲ್ಲೂ BMW ಕಾರಿತ್ತು.
BMW ಕಾರಿನ ಮುಂದೆ, ಪ್ರಯಾಣದ ಫೋಟೋಗಳನ್ನು ಹಂಚಿಕೊಂಡಿದ್ದ. ಈ ಫೋಟೋ ನೋಡಿದ ಯುವತಿಗೆ ಅಲ್ಲೆ ಪ್ರೇಮಾಂಕುರವಾಗಿದೆ.ಪ್ರತಿ ದಿನ ಯುವಕನ ಫೋಟೋಗೆ ಲೈಕ್ಸ್, ಕಮೆಂಟ್ಸ್ ಮಾಡತೊಡಿಗಿದ್ದಾಳೆ. ಆದರೆ ಯುವಕನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. BMW ಕಾರು, ಹೈಕ್ಲಾಸ್ ಜೀವನ, ಹೀಗಾಗಿ ಸೋಶಿಯಲ್ ಮೀಡಿಯಾಗೆ ಉತ್ತರಿಸವ ಸಾಧ್ಯತೆ ಕಡಿಮೆ ಎಂದುಕೊಂಡಿದ್ದಳು.
ಹೀಗಿರುವಾಗ ಯುವತಿಯ ಕಮೆಂಟ್ಸ್ಗೆ ಪ್ರತಿಕ್ರಿಯೆ ಒಂದು ಬಂದಿತ್ತು. ಖುಷಿಯಿಂದ ತೇಲಾಡಿದ ಯುವತಿ, ಸತತ ಪ್ರಯತ್ನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತರಾಗಿದ್ದಾರೆ. ವಿದೇಶದಲ್ಲಿ ಕೆಲಸ, ಐಷಾರಾಮಿ ಕಾರು, ಜೀವನದಿಂದ ಯುವತಿ ಖುಷಿಯಾಗಿದ್ದಾಳೆ. ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಸಿಂಪಲ್ ಆಗಿ ಹೇಳಬೇಕೆಂದರೆ ಯುವತಿ, ಈತನ ಪ್ರೀತಿಗಾಗಿ ಇಷ್ಟೆಲ್ಲಾ ಕಸರತ್ತು ಮಾಡಿದ್ದಳು.
ಪ್ರೀತಿ ಶುರುವಾಯಿತು, ಗಾಢವಾಯಿತು. ಇದರ ನಡುವೆ ಕೆಲವು ಬಾರಿ ಯುವತಿ ಆತನ ಭೇಟಿ ಮಾಡಿದ್ದಾಳೆ. ಐಷಾರಾಮಿ ಹೊಟೆಲ್ನಲ್ಲಿ ಆಹಾರ ಸವಿಸಿದ್ದಾರೆ. ಯುವತಿ ಮದುವೆಗೆ ಒತ್ತಾಯಿಸಲು ಆರಂಭಿಸಿದ್ದಾಳೆ. ಕೊನೆಗೆ ಆತ ಮದುವೆಗೆ ಒಕೆ ಎಂದಿದ್ದಾನೆ.
ಯುವಕನ ಮನೆಯಲ್ಲಿ ಹೆಚ್ಚಿನ ತಕರಾರರು ಇರಲಿಲ್ಲ. ಆದರೆ ಯುವತಿ ಮನೆಯಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾಗಿರುವ ವರ ಬೇಡ ಎಂದಿದ್ದಾರೆ. ಆದರೆ ಪಟ್ಟು ಬಿಡದ ಯುವತಿ ಪೋಷಕರನ್ನೂ ಒಪ್ಪಿಸಿ ಮದುವೆಯಾಗಿದ್ದಾಳೆ. ಅದ್ಧೂರಿಯಾಗಿ ಮದುವೆ ನಡೆದಿದೆ. ಮದುವೆ ಬಳಿಕ ಮಂಟಪದಿಂದ ಹುಡುಗನ ಮನೆಗೆ ತೆರಳಲು ಅದೇ BMW ಕಾರು ಬಂದಿದೆ. ಕಾರಿನಲ್ಲಿ ಕುಳಿತು ಮನೆಗೆ ತೆರಳಿದ್ದಾರೆ. ಮನೆಗೆ ಪ್ರವೇಶಿಸುತ್ತಿದ್ದಂತೆ ಯುವತಿ ಕನಸುಗಳು ನುಚ್ಚು ನೂರಾಗಿದೆ. ಕಾರಣ ಈತನ ಮನೆ ಸಣ್ಣ ಜೋಪಡಿ ರೀತಿ ಇತ್ತು. ಈ ಮನೆಯಲ್ಲಿ ಕಾರು ಬಿಟ್ಟು ಸೈಕಲ್ ಕೂಡ ಇರಲಿಲ್ಲ. 6 ದಿನದಲ್ಲೇ ಯುವತಿಗೆ ಗಂಡನ ಬಳಿ ಕಾರು ಇಲ್ಲ, ಮನೆಯೂ ಇಲ್ಲ, ವಿದೇಶದಲ್ಲೂ ಕೆಲಸವೂ ಇಲ್ಲ ಅನ್ನೋದು ಗೊತ್ತಾಗಿದೆ. ತವರಿಗೆ ಬಂದ ಯುವತಿ ಇದೀಗ ದೂರು ನೀಡಿದ್ದಾಳೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023