ಆಯ೯ವಧ೯ನ್ ಗುರೂಜೀಗೆ ಹುಲಿ ಉಗುರಿನ ಭೀತಿ, ಗುರೂಜೀ ರಿಯಾಕ್ಷನ್ ಹೇಗಿತ್ತು ಗೊತ್ತಾ
ಬಿಗ್ ಬಾಸ್ ಮನೆಯ ಮಾಜಿ ಸ್ಪರ್ಧಿ ಆರ್ಯವರ್ಧನ್ ಗುರೂಜಿ ಹುಲಿ ಉಗುರಿಂದ ಕಂಟಕ ಬಂದಿದೆ. ಕಳೆದ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಗುರೂಜಿ ಇದ್ರು. ಹಾಗೇನೆ ಹುಲಿ ಉಗುರು ಇರೋ ಚಿನ್ನದ ಪೆಂಡೆಂಟ್ ಧರಿಸಿಕೊಂಡು ಮನೆಯಲ್ಲಿ ಓಡಾಡಿದ್ದರು. ಆದರೆ ಈ ಒಂದು ವಿಚಾರ ಆಗ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಇದೇ ಮನೆಯಲ್ಲಿದ್ದ ವರ್ತೂರು ಸಂತೋಷ್ ಬಂಧನ ಆಗಿದ್ದೇ ತಡ, ಎಲ್ಲ ಹುಲಿ ಉಗುರು ಧರಿಸಿದ ಸೆಲೆಬ್ರಿಟಿಗಳ ಮನೆಗೆ ನೋಟೀಸ್ ಹೋಗುತ್ತಿದೆ.
ಅದೇ ರೀತಿ ಇದೀಗ ಆರ್ಯವರ್ಧನ್ ಗುರೂಜಿ ಕಚೇರಿಗೂ ಅರಣ್ಯ ಅಧಿಕಾರಿಗಳು ನೋಟೀಸ್ ಕಳೆಸಿದ್ದಾರೆ. ಹುಲಿ ಉಗುರು ಇರೋ ಪೆಂಡೆಂಟ್ ಕೂಡ ವಶಪಡಿಸಿಕೊಂಡಿದ್ದಾರೆ.ಹುಲಿ ಉಗುರು ಧರಿಸಿಕೊಂಡವ್ರು ಅದೆಷ್ಟು ಜನ ಸೆಲೆಬ್ರಿಟಿಗಳು ಇದ್ದಾರೋ ಏನೋ. ಸಂತೋಷ್ ಪ್ರಕರಣದ ಬಳಿಕ ಈಗ ಒಂದೊದಾಗಿಯೇ ಎಲ್ಲವೂ ಹೊರಗೆ ಬೀಳುತ್ತಿವೆ. ಅದೇ ರೀತಿ ಈ ಹಿಂದಿನ ಬಿಗ್ ಬಾಸ್ ನಲ್ಲೂ ಹುಲಿ ಉಗುರು ಧರಿಸಿ ಕೊಂಡು ಓಡಾಡಿದ್ದ ಆರ್ಯರ್ಧನ್‌ಗೂ ಇದೀಗ ಕಂಟಕ ಎದುರಾಗಿದೆ.
ಹುಲಿ ಉಗುರು ಧರಿಸಿದ್ದ ಬಿಗ್ ಬಾಸ್ ಮನೆಯ ಫುಟೇಜ್ ನೋಡಿಯೋ ಏನೋ, ಅರಣ್ಯ ಅಧಿಕಾರಿಗಳು ಗುರೂಜಿ ಕಚೇರಿಗೆ ನೋಟೀಸ್ ನೀಡಿದ್ದಾರೆ. ಜೊತೆಗೆ ಕಚೇರಿಗೂ ಹೋಗಿ ಹುಲಿ ಉಗುರು ಇರೋ ಬಂಗಾರದ ಪೆಂಡೆಂಟ್ ಅನ್ನು ವಶಪಡೆದುಕೊಂಡಿದ್ದಾರೆ.ಮೂರು ಲಕ್ಷ ರೂಪಾಯಿ ಬೆಲೆ ಬಾಳೋ ಚೈನ್ ಇದಾಗಿದ್ದು, ಅರಣ್ಯ ಅಧಿಕಾರಿಗಳು ಚಿನ್ನದ ಸರವನ್ನ ವಾಪಸ್ ಕೊಟ್ಟಿದ್ದಾರೆ. ಹುಲಿ ಉಗುರನ್ನ ಮಾತ್ರ ವಶಪಡಿಸಿಕೊಂಡಿದ್ದಾರೆ ಅನ್ನುವ ಮಾಹಿತಿ ಇದೆ.
ಹುಲಿ ಉಗುರು ಪ್ರಕರಣ ದಿನೇ ದಿನೇ ಹೊಸ ಹೊಸ ಮುಖಗಳನ್ನ ಪರಿಚಯಿಸುತ್ತಿದೆ. ವರ್ತೂರು ಸಂತೋಷ್ ಬಂಧನದ ಬಳಿಕ ಅನೇಕರ ಹೆಸರು ಕೇಳಿ ಬಂದವು. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್, ಜಗ್ಗೇಶ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಇನ್ನೂ ಅನೇಕರ ಫೋಟೋಗಳು ವೈರಲ್ ಆಗಿದ್ದವು. ಇದೀಗ ಅವರ ಸಾಲಿಗೆ ಆರ್ಯವರ್ಧನ ಗುರೂಜಿ ಕೂಡಾ ಸೇರಿದ್ದಾರೆ ಎನ್ನಲಾಗುತ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.