ತನ್ನ ಗಂಡು ಮಗುವಿನ ಬಗ್ಗೆ ಹಾಡಿ ಹೊಗಳಿದ ನಟ ಧ್ರುವ ಸಜಾ೯, ಸಜಾ೯ ಕುಟುಂಬಕ್ಕೆ ಎಲ್ಲಿಲ್ಲದ ಸಂಭ್ರಮ

 | 
Bv

ಧ್ರುವ ಸರ್ಜಾ ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ. ಧ್ರುವ ಸರ್ಜಾ ಅವರು ಎರಡನೇ ಬಾರಿ ತಂದೆ ಆಗಿದ್ದಾರೆ. ಧ್ರುವ-ಪ್ರೇರಣಾ ದಂಪತಿಗೆ ಕಳೆದ ಅಕ್ಟೋಬರ್​ನಲ್ಲಿ ಹೆಣ್ಣುಮಗು ಜನಿಸಿತ್ತು. ಈಗ ಗಂಡು ಮಗುವಿಗೆ ಅವರು ತಂದೆ ಆಗಿದ್ದಾರೆ. ಧ್ರುವ ಸರ್ಜಾ ಅವರು ಈ ಸಂದರ್ಭದಲ್ಲಿ ಅಣ್ಣನ ತುಂಬಾನೇ ಮಿಸ್ ಮಾಡಿಕೊಂಡಿದ್ದಾರೆ. ಇದು ನನಗೆ ಮೂರನೇ ಮಗು ಎಂದಿದ್ದಾರೆ.

ಧ್ರುವ ಸರ್ಜಾ ಅವರು ಇಂದು ಬೆಳಗ್ಗೆ ಖುಷಿ ಸುದ್ದಿ ನೀಡಿದರು. ತಾವು ಮತ್ತೆ ತಂದೆ ಆಗಿರುವ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು. ಸದ್ಯ ಪ್ರೇರಣಾ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಧ್ರುವ ಅವರು ಆಸ್ಪತ್ರೆಗೆ ಭೇಟಿ ನೀಡಿ ಪತ್ನಿಯನ್ನು ಮಾತನಾಡಿಸಿದ್ದಾರೆ. ಮಗುವನ್ನು ಎತ್ತಿಕೊಂಡಿದ್ದಾರೆ. ಆ ಬಳಿಕ ಅವರು ಮಾಧ್ಯಮದ ಜೊತೆ ಮಾತನಾಡಿದರು.

‘ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯ. ಎರಡನೇ ಮಗು ಆಗಿದೆ. ಲೆಕ್ಕದ ಪ್ರಕಾರ ನನಗೆ ಇದು ಮೂರನೇ ಮಗು. ರಾಯನ್ ನನ್ನ ಮೊದಲ ಮಗ. ಆ ಬಳಿಕ ಹೆಣ್ಣು ಮಗು ಹುಟ್ಟಿತು. ಅವಳಿಗೆ ಇನ್ನೂ ಹೆಸರು ಇಟ್ಟಿಲ್ಲ. ಈಗ ಮತ್ತೊಂದು ಮಗು ಆಗಿದೆ. ಮನೆಯಲ್ಲಿ ಈಗ ಮೂರು ಮಕ್ಕಳಿದ್ದಾರೆ. ಸದ್ಯ ಪ್ರೇರಣಾ, ಮಗ ಆರೋಗ್ಯವಾಗಿದ್ದಾರೆ ನನಗಿಂತ ಕಲರ್ ಆಗಿರುವ ಮಗ ಹುಟ್ಟಿದ್ದಾನೆ ಎಂದು ಅವರು ಹೇಳಿದ್ದಾರೆ.

ಮಗು ಯಾವಾಗ ಹುಟ್ಟಿದರೂ ಅದು ಒಳ್ಳೆಯ ದಿನವೇ ಆಗಿರುತ್ತದೆ. ಇಂದು ಲೆಜೆಂಡರಿಗಳು ಹುಟ್ಟಿದ ದಿನ. ಗೌರಿ ಗಣೇಶ ಹಬ್ಬ ಬೇರೆ. ಹೀಗಾಗಿ ಸಖತ್ ವಿಶೇಷ. ಗಂಡು ಮಗು ಆಗಿದ್ರೂ, ಹೆಣ್ಣು ಮಗು ಆಗಿದ್ರೂ ಯಾವುದಾದ್ರೂ ಅದನ್ನು ನಾವು ಖುಷಿಯಿಂದಲೇ ಸ್ವೀಕರಿಸುತ್ತಿದ್ದೆವು. ಅಣ್ಣನ ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ ಧ್ರುವ ಸರ್ಜಾ.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.