ವಕೌ೯ಟ್ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ ನಟ ವಿಕ್ಕಿ, ಅಧ೯ಕ್ಕೆ ನಿಂತ ಟಾಪ್ ಸೀರಿಯಲ್

ದೇಹವನ್ನು ಹುರಿಗಟ್ಟಿಸಲು ಗರಡಿಯಲ್ಲಿ ಕಸರತ್ತು ಮಾಡಬೇಕು ನಿಜ. ಆದರೆ, ಅದೇ ನಮ್ಮ ಜೀವಕ್ಕೆ ಎರವಾಗಬಾರದಲ್ಲವೇ?. ಇಂಡೋನೇಷಿಯಾದಲ್ಲಿ ಬಾಡಿಬಿಲ್ಡರ್ವೊಬ್ಬರು ಅತಿಯಾದ ಭಾರ ಎತ್ತಲು ಹೋಗಿ ಗೋಣು ಮುರಿದುಕೊಂಡು ಸಾವನ್ನಪ್ಪಿದ ದುರಂತ ಇತ್ತೀಚೆಗೆ ನಡೆದಿದೆ. ಇದೀಗ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಜಿಮ್ ವಿಡಿಯೋವನ್ನು ನಿರಂತರವಾಗಿ ಹಂಚಿಕೊಂಡು ಅರಿವು ಮೂಡಿಸುತ್ತಿದ್ದ ಫಿಟ್ನೆಸ್ ಫ್ರೀಕ್ ಬಾಡಿಬಿಲ್ಡರ್ ಜಸ್ಟಿನ್ ವಿಕ್ಕಿ ಅಕಾಲಿಕ ಸಾವನ್ನಪ್ಪಿದವರು. ಜುಲೈ 15 ರಂದು ವಿಕ್ಕಿ ತಮ್ಮ ಟ್ರೇನರ್ಗಳ ಜೊತೆಗೆ ಬಾಲಿಯ ಸಾನೂರ್‌ನಲ್ಲಿರುವ ಪ್ಯಾರಡೈಸ್ ಜಿಮ್‌ನಲ್ಲಿ ಎಂದಿನಂತೆ ದೇಹ ಹುರಿಗೊಳಿಸುತ್ತಿದ್ದರು.
ಅಂದು ಅತ್ಯಧಿಕ ಭಾರ ಅಂದರೆ 210 ಕೆಜಿಯನ್ನು ಒಮ್ಮೆಲೆ ಎತ್ತಲು ಪ್ರಯತ್ನಿಸುತ್ತಿದ್ದರು. 33 ವರ್ಷದ ವಿಕ್ಕಿ ತನ್ನ ಶಕ್ತಿಯನ್ನೆಲ್ಲ ಬಳಸಿಕೊಂಡು 2 ಕ್ವಿಂಟಲ್ಗಿಂತಲೂ ಹೆಚ್ಚು ಭಾರವನ್ನು ಎತ್ತುತ್ತಿದ್ದರು. ವೇಟ್ ಲಿಫ್ಟಿಂಗ್ ಅನ್ನು ಭುಜದ ಮೇಲೆ ಇಟ್ಟುಕೊಂಡು ಎತ್ತಲು ಪ್ರಯತ್ನಿಸಿದರು. ಹೆಚ್ಚಿನ ಭಾರ ಎತ್ತಲಾಗದೇ ವಿಕ್ಕಿ ನೆಲದಿಂದ ಮೇಲೇಳಲು ಪರದಾಡಿದರು. ಆಗ ಬಾರ್ಬೆಲ್ ಭುಜದಿಂದ ಜಾರಿ ಕತ್ತಿನ ಹಿಂಭಾಗದ ಮೇಲೆ ಬಿದ್ದಿದೆ.
ಇದರಿಂದ ಗೋಣು ಮುರಿದುಕೊಂಡಿದೆ. ತಕ್ಷಣವೇ ಆತ ನೆಲಕ್ಕೆ ಹಾಗೆಯೇ ಕುಸಿದು ಬಿದ್ದಿದ್ದಾನೆ. ಆತನ ಹಿಂದೆ ಜಿಮ್ ಟ್ರೇನರ್ಗಳು ಇರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪ್ರಜ್ಞೆತಪ್ಪಿ ಬಿದ್ದ ಬಾಡಿಬಿಲ್ಡರ್ ವಿಕ್ಕಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಆತನ ಪ್ರಾಣ ಕಳೆದುಕೊಂಡಿದ್ದಾನೆ.
ಅತಿಯಾದ ಭಾರದ ಗೋಣಿನ ಮೇಲೆ ಬಿದ್ದ ಕಾರಣ ಅದು ಮುರಿದಿದೆ. ಹೃದಯ ಮತ್ತು ಶ್ವಾಸಕೋಶಗಳಿಗೆ ಸಂಪರ್ಕಿಸುವ ಪ್ರಮುಖ ನರಗಳು ಛಿದ್ರವಾಗಿದೆ. ಇದರಿಂದಾಗಿ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ದೇಹದಾರ್ಢ್ಯ ಬೆಳೆಸಲು ಪ್ರೇರಣೆಯಾಗಿದ್ದ ಯುವ ಬಾಡಿಬಿಲ್ಡರ್ ಅಕಾಲಿಕ ಮರಣ ಹೊಂದಿದ್ದಾನೆ. ಈತ ಕಸರತ್ತು ಮಾಡುತ್ತಿದ್ದ ಜಿಮ್ ಮಾಲೀಕರು ಘಟನೆಗೆ ಸಂತಾಪ ಸೂಚಿಸಿದ್ದಾರೆ.ಹಲವಾರು ಯುವಕರು ಜಸ್ಟಿನ್ ವಿಕ್ಕಿ ನಮಗೆಲ್ಲ ಸ್ಫೂರ್ತಿ, ಪ್ರೇರಣೆ ಮತ್ತು ದಾರಿದೀಪವಾಗಿದ್ದ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.