ಚಿಕ್ಕಣ್ಣನ ನಂಬಿ ಚಿತ್ರರಂಗದಕ್ಕೆ ಬಂದು ಮೋಸ ಆಯ್ತು, ಮೌನಮುರಿದ ನಟಿ

ನಟಿ ದರ್ಶಿನಿ ಅಂದ್ರೆ ನೆನಪಾಗಲಿಕ್ಕಿಲ್ಲ.ಅದೇ ಶ್ರೀರಸ್ತು ಶುಭಮಸ್ತು ಧಾರವಾಹಿ ದೀಪಿಕಾ ಅಂದ್ರೆ ತಟ್ಟನೆ ನೆನಪಾಗುತ್ತದೆ.ಚಿತ್ರರಂಗಕ್ಕೆ ನನ್ನನ್ನು ಕೋರಿಯೋಗ್ರಾಫರ್ ಆಗಿ ಪರಿಚಯ ಮಾಡಿಕೊಟ್ಟಿದ್ದು ಜಾನಿ ಮಾಸ್ಟರ್ ಅವರೇ ನನ್ನ ಗುರು. ಪ್ರಭುದೇವ ಅವರೊಟ್ಟಿಗೆ ಎರಡು ಮೂರು ಡ್ಯಾನ್ಸ್ ಮಾಡಿದ್ದೀನಿ. ಡ್ಯಾನ್ಸ್ ಜೊತೆಗೆ ಎರಡು ತಮಿಳು ಸಿನಿಮಾಗಳಲ್ಲಿ ನಟಿಸಿದ್ದೀನಿ. ಕನ್ನಡದವಳು ಆಗಿರುವ ಕಾರಣ ಇಲ್ಲಿ ಹೆಸರು ಮಾಡಬೇಕು ಎಂದು ಒಂಟಿಯಾಗಿ ಸ್ವಂತ ಕೋರಿಯೋಗ್ರಾಫಿ ಶುರು ಮಾಡಿದ್ದು ಉಪಾಧ್ಯಕ್ಷ ಮತ್ತು ಛೂಮಂತರ್ ಸಿನಿಮಾ.
ಸೀರಿಯಲ್ ಜರ್ನಿ ಶುರು ಮಾಡಿದ್ದು ನಾಗಿಣಿ 2 ಮೂಲಕ. ಸದ್ಯಕ್ಕೆ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಹಾಗೂ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದೀನಿ. 2023ರಲ್ಲಿ ಕೊರಿಯೋಗ್ರಾಫರ್ ಆಗಿ ಜರ್ನಿ ಶುರು ಮಾಡಿದೆ. ಉಪಾಧ್ಯಕ್ಷದಲ್ಲಿ 2 ಹಾಡು, ಛೂಮಂತರ್ ಸಿನಿಮಾದಲ್ಲಿ 2 ಸಾಂಗ್ ಮಾಡಿದ್ದೀನಿ. ಮುಂದೆ ರಿಲೀಸ್ ಆಗಲಿರುವ ಸಿನಿಮಾಗಳ ಹಾಡುಗಳನ್ನು ಕೊರಿಯೋಗ್ರಾಫ್ ಮಾಡಿದ್ದೀನಿ ರಿಲೀಸ್ ಆಗಬೇಕಿದೆ. ಅಸಿಸ್ಟೆಂಟ್ ಕೊರಿಯೋಗ್ರಾಫರ್ ಆಗಿ ಸುಮಾರು 60 ರಿಂದ 80 ಹಾಡುಗಳನ್ನು ಮಾಡಿಸಿದ್ದೀನಿ ಎಂದು ಕನ್ನಡ ಖಾಸಗಿ ವೆಬ್ ಸಂದರ್ಶನದಲ್ಲಿ ದರ್ಶಿನಿ ಮಾತನಾಡಿದ್ದಾರೆ.
ಕೊರಿಯೋಗ್ರಾಫರ್ ಆಗಿ ನನ್ನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟವರು ಚಿಕ್ಕಣ್ಣನವರು. ಅವರದ್ದೇ ಎರಡು ಸಿನಿಮಾಗಳ ಹಾಡುಗಳನ್ನು ಶೂಟ್ ಮಾಡಿದ್ದೀನಿ. ಆ ಸಮಯದಲ್ಲಿ ನನಗೆ ಮಾಸ್ಟರ್ ಕಾರ್ಡ್ ಇರಲಿಲ್ಲ. ಆ ಸಮಯದಲ್ಲಿ ನಾನೇ ಕೆಲಸ ಮಾಡಬೇಕು ಎಂದು ಹೈದರಾಬಾದ್‌ಗಳಿಂದ ಡ್ಯಾನ್ಸರ್‌ಗಳು ಸಿಕ್ಕರು. ಛೂಮಂತರ್ ಸಿನಿಮಾ ಸಮಯದಲ್ಲಿ ಸಿಕ್ಕಾಪಟ್ಟೆ ಸಮಯ ಆಯ್ತು. ಅಸಿಸ್ಟೆಂಟ್ ಕೊಡುತ್ತಿರಲಿಲ್ಲ, ಡ್ಯಾನ್ಸರ್‌ಗಳು ಕೊಡುತ್ತಿರಲಿಲ್ಲ ಹಾಗೂ ಸೆಟ್‌ಗೆ ಹಲವರು ಬಂದು ಜಗಳ ಮಾಡುತ್ತಿದ್ದರು.
ಕಾರ್ಡ್ ಪಡೆಯುತ್ತೀನಿ ಎಂದು ಮಾತು ಕೊಟ್ಟು ಕೆಲಸ ಮಾಡಿದೆ. ಮಹಿಳಾ ಕೊರಿಯೋಗ್ರಾಫರ್‌ಗಳಿಗೆ ಬಿಗ್ ಬಜೆಟ್ ಸಿನಿಮಾಗಳಲ್ಲಿ ಅವಕಾಶ ಕೊಡುವುದಿಲ್ಲ. ಎಲ್ಲಾ ಚಾಲೆಂಜ್‌ಗಳನ್ನು ಎದುರಿಸಿ 70mm ಸ್ಕ್ರೀನ್ ಮೇಲೆ ಹಾಡು ನೋಡಿದ ತಕ್ಷಣ ಖುಷಿ ಅಯ್ತು ಎಂದು ದರ್ಶಿನಿ ಹೇಳಿದ್ದಾರೆ.ಬೆಳಗ್ಗೆ ಸೀರಿಯಲ್ ಮುಗಿಸಿಕೊಂಡು ರಾತ್ರಿ ನಾನು ಡ್ಯಾನ್ಸ್ ಕೊರಿಯೋಗ್ರಾಫ್ ಮಾಡುತ್ತಿದ್ದೆ. ಹೇಳಿ ಕೊಡುವ ಮುನ್ನ ನಾನು ಪ್ರಾಕ್ಟೀಸ್ ಮಾಡಿಕೊಂಡು ಹೋಗುತ್ತಿದ್ದೆ.
ಆದರೆ ಸೀರಿಯಲ್ ಶೂಟಿಂಗ್‌ಗೆ ಸರಿಯಾಗಿ ಶೆಡ್ಯೂಲ್ ಇರುವುದಿಲ್ಲ ಈ ಸಮಯದಲ್ಲಿ ಕೆಲಸ ಶುರುವಾಗಿ ಈ ಸಮಯದಲ್ಲಿ ಮುಗಿಯುತ್ತದೆ ಎನ್ನಲು ಆಗುವುದಿಲ್ಲ. ಹೀಗಾಗಿ ಸೀರಿಯಲ್ ಮತ್ತು ಕೊರಿಯೋಗ್ರಾಫಿಯನ್ನು ಮ್ಯಾನೇಜ್ ಮಾಡುತ್ತಿದ್ದೆ. ನನ್ನ ಪುಣ್ಯಕ್ಕೆ ಒಳ್ಳೆ ನಿರ್ಮಾಣ ಸಂಸ್ಥೆಯಲ್ಲಿ ಮೊದಲು ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಚಿಕ್ಕಣ್ಣವರು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.