Pahalgam ಅ ಟ್ಯಾಕ್ ಬಗ್ಗೆ ನಟಿ ರಮ್ಯಾ ಮಹತ್ವದ ಹೇಳಿಕೆ, ಮುಸ್ಲಿಮರು ಕೆಟ್ಟವರು ಅನ್ನೋದು ಸರಿಯಲ್ಲ
Apr 29, 2025, 22:28 IST
|

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಅಮಾಯಕರನ್ನು ಬಲಿ ತೆಗೆದುಕೊಂಡು ಅವರ ಕುಟುಂಬವನ್ನು ಅನಾಥರನ್ನಾಗಿ ಮಾಡಿದೆ. ಈ ಘಟನೆಯನ್ನ ಇಡೀ ಭಾರತವೇ ಖಂಡಿಸಿದ್ದು, ಈ ಬಗ್ಗೆ ಸ್ಯಾಂಡಲ್‌ವುಡ್ ನಟಿ ರಮ್ಯಾ ಮಾತನಾಡಿದ್ದಾರೆ. ಉಗ್ರರಿಗೆ ಧರ್ಮ ಇಲ್ಲ ಎಂದು ಕೇಂದ್ರದತ್ತ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಬೊಟ್ಟು ಮಾಡಿದ್ದಾರೆ. ಉಗ್ರರಿಗೆ ಧರ್ಮ,ಮನುಷ್ಯತ್ವ ಏನೂ ಇರಲ್ಲ. ಮೋದಿ ಸರ್ಕಾರವು ಈ ಬಗ್ಗೆ ಸ್ಟ್ರೀಕ್ಟ್ ಆ್ಯಕ್ಷನ್ ತೆಗೋಬೇಕು. ಯಾವ ಸಮಯದಲ್ಲಿ ಹೀಗೆ ಆಗುತ್ತೆ ಅಂತ ಊಹಿಸಲು ಅಸಾಧ್ಯ ಎಂದು ಹೇಳಿದ್ದಾರೆ.
ಇದು ಕೇಂದ್ರ ಸರ್ಕಾರದ ವೈಫಲ್ಯ ಎಂದು ಹೇಳುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಭರವಸೆ ಇದೆ ಎಂದು ಕೂಡ ರಮ್ಯಾ ಹೇಳಿದ್ದಾರೆ. ಟೆರರಿಸಂಗೆ ಧರ್ಮನೂ ಇರಲ್ಲ, ಮನುಷ್ಯತ್ವನೂ ಇರಲ್ಲ. ಉಗ್ರರ ದಾಳಿಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಹಾಗೇ ನೋಡಲು ಹೋದರೆ ಅಲ್ಲಿ ಎಲ್ಲರಿಗೆ ಸಹಾಯ ಮಾಡಿರುವುದು ಮುಸಲ್ಮಾನರೇ ಅಲ್ವಾ ಎಂದು ಪ್ರಶ್ನೆ ಮಾಡಿರುವ ರಮ್ಯಾ ಎಲ್ಲಾ ಮುಸ್ಲಿಮ್‌ರನ್ನು ನಾವು ಕೆಟ್ಟವರು ಅಂತ ಹೇಳುವುದಕ್ಕೆ ಸಾಧ್ಯ ಇಲ್ಲ ಎಂದು ನಟಿ ರಮ್ಯಾ ಅವರು ಹೇಳಿದ್ದಾರೆ.
ಇನ್ನು, ಸದ್ಯ ಚಿತ್ರರಂಗದಿಂದ ದೂರ ಸರಿದು ಆ ನಂತರ ರಾಜಕೀಯದ ಚದುರಂಗವಾಡಲು ಹೋದ ರಮ್ಯಾ ಅವರ ಸದ್ಯ ಸಕಾರಾತ್ಮಕವಾಗಿ, ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ. ಇದೀಗ ಜಮ್ಮು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೆರರಿಸಂಗೆ ಯಾವ ಧರ್ಮನೂ ಬರಲ್ಲ, ಮನುಷ್ಯತ್ವನೂ ಇರಲ್ಲ ಎಂದಿರುವ ರಮ್ಯಾ ಉಗ್ರರ ದಾಳಿಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
ಎಲ್ಲ ದೇಶಗಳಲ್ಲಿಯೂ ಈ ತರಹದ ಘಟನೆಗಳು ನಡೆಯುತ್ತವೆ. ಆದರೆ, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದಿರುವ ರಮ್ಯಾ ಈ ತರಹದ ಘಟನೆಗಳಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ನೋವು ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,17 May 2025