ಕೊನೆಗೂ ತನ್ನ ವಯಸ್ಸು ರಿವೀಲ್ ಮಾಡಿದ ನಟಿ ವೈಷ್ಣವಿ ಗೌಡ, ಇನ್ನೂ ಚಿಕ್ಕ ಮಗು ಎಂದ ನೆಟ್ಟಿಗರು

 | 
Ju
 ವೈಷ್ಣವಿ ಗೌಡ ಅಂದ್ರೆ ಕೆಲವರಿಗೆ ಬೇಗ ಗೊತ್ತಾಗಲಿಕ್ಕಿಲ್ಲ . ಬದಲಾಗಿ ಸೀತಾರಾಮ ಸೀರಿಯಲ್ ಸೀತಾ ಅಂದ್ರೆ ಪಟ್ ಅಂತ ಅರ್ಥ ಆಗುತ್ತದೆ.ಸದ್ಯ 'ಸೀತಾರಾಮ' ಸೀರಿಯಲ್‌ನ ಸೀತಾ ಪಾತ್ರದಲ್ಲಿ ಸಖತ್ತಾಗಿ ನಟಿಸ್ತಾ ಇದ್ದಾರೆ. ಅವರ ಆಕ್ಟಿಂಗ್‌ಗೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಈ ನಟಿಗೆ ಇದೀಗ ತನ್ನ ವಯಸ್ಸನ್ನ ರಿವೀಲ್‌ ಮಾಡಿದ್ದೇ ಪೇಚಿಗಿಟ್ಟುಕೊಂಡಿದೆ. 
ಸೋಷಿಯಲ್‌ ಮೀಡಿಯಾದಲ್ಲಿ ಅನೇಕ ಮಂದಿ ಫ್ಯಾನ್ಸ್‌, ಇಷ್ಟು ವಯಸ್ಸಾಯ್ತಲ್ಲಾ ಇನ್ನು ಮದುವೆ ಆಗಿ ಮೇಡಂ ಅಂತ ಹೇಳ್ತಿದ್ದಾರೆ. ಹಾಗೆ ನೋಡಿದರೆ ಈ ವೈಷ್ಣವಿ ಮದುವೆಯನ್ನು ನಿರಾಕರಿಸಿದವರಲ್ಲ. 2022ರ ನವೆಂಬರ್‌ನಲ್ಲಿ ವೈಷ್ಣವಿ ಗೌಡ, ವಿದ್ಯಾಶಂಕರ್ ಎನ್ನುವವರು ಕುಟುಂಬದ ಮುಂದೆ ಹಾರ ಹಾಕಿಕೊಂಡಿದ್ದ ಫೋಟೋವೊಂದು ವೈರಲ್ ಆಗಿತ್ತು. ಎಲ್ಲರೂ ಇದು ನಿಶ್ಚಿತಾರ್ಥ ಎಂದೇ ಭಾವಿಸಿದರು. 
ಆಮೇಲೆ ವೈಷ್ಣವಿ ಕುಟುಂಬವೇ ಇದು ನಿಶ್ಚಿತಾರ್ಥ ಅಲ್ಲ ಎಂದು ಹೂ ಮುಡಿಸುವ ಶಾಸ್ತ್ರ ಎಂದು ಸ್ಪಷ್ಟನೆ ನೀಡಿತು. ಆ ನಂತರ ವಿದ್ಯಾಶಂಕರ್ ಕುರಿತಾದ ಆಡಿಯೋವೊಂದು ವೈರಲ್ ಆಗಿತ್ತು. ಆ ನಂತರ ವೈಷ್ಣವಿ ಅವರು ವಿದ್ಯಾಶಂಕರ್ ಜೊತೆ ಸಂಬಂಧ ಮುಂದುವರೆಸೋದಿಲ್ಲ ಎಂದು ಹೇಳಿದ್ದರು.ಅದು ನನ್ನ ತಾಯಿಯಿಂದ ಬಂದ ಸಂಬಂಧವಾಗಿತ್ತು. ಕೆಲ ದಿನಗಳ ನಂತರ ಸಂದರ್ಭ ಬದಲಾಯ್ತು, ನಾವು ಸಂಬಂಧ ಮುಂದುವರೆಸಲಿಲ್ಲ. 
ಆ ಘಟನೆ ನಮ್ಮ ಹಿಂದೆ ನಡೆದಿದ್ದಾಗಿತ್ತು. ಏನಾಗತ್ತೋ ಅದು ಒಳ್ಳೆಯದಕ್ಕೆ ಆಗುವುದು. ನನಗೆ ಇಂದಿಗೂ ಕೂಡ ರಿಲೇಶನ್‌ಶಿಪ್‌ನಲ್ಲಿ ನಂಬಿಕೆಯಿದೆ. ಮುಂದೊಂದು ದಿನ ನನಗೂ ಮದುವೆಯಾಗಿ ಕುಟುಂಬ ಇರುತ್ತದೆ ಎಂದು ನಂಬಿದ್ದೇನೆ. ಆ ರೀತಿ ಘಟನೆಗಳು ನನ್ನ ನಂಬಿಕೆಯನ್ನು ಮುರಿಯೋದಿಲ್ಲ ಎಂಬ ಮಾತನ್ನು ಈ ಘಟನೆ ನಡೆದು ಎಷ್ಟೋ ದಿನಗಳ ಬಳಿಕ ಸಂದರ್ಶನವೊಂದರಲ್ಲಿ ವೈಷ್ಣವಿ ಹೇಳಿದ್ದರು. 
ಇದಾದ ಮೇಲೆ ಕ್ರಮೇಣ ವೈಷ್ಣವಿ ಮದುವೆ ಸುದ್ದಿ ಹಿನ್ನೆಲೆಗೆ ಸರಿಯಿತು.ಸೀತಾರಾಮ ಸೀರಿಯಲ್ ಮೂಲಕ ಅವರ ನಟನೆ ಮುನ್ನೆಲೆಗೆ ಬಂತು. ಸದ್ಯಕ್ಕಂತೂ ಈ ಹಿಂದಿನ ಘಟನೆಯನ್ನು ಎಲ್ಲರೂ ಮರೆತಿದ್ದಾರೆ. ಎಲ್ಲರೂ ಬೇಗ ಮದುವೆ ಆಗುವಂತೆ ವೈಷ್ಣವಿ ಅವರನ್ನು ಒತ್ತಾಯಿಸುತ್ತಿದ್ದಾರೆ. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.