ಇಡೀ ರಾಜ್ಯವೇ ಕುಶಿಪಡೋ ಸುದ್ದಿ, ಬಿಗ್ಬಾಸ್ ಬೆನ್ನಲ್ಲೇ ಮೋಕ್ಷಿತಾ ಪೈ ಗುಡ್ ನ್ಯೂಸ್

 | 
Nji
 ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದಲ್ಲಿ ಭಾಗವಹಿಸುವ ಕಂಟೆಸ್ಟೆಂಟ್‌ಗಳಿಗೆ ಆಫರ್‌ಗಳ ಕೊರತೆ ಇರಲ್ಲ. ಪ್ರತಿ ಸೀಸನ್‌ನ ಸ್ಪರ್ಧಿಗಳು ದೊಡ್ಮನೆ ಆಟ ಮುಗಿಸಿ ಹೊರ ಬರ್ತಿದ್ದಂತೆ ಅವರಿಗೆ ಎಲ್ಲಿಲ್ಲದ ಡಿಮ್ಯಾಂಡ್ ಮತ್ತು ಕ್ರೇಜ್‌ಗಳು ಹುಟ್ಟಿಕೊಳ್ಳುತ್ತೆ. ಸಿನಿಮಾ, ರಿಯಾಲಿಟಿ ಶೋಗಳು, ಸೀರಿಯಲ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಆಫರ್ಸ್‌ ಅರಸಿ ಬರುತ್ತವೆ. ಬಿಗ್‌ ಬಾಸ್'ನಿಂದ ಹೊರ ಬಂದ್ಮೇಲೆ ಅದೆಷ್ಟೋ ಸ್ಪರ್ಧಿಗಳ ಲಕ್ ಬದಲಾಗಿದೆ. 
ಇದೇ ಸಾಲಿನಲ್ಲಿ ಪಾರು ಸೀರಿಯಲ್ ಖ್ಯಾತಿಯ ನಟಿ ಹಾಗೂ ಬಿಗ್‌ ಬಾಸ್ ಕನ್ನಡ 11 ಸೀಸನ್ ನಲ್ಲಿ 3ನೇ ರನ್ನರ್‌ ಅಪ್‌ ಮೋಕ್ಷಿತಾ ಪೈ ಇದ್ದಾರೆ. ನಟಿ ಮೋಕ್ಷಿತಾ ಪೈ ಇದೀಗ ಬಿಗ್ ಅನೌನ್ಸ್‌ಮೆಂಟ್ ಮಾಡಿದ್ದಾರೆ.ಮೋಕ್ಷಿತಾ ಪೈ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಮುಂದಿನಸಿನಿಮಾದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಬೆಳ್ಳಿತೆರೆಗೆ ತಾವು ಎಂಟ್ರಿ ಕೊಡುತ್ತಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹೌದು.. ಅಂಜನಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಮೊದಲ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಜಯರಾಮ್ ಗಂಗಪ್ಪನಹಳ್ಳಿ ನಿರ್ಮಾಣ ಮತ್ತು ಧನುಷ್ ಗೌಡ ವಿ ನಿರ್ದೇಶನದಲ್ಲಿ ತಯಾರಾಗುತ್ತಿರುವ, ಈ ಸಿನಿಮಾಗೆ ಮಿಡಲ್ ಕ್ಲಾಸ್ ರಾಮಾಯಣ ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾದಲ್ಲಿ ಮೋಕ್ಷಿತಾ ಪೈ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ವೇಣು ಗೌಡ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಪಾರು ಆಗಿ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ನಟಿ ಮೋಕ್ಷಿತಾ ಪೈ ಇದೀಗ ಬೆಳ್ಳಿಪರದೆ ಮೇಲೆ ಮಿಂಚೋಕೆ ರೆಡಿಯಾಗಿದ್ದಾರೆ.
ಮೋಕ್ಷಿತಾ ಪೈ ನಟಿಯಾಗಿ ಅಭಿನಯಿಸುತ್ತಿರುವ ಮಿಡಲ್ ಕ್ಲಾಸ್ ರಾಮಾಯಣ ಸಿನಿಮಾದ ತಾರಾಗಣದ ಮಾಹಿತಿಯನ್ನೂ ಚಿತ್ರತಂಡ ಶೇರ್ ಮಾಡಿಕೊಂಡಿದೆ. ಜಗಪ್ಪ, ವೀಣಾ ಸುಂದರ್, ತುಕಾಲಿ ಸಂತೋಷ್, ಹುಲಿ ಕಾರ್ತಿಕ್, ಸುಶ್ಮಿತಾ ಸೇರಿದಂತೆ ಇನ್ನೂ ಅನೇಕರು ಈ ಸಿನಿಮಾದಲ್ಲಿ‌ ಕಾಣಿಸಿಕೊಳ್ಳಲಿದ್ದಾರೆ. ಈ ಲಿಸ್ಟ್ ನೋಡುತ್ತಿದ್ದರೆ ಇದೊಂದು ಪಕ್ಕಾ ಹಾಸ್ಯ ಚಟಾಕಿಯುಳ್ಳ ಸಿನಿಮಾ ಅನ್ನೋದರಲ್ಲಿ ಎರಡು ಮಾತಿಲ್ಲ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.