ಪವಿತ್ರ ಜಯರಾಮ್ ಸಾವಿನ ಬಳಿಕ ಬಯಲಾಯಿತು ದೊಡ್ಡ ರಹ ಸ್ಯ

 | 
Hi

ಪ್ರೀತಿಸಿದವರು ಇಲ್ಲವಾದರು ಎಂದು ಪ್ರಾಣ ನೀಡುವವರು ಕೆಲವರು ಅಂತವರ ಸಾಲಿಗೆ ಈದೀಗ ಇವರಿಬ್ಬರೂ ಸೇರಿದ್ದಾರೆ. ನಟಿ ಪವಿತ್ರಾ ಜಯರಾಂ ಅವರು ನಿಧನ ಹೊಂದಿದ ಬೆನ್ನಲ್ಲೇ ಅವರ ಗೆಳೆಯ ಚಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೂ ತಮ್ಮ ಪತಿ ಸಾವಿನ ಬಗ್ಗೆ ಮಾತನಾಡಿರುವ ಕಿರುತೆರೆ ನಟ ಚಂದು ಪತ್ನಿ ಶಿಲ್ಪಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಚಂದು ಹಾಗೂ ಪವಿತ್ರಾ ಅವರ ಸ್ನೇಹ ಬರೀ ಸ್ನೇಹವಾಗಿಲ್ಲ. ಅವರಿಬ್ಬರು ತುಂಬಾ ಆತ್ಮೀಯರಾಗಿದ್ದರು. ಇಬ್ಬರು ಗಂಡ – ಹೆಂಡತಿಯಂತೆ ಇದ್ದರು ಎಂದು ಚಂದು ಪತ್ನಿ ಶಿಲ್ಪಾ ತಿಳಿಸಿದ್ದಾರೆ.

ನಾನು, ನನ್ನ ಗಂಡ ತುಂಬ ಚೆನ್ನಾಗಿದ್ದೆವು. ಪವಿತ್ರಾ ಬಂದಮೇಲೆ ಎಲ್ಲ ಹಾಳಾಯ್ತು. ನನಗೆ 4 ವರ್ಷದ ಒಂದು ಮಗು, 8 ವರ್ಷದ ಒಂದು ಮಗು ಇದೆ. ಮೊದಲೆಲ್ಲ ಚಂದು ಮಕ್ಕಳನ್ನು ನೋಡದೆ ಇರುತ್ತಿರಲಿಲ್ಲ. ಚಂದ್ರಕಾಂತ್ ಜೀವನಕ್ಕೆ ಪವಿತ್ರಾ ಬಂದಮೇಲೆ ಅವರು ಮನೆಗೆ ಬರೋದು ಅಪರೂಪ ಆಗಿತ್ತು. ಪವಿತ್ರಾ ಜಯರಾಮ್ ಅವರು ಸಾಯುವ 4 ದಿನದ ಮುಂಚೆ ಚಂದ್ರಕಾಂತ್ ಜೊತೆ ಊಟಿಗೆ ಹೋಗಿದ್ದರು. 

ಅಲ್ಲಿ ಅವರು ರೀಲ್ಸ್‌ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು ಎಂದು ಶಿಲ್ಪಾ ಹೇಳಿದ್ದಾರೆ. 2004ರಲ್ಲಿ ನನಗೂ ಚಂದ್ರಕಾಂತ್​ಗು ಪರಿಚಯವಾಯ್ತು. ಅಲ್ಲಿಂದಲೂ ನಾವು ಇಷ್ಟಪಡ್ತಿದ್ದೀವಿ. ಆದರೆ ಮನೆಯವರು ಒಪ್ಪಿಗೆ ಕೊಟ್ಟಿರಲಿಲ್ಲ. ಆಮೇಲೆ ಡಿಮ್ಯಾಂಡ್​ ಮಾಡಿ ಮದುವೆ ಆಗಿದ್ದೆ. ತುಂಬಾ ಅದ್ಧೂರಿಯಾಗಿ ಮದುವೆ ಮಾಡಿದ್ದರು. ಆದರೀಗ ನನಗೆ 8 ವರ್ಷದ ಮಗಳು ಮತ್ತು 4 ವರ್ಷ ಮಗ ಇದ್ದಾನೆ.

ಚಂದು ಆಗಾಗ ಬಂದು ಮಕ್ಕಳನ್ನ ನೋಡ್ಕೊಂಡು ಹೋಗ್ತಿದ್ದ. ಲಾಕ್​ಡೌನ್​ ಆದ್ಮೇಲೆ ಚಂದು-ಪವಿತ್ರಾ ರಿಲೇಶನ್​ಷಿಪ್ ಆರಂಭವಾಯ್ತು. ಇವರ ಸಂಬಂಧ ಶುರುವಾದ್ಮೇಲೆ ನನ್ನ ಮೇಲೆ ದೌರ್ಜನ್ಯ ನಡೆಸಿದ್ದರು. ಯಾವಾಗಲೂ ನಿಂದಿಸಿ, ಹಲ್ಲೆ ಮಾಡಿದ್ದಾರೆ. ನನ್ನ ಗಂಡನೇ ಸರ್ವಸ್ವ ಎಂದು ಬದುಕಿದ್ದೆ. ಇವತ್ತು ನನ್ನ ಬಿಟ್ಟು ಹೋದ ಎಂದಿದ್ದಾರೆ.

ಪವಿತ್ರಾ ವಿಷಯ ಗೊತ್ತಾದ್ಮೇಲೆ ಮನೆಯಲ್ಲಿ ಯಾವಾಗಲೂ ಜಗಳ ನಡೆಯುತ್ತಿತ್ತು. ಫೋನ್​ ಮಾಡಿ ನನಗೆ ಬೆದರಿಕೆ ಹಾಕಿದ್ದರು. ಚಂದ್ರಕಾಂತ್ ನನ್ನ ಗಂಡ ಕಣೇ. ನೀನಗೇನು ಎಂದು ಪವಿತ್ರಾ ಹೇಳಿದ್ದಳು. ಪವಿತ್ರಾ ಅವರ ಮಗನ ಬಳಿ ಈ ಬಗ್ಗೆ ಪ್ರಶ್ನಿಸಿದ್ದೆ. ಆದರೂ ಮಗನೂ ನನಗೆ ಬೈಯ್ದಿದ್ದ. ಅವರಿಬ್ಬರು ಖುಷಿಯಾಗಿದ್ದಾರೆ, ಇರಲಿ ಬಿಡಿ ಎಂದು ಪವಿತ್ರಾ ಮಗ ಹೇಳಿದ್ದಾಗಿ ಶಿಲ್ಪಾ ತಿಳಿಸಿದ್ದಾರೆ. 

ಮನೆಯಲ್ಲಿ ಕುಡಿದು ಬಂದು ಜಗಳ ಮಾಡ್ತಿದ್ದ. ಯಾವಾಗಲೂ ಪವಿತ್ರಾ ಬಗ್ಗೆನೇ ಯೋಚನೆ ಮಾಡ್ತಿದ್ದ. ಮಹಿಳಾ ಮಂಡಲದಲ್ಲಿ ದೂರು ಸಹ ಕೊಟ್ಟಿದೆ. ಅಲ್ಲಿ ಚಂದು ಪವಿತ್ರಾ ನನ್ನ ಲೈಫ್ ಎಂದು ಹೇಳಿದ್ದ. ಈಗ ಅವಳ ಹಿಂದೆಯೇ ಹೋದ ಎಂದು ಕಣ್ಣಿರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.