ವರ್ತೂರು ಸಂತೋಷ್ ಅ.ರೆಸ್ಟ್ ಬೆನ್ನಲ್ಲೇ, ಹಳೆ ಅಡಿಯೋ ಮತ್ತೆ ಸದ್ದು

 | 
ಕ್ಕಾ

ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದ ಹಳ್ಳಿಕಾರ್ ಒಡೆಯನನ್ನು ಬಂಧಿಸಲಾಗಿದೆ. ಸಾಕ್ಷಿ ಸಮೇತ ಬಿಗ್‌ಬಾಸ್‌ ಮನೆಯಿಂದ ಕರೆದುಕೊಂಡು ಬಂದಿರುವ ಅರಣ್ಯಾಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ವರ್ತೂರು ಸಂತೋಷ್‌ ಡಿಫರೆಂಟ್ ಲೈಫ್ ಸ್ಟೈಲ್‌ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಯಾರು ಈ ವರ್ತೂರು ಸಂತೋಷ್. 

ಮಾಡರ್ನ್ ರೈತರಾಗಿರೋ ವರ್ತೂರು ಸಂತೋಷ್ ಅವರು ಬೆಂಗಳೂರು ಗ್ರಾಮಾಂತರದ ವರ್ತೂರಿನಲ್ಲಿ ಹಲವು ಪ್ರಾಣಿಗಳನ್ನ ಸಾಕಿದ್ದಾರೆ. ಗ್ರಾಜ್ಯುವೇಶನ್ ಮಾಡಿದ್ದರೂ ರೈತನಾಗಿಯೇ ಕಾರ್ಯ ನಿರ್ವಹಣೆ ಮಾಡಿರೋ ವರ್ತೂರು ಸಂತೋಷ್ ಅವರು ತಮ್ಮ ಅಜ್ಜಿಯಿಂದ ಸ್ಫೂರ್ತಿ ಪಡೆದು ಹಳ್ಳಿಕಾರ್‌ ದನ ಸಾಕಲು ಶುರು ಮಾಡಿದರು. ಹಳ್ಳಿಕಾರ್‌ ತಳಿಯ ಜಾನುವಾರು ಸಾಕಾಣಿಕೆಯಿಂದ ಇವರು ಜನಪ್ರಿಯತೆ ಹೊಂದಿದರು.

ಅಖಿಲ ಭಾರತ ಹಳ್ಳಿಕಾರ್‌ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಹೀಗಾಗಿ ಹಳ್ಳಿಕಾರ್‌ ಒಡೆಯ ಎಂದೇ ಸಂತೋಷ್ ಅವರು ಜನಪ್ರಿಯತೆ ಪಡೆದಿದ್ದಾರೆ. ಹಳ್ಳಿಕಾರ್ ತಳಿಯ ಹೋರಿಗಳು ಇತ್ತೀಚೆಗೆ ಕಣ್ಮರೆಯಾಗುತ್ತಿವೆ. ಇರುವಷ್ಟು ತಳಿಗಳನ್ನಾದ್ರು ಉಳಿಸಿಕೊಳ್ಳೋ ಪ್ರಯತ್ನ ಮಾಡೋಣ ಅನ್ನುವುದೇ ವರ್ತೂರ್ ಸಂತೋಷ್ ಅವ್ರ ಮಹದಾಸೆ. 

ಸೋಷಿಯಲ್ ಮೀಡಿಯಾದಲ್ಲಿ ಇವರ ಈ ಒಳ್ಳೆಯ ಕೆಲಸಗಳಿಗೆ ಸಾಕಷ್ಟು ಜನರ ಬೆಂಬಲ ಕೂಡ ಸಿಕ್ಕಿದೆ. ಈ ಒಳ್ಳೆಯ ಉದ್ದೇಶದಿಂದಲೇ ವರ್ತೂರು ಸಂತೋಷ್ ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ ಕೂಡ ಆಗಿದ್ದರು. ಈ ಹಿಂದೆ ಹಳ್ಳಿಕಾರ್ ದನವನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ತರುವಾಗ ಪೊಲೀಸರೊಂದಿಗೆ ನಡೆದ ಮಾತುಕತೆಯೊಂದು ಇದೀಗ ವೈರಲ್ ಆಗ್ತಿದೆ. 

ಹೌದು ಪೊಲೀಸರು ಕಸಾಯಿಖಾನೆಗೆ ಅಂದುಕೊಂಡು ಮಾತನಾಡಿದ್ದು ಹಾಗೂ ಅವರಿಗೆ ಅರ್ಥವಾಗುವ ರೀತಿಯಲ್ಲಿ ವರ್ತೂರ್ ಸಂತೋಷ್ ಹೇಳಿದ್ದು ನೋಡಿದರೆ ಇವರ ಪ್ರಾಣಿ ಪ್ರೇಮ ಅರಿವಾಗುತ್ತದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.