ಚೈತ್ರ ಕುಂದಾಪುರ ವಿರುದ್ಧ ಮತ್ತೊಂದು ಕೋಟಿ ಕೋಟಿಯ ಹಗರಣ, ಹಿಂದೂತ್ವದ ಭಾಷಣ ಮಾಡಿ ಲೂಟಿ ಮಾಡಿದ್ದೆಷ್ಟು ಗೊತ್ತಾ

 | 
Hz

ಚೈತ್ರಾ ಕುಂದಾಪುರ ಪ್ರಕರಣದ ಮೂರನೇ ಆರೋಪಿಯಾಗಿರುವ ವಿಜಯನಗರ ಜಿಲ್ಲೆಯ ಹಿರೇಹಡಗಲಿಯ ಸದ್ಗುರು ಶಿವಯೋಗಿ ಹಾಲಸ್ವಾಮಿ ಸಂಸ್ಥಾನ ಮಠದ ಅಭಿನವ ಹಾಲವೀರಪ್ಪಜ್ಜ ಅಲಿಯಾಸ್ ಹಾಲಶ್ರೀ ಸ್ವಾಮಿಗಳ ವಿರುದ್ಧ ಮತ್ತೊಂದು ವಂಚನೆಯ ದೂರು ದಾಖಲಾಗಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಸೆ. 19ರಂದು ಈ ದೂರು ದಾಖಲಾಗಿದೆ. 

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಣತೂರುನಲ್ಲಿ ಪಿಡಿಒ ಆಗಿ ಸೇವೆ ಸಲ್ಲಿಸುತ್ತಿದ್ದ ಸಂಜಯ್ ಚವಡಾಳ ಎಂಬುವರು ಈ ದೂರು ದಾಖಲಿಸಿದ್ದಾರೆ. ಅದರಂತೆ, 2023 ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ತಾವು, ಬಿಜೆಪಿ ಟಿಕೆಟ್ ಗಾಗಿ ಹಾಲಶ್ರೀ ಸ್ವಾಮೀಜಿಗಳನ್ನು ಸಂಪರ್ಕಿಸಿದ್ದು, ಟಿಕೆಟ್ ಗಾಗಿ ಸ್ವಾಮೀಜಿಯವರಿಗೆ 1 ಕೋಟಿ ರೂ. ನೀಡಿದ್ದಾಗಿ ಹೇಳಿದ್ದಾರೆ. 

ಮೂರು ಹಂತಗಳಲ್ಲಿ 1 ಕೋಟಿ ರೂ.ಗಳಷ್ಟು ಹಣವನ್ನು ಹಾಲಶ್ರೀ ಸ್ವಾಮೀಜಿಯವರಿಗೆ ತಲುಪಿಸಿದ್ದಾಗಿ ಸಂಜಯ್ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿಗೆ ಪೂರಕವಾದ ಸಾಕ್ಷ್ಯಾಧಾರಗಳನ್ನು, ದಾಖಲೆಗಳನ್ನು ನೀಡುವಂತೆ ಪೊಲೀಸರು ಕೇಳಿದ್ದು ಆ ದಾಖಲೆಗಳನ್ನು ಇಷ್ಟು ದಿನವಾದರೂ ಸಂಜಯ್ ಅವರು ಕೊಟ್ಟಿಲ್ಲ. ಹಾಗಾಗಿ, ಅವರ ದೂರನ್ನು ಅಪೀಲಿನ ಮಾದರಿಯಲ್ಲಿ ಇರಿಸಲಾಗಿದೆ. 

ಸಂಜಯ್ ಅವರು ಸಾಕ್ಷ್ಯಾಧಾರಗಳನ್ನು ಒದಗಿಸಿದ ನಂತರ ಎಫ್ಐಆರ್ ಮಾಡಲಾಗುತ್ತದೆ ಎಂದು ಠಾಣೆಯ ಪೊಲೀಸರು ಹೇಳಿದ್ದಾರೆ. ತಮ್ಮದೇ ಆ ಸಮಾಜ ಸೇವಾ ಸಂಸ್ಥೆಯೊಂದನ್ನು ನಡೆಸಿದ್ದ ಸಂಜಯ್ ಅವರಿಗೆ ಸಮಾಜ ಸೇವೆಯನ್ನು ಮಾಡಬೇಕೆಂಬ ಇರಾದೆ ಇದ್ದಿದ್ದರಿಂದಾಗಿ, ಅವರು ರಾಜಕೀಯ ಸೇರಲು ಬಯಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಟಿಕೆಟ್ ಬಯಸಿದ್ದರೆಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ. 

ಅಲ್ಲದೆ, ಮೊದಲ ಹಂತದಲ್ಲಿ 40 ಲಕ್ಷ ರೂ. ಆನಂತರದಲ್ಲಿ 20 ಲಕ್ಷ ರೂ.ಗಳನ್ನು ಸ್ವಾಮೀಜಿಯವರಿಗೆ ನಗದು ರೂಪದಲ್ಲೇ ನೀಡಿದ್ದ ಸಂಜಯ್, ಆನಂತರ ಉಳಿದ ಹಣವನ್ನು ಸ್ವಾಮೀಜಿಯವರು ಪ್ರವಾಸದಲ್ಲಿದ್ದಾಗ ತಾವೇ ಖುದ್ದಾಗಿ ಹೋಗಿ ತಲುಪಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆಂದು ಮೂಲಗಳು ಹೇಳಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.