ಇನ್ನೂ ಮದುವೆಯಾಗಿಲ್ಲ, ಅಷ್ಟರಲ್ಲೇ ಭಾವಿ ಪತಿ ಜೊತೆ ಅರ್ಜುನ್ ಸರ್ಜಾ ಮಗಳ ಭರ್ಜರಿ ಡ್ಯಾನ್ಸ್

 | 
ರರ

ಇತ್ತೀಚಿಗಷ್ಟೇ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಸರ್ಜಾ ಚೆನ್ನೈನಲ್ಲಿ ಅಧಿಕೃತವಾಗಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತಮಿಳು ಹಾಸ್ಯನಟ ತಂಬಿ ರಾಮಯ್ಯ ಪುತ್ರ ಉಮಾಪತಿ ಜೊತೆ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
    
ಕನ್ನಡ ಸಿನಿರಂಗದಲ್ಲಿ ಪ್ರೇಮಬರಹ ಬರೆಯಲು ಹೊರಟಿದ್ದ ಚೆಲುವೆ ಈಗ ಹಸೆಮಣೆ ಏರಲಿದ್ದಾರೆ. ಕೆಲ ದಿನಗಳಿಂದ ತಮಿಳು ಸಿನಿ ವಲಯದಲ್ಲಿ ಐಶ್ವರ್ಯಾ ಸರ್ಜಾ ಮತ್ತು ಉಮಾಪತಿ ರಾಮಯ್ಯ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇಂದು ಅವರ ಸಂಬಂಧಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

ಅರ್ಜುನ್ ಪುತ್ರಿ ಐಶ್ವರ್ಯ ಅಧಿಕೃತವಾಗಿ ನಟ ಉಮಾಪತಿ ರಾಮಯ್ಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳಿನಲ್ಲಿ ಆ್ಯಕ್ಷನ್ ಹೀರೋ ಇಮೇಜ್ ಹೊಂದಿರುವ ನಟ ಅರ್ಜುನ್ ಸರ್ಜಾ ಇಂದಿನವರೆಗೂ ಸಿನಿಮಾ ರಂಗದಲ್ಲಿ ತಮ್ಮದೆ ಛಾಪು ಮೂಡಿಸಿದ್ದಾರೆ. ನಟನೆ ಜೊತೆಗೆ ಈ ನಡುವೆ ನಿರ್ದೇಶಕರಾಗಿಯೂ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ತಮ್ಮ ಮಗಳು ಐಶ್ವರ್ಯ ಸರ್ಜಾ ಅವರನ್ನು ನಾಯಕಿಯಾಗಿ ಮಾಡಲು ಪ್ರಯತ್ನ ಪಟ್ಟಿದ್ದ ಅವರು, 5 ವರ್ಷಗಳ ಹಿಂದೆ ಅ ಪ್ರೇಮ ಬರಹ ಚಿತ್ರದಲ್ಲಿ ಐಶ್ವರ್ಯಾ ಅವರನ್ನು ನಾಯಕಿಯಾಗಿ ಲಾಂಚ್ ಮಾಡಿದ್ದರು. ಕಿರುತೆರೆಯಲ್ಲಿ ಖ್ಯಾತಿ ಪಡೆದಿದ್ದ ಚಂದನ್ ಜೋಡಿಯಾಗಿ ನಟಿ ಸಿನಿಮಾದಲ್ಲಿ ನಟಿಸಿದ್ದರು. ಇದೇ ಸಿನಿಮಾ ತಮಿಳಿಗೂ ಡಬ್ ಆಗಿತ್ತು. 

ಆ ನಂತರ ಯಾವುದೇ ಸಿನಿಮಾದಲ್ಲಿ ಐಶ್ವರ್ಯ ನಟಿಸಲಿಲ್ಲ. ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಆದರೆ ಐಶ್ವರ್ಯ ಸರ್ಜಾ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ಟಿವ್ ಆಗಿರುವ ಕಾರಣ ಅಭಿಮಾನಿಗಳೊಂದಿಗೆ ಟಚ್ ಅಲ್ಲಿದ್ದಾರೆ.

ಇನ್ನು ನಿನ್ನೆ ತಮ್ಮ ಭಾವಿ ಪತಿಯ ಹುಟ್ಟು ಹಬ್ಬವನ್ನು ಗ್ರಾಂಡ್ ಆಗಿ ಆಚರಿಸಿ ಅದರ ವಿಡಿಯೋವನ್ನು ತಮ್ಮ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.