ಅಪ್ಪು ಸಾವಿನ ಬಳಿಕ ಮೊದಲ ಬಾರಿ ಭರ್ಜರಿ ಭೋಜನ ಕಾರ್ಯಕ್ರಮದಲ್ಲಿ ಅಶ್ವಿನಿ ಮೇಡಂ

 | 
ಸಿ

ಅಶ್ವಿನಿ ಪುನೀತ್ ಅವರು ದುಬೈ ಇಂದ ಬಂದ ಮೇಲೆ ಮೊದಲಿಗಿಂತ ಹೆಚ್ಚು ಬ್ಯುಸಿ ಆಗಿದ್ದಾರೆ. ಹೌದು
ಬೆಂಗಳೂರಿನ 60ರ ದಶಕದ ಅವಿಭಕ್ತ ಕುಟುಂಬದ ಕಥೆಯನ್ನು “ಆಚಾರ್ ಅಂಡ್ ಕೋ” ಚಿತ್ರದ ಮೂಲಕ ತೆರೆಗೆ ಕಟ್ಟಿಕೊಡಲು ಯುವ ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ಮುಂದಾಗಿದ್ದಾರೆ. ಪಿಆರ್‍ಕೆ ಪ್ರೊಡಕ್ಷನ್ ಸಂಸ್ಥೆಯಿಂದ ಚಿತ್ರ ನಿರ್ಮಿಸಲಾಗಿದ್ದು ಮುಂದಿನವಾರ ಚಿತ್ರ ತೆರೆಗೆ ಬರಲಿದೆ. 

ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ. ಚಿತ್ರದಲ್ಲಿ ಹಿರಿಯ ಕಲಾವಿದ ಅಶೋಕ್, ಸುದಾ ಬೆಳವಾಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ಮಾತನಾಡಿ, ಆಚಾರ್ ಅಂಡ್ ಕೋ ಚಿತ್ರದ ಕಥೆಯ ಬಗ್ಗೆ ಪುನೀತ್ ರಾಜ್‍ಕುಮಾರ್ ಹೇಳಿದ್ದೆ ಅವರು ಕೇಳಿ ಮೆಚ್ಚಿಕೊಂಡಿದ್ದರು. 

ಅದನ್ನು ಅಶ್ವಿನಿ ಮೇಡಂ ಅವರ ಬಳಿ ಚರ್ಚೆ ಮಾಡಿದ್ದರು. ಅಪ್ಪು ಸರ್ ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಕಥೆ ಕೇಳಿ ನಮ್ಮ ಮೇಲೆ ನಂಬಿಕೆ ವಿಶ್ವಾಸವಿಟ್ಟು ಪ್ರೋತ್ಸಾಹ ನೀಡಿದರು. ಯಾವುದೇ ವಿಷಯವನ್ನು ಅವರು ತುರುಕುವ ಕೆಲಸ ಮಾಡಲಿಲ್ಲ. ಹೆಚ್ಚು ಸ್ವಾತಂತ್ರ್ಯ ನೀಡಿದ್ದರು. ಹೀಗಾಗಿ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರು. ಬೆಂಗಳೂರಿನ ಮಧುಸೂದನ್ ಆಚಾರ್, ಸಾವಿತ್ರಿ ಆಚಾರ್ ಹಾಗೂ ಅವರ ಹತ್ತು ಜನ ಮಕ್ಕಳ ಸುತ್ತ ನಡೆಯುವ ಕಥೆ. 

ಅರವತ್ತರ ದಶಕದಲ್ಲಿ ನಡೆಯುವ ಕಥೆಯಲ್ಲಿ ಅಧುನಿಕತೆ ಕಾಣಬಾರದು ಎನ್ನುವ ಉದ್ದೇಶದಿಂದ ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು. ಛಾಯಾಗ್ರಹಕ ಅಭಿಮನ್ಯು ಸದಾನಂದನ್, ನಟರಾದ ಹರ್ಷಿಲ್ ಕೌಶಿಕ್ ಸೇರಿದಂತೆ ಮತ್ತಿತರರು ಮಾಹಿತಿ ಹಂಚಿಕೊಂಡರು.ಚಿತ್ರ ನಿರ್ಮಾಣ ಮಾಡುವಾಗ ಒಳ್ಳೆಯ ಕಂಟೆಂಟ್‍ಗಳಿಗೆ ಆದ್ಯತೆ ನೀಡುತ್ತೇವೆ. ಅದನ್ನು ಬಿಟ್ಟು ಯಾವುದೇ ತಾರತಮ್ಯ ಮಾಡುವುದಿಲ್ಲ. 

ಮಹಿಳಾ ನಿರ್ದೇಶಕರು ಮತ್ತು ತಂತ್ರಜ್ಞರಿಗೂ ಹೆಚ್ಚು ಒತ್ತು ನೀಡುತ್ತೇವೆ. ಚಿತ್ರ ನೋಡಿದ್ದೇನೆ ಚೆನ್ನಾಗಿ ಮೂಡಿ ಬಂದಿದೆ. ಎಂದು ಅಶ್ವಿನಿ ಪುನೀತ್ ರಾಜಕುಮಾರ್ ನುಡಿದಿದ್ದಾರೆ. ನಂತರದಲ್ಲಿ ಸಿಂಧು ಅವರೊಂದಿಗೆ ಅಶ್ವಿನಿ ಅವರು ಲಂಚ್ ಸ್ವೀಕರಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.