ಕರ್ನಾಟಕ ಕೇರಳ ಗಡಿಯಲ್ಲಿ ಗಾಂ.ಜಾ ಗಮ್ಮತ್ತು, ಯುವಕ ಯುವತಿಯರ ಅಮಲಿನ ಮಜಾ

 | 
Nhh

ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಮೈಸೂರು ಜಿಲ್ಲೆಯ ಗಡಿ ಪ್ರದೇಶದಲ್ಲಿ ಹೆಚ್ಚಾಗಿದೆ . ಅದರಲ್ಲೂ ಗಾಂಜಾ ಮಾರಾಟ ಎಗ್ಗಿಲ್ಲದೇ ಸಾಗಿದ್ದು , ಯುವ ಸಮೂಹ ಗಾಂಜಾ ಸೇದಿ ಅರೆಪ್ರಜ್ಞಾ ಸ್ಥಿತಿಗೆ ತಲುಪಿ, ಮನಬಂದಂತೆ ವರ್ತಿಸೋದು ಕಾಮನ್ ಆಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವೀಡಿಯೋ ವೈರಲ್ ಒಂದು ಸದ್ಯ ಆಗಿದ್ದು , ಎಲ್ಲೆಡೆ ವ್ಯಾಪಕ ಚರ್ಚೆಯಾಗಿದೆ.

ಗಾಂಜಾ ಗುಂಗಲ್ಲಿ ಯುವಕ-ಯುವತಿಯರು ತೇಲಾಡಿದ ವೀಡಿಯೋ ಸದ್ಯ ಮೈಸೂರು ಭಾಗದಲ್ಲಿ ಸಿಕ್ಕಾಪಟ್ಟೆ ಚರ್ಚೆ ಹುಟ್ಟುಹಾಕಿದೆ. ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಗಾಂಜಾ ಘಾಟು ವ್ಯಾಪಿಸಿದ್ದು , ನಶೆಯಲ್ಲಿ ಯುವಕ ಯುವತಿಯರು ತೇಲಾಡಿ ಮೈಮರೆತಿದ್ದಾರೆ. ಸರಗೂರಿನ ಗೋಳೂರಿನಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟ ಜಾಲ ಇದೆ ಎಂಬ ಆರೋಪ ಬಹಳ ದಿನದಿಂದ ಕೇಳಿಬಂದಿತ್ತು.

ಈಗ ಅದೇ ಗ್ರಾಮದಲ್ಲಿ ಯುವಕ ಯುವತಿಯರು ಗಾಂಜಾ ಗಮ್ಮತ್ತಲ್ಲಿ ಓಡಾಡ್ತಿರೋ ವಿಡಿಯೋ ವೈರಲ್ ಆಗಿದೆ. ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದು ಒದ್ದಾಡುವ ಯುವತಿಯರು ಮಲಯಾಳಂ ಭಾಷೆ ಮಾತಾಡ್ತಿದ್ದಾರೆ. ಪ್ರಶ್ನಿಸಲು ಹೋದರೆ ಗ್ರಾಮಸ್ಥರ ಮೇಲೆಯೇ ಹಲ್ಲೆಗೆ ಯತ್ನ ಮಾಡಿದ್ದಾರೆ. ಹೌದು ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಗಾಂಜಾ ಮತ್ತಲ್ಲಿ ಯುವಕ-ಯುವತಿಯರು ತೇಲಾಡಿದ್ದಾರೆ. ಮೈಸೂರಿನ ಸರಗೂರು ಸಮರೂರು ಸಮೀಪ ಗೋಳೂರಿನಲ್ಲಿ ಮಾದಕ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗ್ತಿದೆ.

ಗಾಂಜಾ ಸೇವನೆಯಿಂದ ಯುವತಿಯರು ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದು ಒದ್ದಾಡ್ಡಿದ್ದಾರೆ. ಇನ್ನು, ಗ್ರಾಮಸ್ಥರು ಪ್ರಶ್ನಿಸಲು ಹೋದ್ರೆ ಗ್ರಾಮಸ್ಥರ ಮೇಲೆಯೇ ಹಲ್ಲೆಗೆ ಯತ್ನಸಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಪೊಲೀಸರು ಕಣ್ಮಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಾಂಜಾ ಮಾರಾಟ ತಪ್ಪಿಸಿ ಅಂತಾ ಗ್ರಾಮಸ್ಥರು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.