ಬೆಂಗಳೂರಿನ ಪ್ರತಿಷ್ಠಿತ ಮಾಲ್ ನಲ್ಲಿ ಅಸಹ್ಯ ಘಟನೆ, ರೊಚ್ಚಿಗೆದ್ದ ಜನ

 | 
ಲಪು

ಬೆಂಗಳೂರು ನಗರದ ಪ್ರತಿಷ್ಠಿತ ಶಾಪಿಂಗ್ ಮಾಲ್ ಗಳಲ್ಲೊಂದಾದ ಲುಲು ಮಾಲ್ ನಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬ ಮಾಲ್ ಗೆ ಬಂದಿದ್ದ ಯುವತಿಯರು ಹಾಗೂ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಚಾರವೊಂದು ಬೆಳಕಿಗೆ ಬಂದಿದೆ. ಅಕಸ್ಮಾತ್ ಆಗಿ ಮಹಿಳೆಯರಿಗೆ ಡಿಕ್ಕಿ ಹೊಡೆದಂತೆ ಮಾಡುತ್ತಿದ್ದ ಆತ, ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಅದೇ ಮಾಲ್ ಗೆ ಬಂದಿದ್ದ ಯಶವವಂತ್ ಎಂಬ ಯುವಕನೊಬ್ಬ ತಮ್ಮ ಮೊಬೈಲ್ ಮೂಲಕ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮೂಡಿಬಂದ ಈ ವಿಡಿಯೋವನ್ನು ಎತ್ತಿಕೊಂಡ ಕೆಲವು ಮಾಧ್ಯಮಗಳು ತಮ್ಮಲ್ಲಿ ಈ ಬಗ್ಗೆ ವರದಿಯನ್ನು ಪ್ರಕಟಿಸಿದ ಕೂಡಲೇ ಎಚ್ಚೆತ್ತ ಪೊಲೀಸ್ ಇಲಾಖೆ, ಆ ವ್ಯಕ್ತಿಯ ಪತ್ತೆಗೆ ಮುಂದಾಗಿದೆ. ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಆತನ ವರ್ತನೆಯನ್ನು ವಿಡಿಯೋ ಸಾಕ್ಷಿ ಸಹಿತ ಪೋಸ್ಟ್ ಮಾಡಿದ್ದ ಯಶವಂತ್ ಅವರಿಂದ ಹೆಚ್ಚಿನ ಮಾಹಿತಿಯನ್ನು ಬೆಂಗಳೂರು ಪೊಲೀಸರು ಕೇಳಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಘಟನೆಯ ವೃತ್ತಾಂತವನ್ನು ಯಶವಂತ್ ಅವರು ಬಿಚ್ಚಿಟ್ಟಿದ್ದಾರೆ. ನಾನು ಇತ್ತೀಚೆಗೆ ಲುಲು ಮಾಲ್ ಗೆ ನನ್ನ ಕುಟುಂಬದ ಸದಸ್ಯರೊಂದಿಗೆ ಹೋಗಿದ್ದಾಗ ನಡೆದ ಘಟನೆಯಿದು. ನಾನು, ನನ್ನ ತಂಗಿ ಇಬ್ಬರೂ ಗೇಮ್ಸ್ ವಿಭಾಗದಲ್ಲಿ ಕೆಲವು ಆಟಗಳನ್ನು ಆಡುತ್ತಿದ್ದೆವು. ನನಗಿಂತ ಸ್ವಲ್ಪ ದೂರದಲ್ಲಿದ್ದ ನನ್ನ ತಂಗಿ, ಒಮ್ಮೆಲೆ ನನ್ನ ಬಳಿಗೆ ಬಂದು ಒಬ್ಬ ವ್ಯಕ್ತಿಯನ್ನು ತೋರಿಸಿ, ಆ ವ್ಯಕ್ತಿಯು ಮಹಿಳೆಯರ ಜೊತೆಗೆ ಅನುಚಿತವಾಗಿ ವರ್ತಿಸುತ್ತಿದ್ದಾನೆಂದು ತನಗೆ ಅನ್ನಿಸುತ್ತಿರುವುದಾಗಿ ಹೇಳಿದಳು. ಆತನ ಮೇಲೆ ಒಂದು ಕಣ್ಣಿಡುವಂತೆಯೂ ಕೇಳಿದಳು ಎಂದು ಹೇಳಿದ್ದಾರೆ.

ನನ್ನ ತಂಗಿ ಹೇಳಿದಂತೆ ನಾನು ಆ ವ್ಯಕ್ತಿಯ ಮೇಲೆ ಕಣ್ಣಿಟ್ಟಿದ್ದೆ. ನನ್ನ ತಂಗಿ ಹೇಳಿದ್ದು ನಿಜವಾಗಿತ್ತು. ಆತ ನಿಜವಾಗಿಯೂ ಮಾಲ್ ನಲ್ಲಿ ಅಡ್ಡಾಡುವ ಮಹಿಳೆಯರ ಜೊತೆಗೆ ಅನುಚಿತವಾಗಿ ವರ್ತಿಸುತ್ತಿದ್ದ. ಸುಮ್ಮನೇ ಮಹಿಳೆಯರಿಗೆ ಡಿಕ್ಕಿ ಹೊಡೆಯುತ್ತಿದ್ದ. ಖಾಸಗಿ ಅಂಗಗಳು ತಾಕುವಂತೆ ಡಿಕ್ಕಿ ಹೊಡೆಯುತ್ತಿದ್ದ. ಆತನ ವರ್ತನೆಯನ್ನು ನೋಡಿದಾಕ್ಷಣ ಅದು ಆಕಸ್ಮಿಕ ಎನ್ನುವಂತೆ ಭಾಸವಾಗುತ್ತಿತ್ತಾದರೂ, ಸ್ವಲ್ಪ ಗಮನಿಸಿ ನೋಡಿದಾಗ ಅದು ಆತನ ಲೈಂಗಿಕ ವಾಂಛೆಗಳನ್ನು ಈಡೇರಿಸುವುದಕ್ಕೋಸ್ಕರ ಮಾಡುತ್ತಿದ್ದ ಕೃತ್ಯ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.