ತ್ರಿವಿಕ್ರಮ್ ಜೊತೆ ಕೊನೆಯದಾಗಿ ಮಾತಾನಾಡಿ ಬಿಗ್ ಬಾಸ್ ಮನೆಯಿಂದ ಹೊರಬಂದ ಭವ್ಯಾ ಗೌಡ
Jan 12, 2025, 21:01 IST
|

ಬಿಗ್ ಬಾಸ್ ಕನ್ನಡ ಸೀಸನ್ 11 ರೋಚಕ ಘಟ್ಟವನ್ನು ತಲುಪಿದೆ. ಈ ವಾರ ಟಿಕೆಟ್ ಟು ಫಿನಾಲೆಗಾಗಿ ಜಿದ್ದಾಜಿದ್ದಿಯ ಹೋರಾಟ ಬಿಗ್ ಬಾಸ್ ಮನೆಯಲ್ಲಿ ಜೋರಾಗಿದ್ದು, ಇರುವ ಒಂಬತ್ತು ಜನರ ಪೈಕಿ ಒಬ್ಬರು ಈ ವಾರವೇ ಫಿನಾಲೆಗೆ ಹೋಗುವುದು ಖಚಿತವಾಗಿದೆ. ಹೀಗಾಗಿ ಬಿಗ್ ಬಾಸ್ ಮನೆಯೊಳಗೆ ಟಾಸ್ಕ್ ಕಾವು ಹೆಚ್ಚಾಗಿದ್ದು, ಆಟದ ಜೊತೆಗೆ ಹೊಡೆದಾಟ ಬಡಿದಾಟಗಳು ಕೂಡ ಜೋರಾಗಿ ನಡೆಯುತ್ತಿದೆ.
ಗೌತಮಿ, ಉಗ್ರಂ ಮಂಜು ಹಾಗೂ ಹನುಮಂತ ಈ ವಾರದ ನಾಮಿನೇಷನ್‌ನಿಂದ ಪಾರಾಗಿದ್ದು, ತ್ರಿವಿಕ್ರಮ್, ಮೋಕ್ಷಿತಾ, ಭವ್ಯ ಗೌಡ, ಧನರಾಜ್ ಹಾಗೂ ಚೈತ್ರಾ ಕುಂದಾಪುರ ನಾಮಿನೇಟ್ ಆಗಿದ್ದಾರೆ. ಈ ವಾರ ಮನೆಯಿಂದ ಒಬ್ಬರು ಅಥವಾ ಇಬ್ಬರು ಹೊರ ಹೋಗುವುದು ಖಚಿತವಾಗಿದೆ. ಹೀಗಾಗಿ ಪ್ರತಿಯೊಬ್ಬರು ಕೂಡ ಫಿನಾಲೆ ಟಿಕೆಟ್ ಪಡೆದು ನಾಮಿನೇಷನ್‌ನಿಂದ ಪಾರಾಗಲು ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸಂದರ್ಭದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಚೈತ್ರಾ ಕುಂದಾಪುರ ಆಟವಾಡುವ ಅವಕಾಶವನ್ನು ಕಿತ್ತುಕೊಂಡಿದ್ದಾರೆ.
ಕಳೆದ ವಾರ ನೋ ಎಲಿಮಿನೇಷನ್ ವಾರವಾದ ಕಾರಣ ಈ ವಾರ ಡಬ್ಬಲ್ ಎಲಿಮಿನೇಷನ್ ಬಹುತೇಕ ಖಚಿತವಾಗಿದೆ. ಸದ್ಯ ಟಿಕೆಟ್ ಟು ಫಿನಾಲೆ ಓಟದಿಂದ ಚೈತ್ರಾ ಹೊರಗುಳಿದ ಕಾರಣ ಎಲಿಮಿನೇಷನ್ ಬಿಸಿ ತಟ್ಟುವುದು ಪಕ್ಕಾ ಆಗಿದೆ. ಚೈತ್ರಾ ಜೊತೆಗೆ ಮತ್ತೊಂದು ಸ್ಪರ್ಧಿಗೂ ಎಲಿಮಿನೇಷನ್ ಶಾಕ್ ಎದುರಾಗಿದೆ. ಅದು ಮತ್ಯಾರು ಅಲ್ಲ ಈ ಸೀಜನ್‌ನಲ್ಲಿ ಮೂರು ಬಾರಿ ಕ್ಯಾಪ್ಟನ್ ಆದ ಭವ್ಯ ಗೌಡ.
ಹೌದು ಈ ವಾರ ಬಿಗ್ ಬಾಸ್ ಮನೆಯಿಂದ ಭವ್ಯ ಗೌಡ ಹೊರಬರುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ವಾಹಿನಿಯ ಈ ವಾರ ಯಾರು ಹೊರ ಹೋಗಬೇಕು ಎನ್ನುವ ಸೋಷಿಯಲ್ ಮೀಡಿಯಾದ ವೋಟಿಂಗ್ ಲೈನ್‌ನಲ್ಲಿ ಭವ್ಯಾ ಗೌಡ, ಚೈತ್ರಾ ಕುಂದಾಪುರ, ಧನರಾಜ್ ಆಚಾರ್, ಮೋಕ್ಷಿತಾ ಪೈ ಹಾಗೂ ತ್ರಿವಿಕ್ರಮ್ ಪೈಕಿ ಭವ್ಯಾ ಮತ್ತು ಚೈತ್ರಾ ಮನೆಯಿಂದ ಹೊರ ಹೋಗಬೇಕು ಎನ್ನುವುದಕ್ಕೆ ಜನ ಹೆಚ್ಚು ವೋಟ್ ಮಾಡಿದ್ದಾರೆ ಎನ್ನಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.