ಬಂದೇ ಬಿಡ್ತು ಬಿಗ್ಬಾಸ್ ಸೀಸನ್ 11, ಸ್ಫಧಿ೯ಗಳ ಲಿಸ್ಟ್ ಔಟ್
Sep 12, 2024, 14:05 IST
|
ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ‘ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದ ಎರಡು ಪ್ರೋಮೋಗಳು ರಿಲೀಸ್ ಆಗಿವೆ. ಹೊಸ ಸೀಸನ್‌ನ ನಿರೂಪಕ ಯಾರು ಎಂಬುದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಚರ್ಚೆ ನಡೆಯುತ್ತಿದೆ. ಈ ಬಾರಿ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಹೋಸ್ಟ್ ಆಗಿ ಕಿಚ್ಚ ಸುದೀಪ್ ಮುಂದುವರೆಯುತ್ತಾರೋ ಇಲ್ವೋ ಎಂಬ ಡೌಟ್ ಇನ್ನೂ ವೀಕ್ಷಕರಿಗೆ ಕಾಡುತ್ತಿದೆ.
ಯಾವುದೇ ಹೊಸ ಬಿಗ್ ಬಾಸ್ ಸೀಸನ್ ಆರಂಭಕ್ಕೂ ಮುನ್ನ ಸಂಭಾವ್ಯ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡೋದು ಕಾಮನ್. ಕೆಲವರನ್ನ ಸ್ಪರ್ಧಿಗಳನ್ನಾಗಿ ನೋಡಬಯಸುವ ಇಂಗಿತವನ್ನೂ ವೀಕ್ಷಕರು ವ್ಯಕ್ತಪಡಿಸೋದು ಸಹಜ. ಆದರೆ, ಅಂತಿಮವಾಗಿ ‘ಬಿಗ್ ಬಾಸ್’ ಮನೆಯಲ್ಲಿ ಲಾಕ್ ಆಗುವ ಸ್ಪರ್ಧಿಗಳು ಯಾರ್ಯಾರು ಅಂತ ಗೊತ್ತಾಗೋದು ಲಾಂಚ್ ದಿನವೇ! ಅಲ್ಲಿಯವರೆಗೂ ಹಬ್ಬುವ ಎಲ್ಲಾ ಪಟ್ಟಿಗಳೂ ಕೇವಲ ಊಹಾಪೋಹ, ಗಾಸಿಪ್ ಅಷ್ಟೇ.
ಇನ್ನು ಈ ಶೋ ಅಕ್ಟೋಬರ್‌ನಲ್ಲಿ ಆರಂಭವಾಗುವುದು ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಹಾಗೆಯೇ ಒಂದಷ್ಟು ಸ್ಪರ್ಧಿಗಳ ಹೆಸರು ಕೂಡ ಕೇಳಿ ಬರುತ್ತಿದೆ. ಈಗಾಗಲೇ ವಾಹಿನಿಯು ಇದಕ್ಕೆ ಸಂಬಂಧಪಟ್ಟಂತೆ ತಯಾರಿಯನ್ನು ಶುರು ಮಾಡಿದೆ. ಈ ಮನೆಗೋಸ್ಕರ 300 ಜನರು ಕೆಲಸ ಮಾಡುತ್ತಿರುತ್ತಾರೆ. ದೊಡ್ಡ ಮನೆ, ಅದಕ್ಕೆ ಬೇಕಾದ ಸಾಮಗ್ರಿಗಳು, ಸ್ಪರ್ಧಿಗಳಿಗೋಸ್ಕರ ವ್ಯವಸ್ಥೆ ಹೀಗೆ ದೊಡ್ಡ ಮಟ್ಟದಲ್ಲಿ ತಯಾರಿ ಮಾಡಲು ತಿಂಗಳಾನುಗಟ್ಟಲೇ ಸಮಯ ಬೇಕು.
ನಟಿ ಪ್ರೇಮಾ, ಮಾದ್ಯಮ ಕುಟಂಬದ ಯೂಟ್ಯೂಬ್ ರ ಪ್ರಿಯಾ, ಟೆಕ್ ಇನ್ ಕನ್ನಡ ಸಂದೀಪ್,ಬೃಂದಾವನ ಧಾರಾವಾಹಿ ನಟ ವರುಣ್ ಆರಾಧ್ಯ, ಯುಟ್ಯೂಬರ್ ವರ್ಷಾ ಕಾವೇರಿ, ನಟ ತ್ರಿವಿಕ್ರಮ್, ತುಕಾಲಿ ಸ್ಟಾರ್ ಸಂತು ಪತ್ನಿ ಮಾನಸಾ, ‘ಮಜಾಭಾರತ’ ಖ್ಯಾತಿಯ ರಾಘವೇಂದ್ರ, ಸುನೀಲ್ ರಾವ್, ಭವ್ಯಾ ಗೌಡ, ಮೋಕ್ಷಿತಾ ಪೈ, ರೀಲ್ಸ್ ರೇಷ್ಮಾ ಹೀಗೆ ಒಂದಷ್ಟು ಸ್ಪರ್ಧಿಗಳ ಹೆಸರು ಕೇಳಿ ಬರುತ್ತಿದೆ. ‘ಬಿಗ್ ಬಾಸ್’ ಮನೆಗೆ ಹೋಗುವವರು ಯಾರೂ ಕೂಡ ತಾವು ದೊಡ್ಮನೆಗೆ ಹೋಗ್ತೀವಿ ಅಂತ ಹೇಳೋದಿಲ್ಲ. ಬಿಗ್ ಬಾಸ್’ ಪ್ರಸಾರ ಆದಮೇಲೆ ಯಾರು ಸ್ಪರ್ಧಿಗಳು ಎನ್ನೋದು ಗೊತ್ತಾಗುವುದು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.