ಹೇರ್ ಕಟ್ ಮಾಡಿಸಿದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ, ಕಂಗಾಲಾದ ಪೋಷಕರು

 | 
ರಬ

 ಮಕ್ಕಳ ಮನಸ್ಸು ಅತಿ ಸೂಕ್ಷ್ಮ. ಹೌದೂ ಅವರ ಮನಸ್ಸಿಗೆ ಒಂದಿಷ್ಟು ನೋವಾದರೂ ಅವರು ಅದನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುವುದಿಲ್ಲ. ಇತ್ತಿಚಿಗೆ ಅಪ್ಪ ಅಮ್ಮ ನ ಮಾತಿಗೆ, ಮಾರ್ಕ್ಸ್ ಕಡಿಮೆ ಬಂತೆಂದು , ಮೊಬೈಲ್ ಕೊಡಿಸಲಿಲ್ಲ ಎಂದು ಗಿಫ್ಟ್ ನೀಡಲಿಲ್ಲ ಹೇಗೆ ಸಕಾ ಸುಮ್ಮನೇ ಸಾಯುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.

ಇದೀಗ ಬೆಂಗಳೂರಿನ ಬನಶಂಕರಿಯ ಬಳಿ ಸಂರಕ್ಷ್ ಎನ್ನುವ ಬಾಲಕ ಮನೆಬಿಟ್ಟು ಓಡಿ ಹೋದ ಕಾರಣ ಕೇಳಿದ್ರೆ ನಿಜಕ್ಕೂ ನೀವು ದಂಗಾಗಿ ಹೋಗ್ತಿರಿ. ಹೌದು ನವಂಬರ್ ತಿಂಗಳ ಒಂದನೇ ತಾರೀಕು ಕನ್ನಡ ರಾಜ್ಯೋತ್ಸವ ಇದ್ದ ಕಾರಣ ಐಟಿಐ ಓದುತ್ತಿದ್ದ ಸಂರಕ್ಷ್ ಗೆ ರಜೆಯಿತ್ತು. ಹಾಗಾಗಿ ತಲೆ ಕೂದಲು ಜಾಸ್ತಿ ಉದ್ದವಾಗಿದೆ ಎಂದು ಅವನ ತಂದೆ ತಾಯಿ ಇಬ್ಬರೂ ಸಲೂನ್ ಗೆ ಕಳುಹಿಸಿ ಹೇರ್ ಕಟ್ ಮಾಡಿಸಿದರು.

ಸಂರಕ್ಷ್ ಗೆ ತಲೆ ಕೂದಲು ಬಿಡುವ ಆಸೆಯಿತ್ತು ಆದರೆ ಅಪ್ಪ ಅಮ್ಮನ ಒತ್ತಾಯಕ್ಕೆ ಕಟ್ಟುಬಿದ್ದು ಕೂದಲನ್ನು ಕಟ್ ಮಾಡಿಸಿದ್ದ. ಅವನ ಹಣೆ ಬರಹಕ್ಕೆ ಅದೂ ಕೂಡ ಅವನಿಗೆ ಇಷ್ಟ ಬಂದ ಹಾಗೆ ಮಾಡಲೇ ಇಲ್ಲ. ಇದರಿಂದ ಬೇಸರ ಪಟ್ಟು ಕೊಂಡ ಸಂರಕ್ಷ್ ಮನೆ ಬಿಟ್ಟು ಹೋಗಿದ್ದಾನೆ.

ಇದೀಗ ಅವನ ಪಾಲಕರು ಚಿಂತೆ ಮಾಡುತ್ತಿದ್ದಾರೆ. ತಲೆ ಕೂದಲು ಹಿಪ್ಪಿ ಅಂತೆ ಬೆಳೆದಿತ್ತು ಹಾಗಾಗಿ ಕಟ್ ಮಾಡಿಸಿದೆವು. ಅವನು ಇಷ್ಟ ಪಟ್ಟ ಎಂದು ಡ್ಯಾನ್ಸ್ ಕ್ಲಾಸ್ ಗೆ ಸೇರಿಸಿದ್ದೆವು. ಅವನು ಕೇಳಿದ್ದೆಲ್ಲ ಕೊಡಿಸಿದ್ದೇವೆ ನಮಗಿರುವುದು ಒಂದೇ ಮಗ ಹಾಗಾಗಿ ಪ್ರೀತಿಯಿಂದ ಬೆಳೆಸಿದೆವು. ಅವನು ಹೇರ್ ಕಟ್ ಸರಿಯಾಗಿಲ್ಲ ಎಂದು ಓಡಿ ಹೋಗಿರುವುದು ನಿಜಕ್ಕೂ ಬೇಸರ ತಂದಿದೆ ಎಂದಿದ್ದಾರೆ. ಇನ್ನು ತಾಯಿ ಕಂದಾ ವಾಪಸ್ಸು ಬಾ ಎಂದು ಕಣ್ಣೀರಿಟ್ಟು ಬೇಡಿಕೊಂಡಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.