ಚಂದ್ರಯಾನ 3 ಲ್ಯಾಂಡಿಂಗ್ ವೇಳೆ ತಿರುಪತಿ ತಿಮ್ಮಪ್ಪನ ಕಿರೀಟದಂತೆ ಗೋಚರಿಸಿದ ಲ್ಯಾಂಡರ್, ನೀವೆನಂತೀರಾ

 | 
ಕಿ

 ಚಂದ್ರನ ಅಂಗಳದಲ್ಲಿ ಚಂದ್ರಯಾನ-3 ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಭಾರತವು ಹೊಸ ಇತಿಹಾಸವನ್ನು ಬರೆದಿದೆ. ಈ ಸಂಭ್ರಮವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಸೆಲೆಬ್ರೇಟ್ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ – 3 ಮಿಷನ್; ಭಾರತ, ನಾನು ನನ್ನು ಗಮ್ಯ ಸ್ಥಾನವನ್ನು ತಲುಪಿದ್ದೇನೆ ಮತ್ತು ನೀವು ಕೂಡ!; ಚಂದ್ರನ ಮೇಲೆ ಚಂದ್ರಯಾನ – 3 ಮಿಷನ್ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ಶುಭಾಶಯಗಳು ಭಾರತ ಎಂದು ಬರೆದುಕೊಂಡಿದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ಮೀಮ್ಸ್‌ಗಳು ಸಖತ್ ವೈರಲ್ ಆಗುತ್ತಿವೆ.

ಈ ಮಧ್ಯೆ, ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ ಮಹಾಪೂರ ಹರಿದುಬಂದಿದೆ. ತಿರುಪತಿ ತಿರುಮಲ ವೆಂಕಟೇಶ್ವರ ಕಿರೀಟ ರೀತಿಯಲ್ಲಿ ಚಂದ್ರನ ಮೇಲೆ ಲ್ಯಾಂಡ್ ಆದ, ಚಂದ್ರಯಾನ-3 ಲ್ಯಾಂಡರ್ ಕಾಣುತ್ತಿದೆ ಎಂದು ಕೆಲವರು ಪೋಟೋದೊಂದಿಗೆ ಹಂಚಿಕೊಂಡಿದ್ದಾರೆ.

ಚಂದ್ರಯಾನ-3 ಲ್ಯಾಂಡರ್ ಸೇಫ್ ಲ್ಯಾಂಡಿಂಗ್ ಪ್ರಕ್ರಿಯೆ ಲೈವ್ ಮಾಡಲಾಗಿತ್ತು. 5.20 ನಿಮಿಷಕ್ಕೆ ಸೇಫ್ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭಿಸಲಾಯಿತು. ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ಇಳಿಯುವ ಮುಂಚೆ ಅದು ನಾಲ್ಕು ಕಠಿಣ ಹಂತಗಳನ್ನು ಪೂರೈಸಿತು. ಪ್ರತಿ ಹಂತದಲ್ಲೂ ವಿಕ್ರಮ್ ಲ್ಯಾಂಡರ್ ನಿಧಾನವಾಗಿ ಚಂದ್ರನತ್ತ ತೆರಳುತ್ತಾ, ಚಂದ್ರನ ಮೇಲ್ಮೈಗೆ ಲಂಭವಾಗಿ ಇಳಿಯುವ ಪ್ರಕ್ರಿಯೆ ಆರಂಭಿಸಿತು. ಪ್ರತಿ ಹಂತದ ಯಶಸ್ಸು ವಿಜ್ಞಾನಿಗಳಲ್ಲಿ ಹುಮ್ಮಸ್ಸು ತುಂಬಿತು.

ಮಿಷನ್ ಕಂಟ್ರೋಲ್ ರೂಮ್‌ನಲ್ಲಿ ಸಂಭ್ರಮ ಮನೆ ಮಾಡಿತ್ತು. ಅಂತಿಮವಾಗಿ ಚಂದ್ರನ ಮೇಲೆ ಲ್ಯಾಂಡರ್ ಲ್ಯಾಂಡ್ ಬಳಿಕ, ವಿಜ್ಞಾನಿಗಳು ಸಂತೋಷದಿಂದ ಕುಣಿದಾಡಿದರು. ಇದೇ ವೇಳೆ, ದಕ್ಷಿಣಾ ಆಫ್ರಿಕಾದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವಿಡಿಯೋ ಲೈವ್ ಮೂಲಕ ಮಾತನಾಡಿ, ಇಸ್ರೋ ತಂಡಕ್ಕೆ ಶುಭಾಶಯ ಕೋರಿದರು. ಪ್ರಾಜೆಕ್ಟ್ ಡೈರೆಕ್ಟರ್ ಪಿ ವೀರಮುತ್ತುವೇಲ್ ಮಾತನಾಡಿ, ಲ್ಯಾಂಡರ್ ಎಲ್ಲಾ ಹಂತಗಳನ್ನು ಯಾವುದೇ ದೋಷವಿಲ್ಲದೇ ಪೂರ್ಣಗೊಳಿಸಿತು ಎಂದು ಹೇಳಿ ಸಂಭ್ರಮಪಟ್ಟರು. 

2019ರಲ್ಲಿ ಚಂದ್ರಯಾನ -2 ಮಿಷನ್ ವೈಫಲ್ಯ ಕಂಡ ಬಳಿಕ ಇಸ್ರೋ ಚಂದ್ರಯಾನ-3 ಕೈಗೊಂಡಿತ್ತು. ಈ ಮಿಷನ್‌ಗದೆ ಸುಮಾರು 600 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಜುಲೈ 14ರಂದು ಮಿಷನ್‌ಗೆ ಚಾಲನೆ ನೀಡಲಾಗಿತ್ತು. ಎಲ್‌ವಿಎಂ ಮಾರ್ಕ್ 3 ರಾಕೆಟ್ ಚಂದ್ರಯಾನ ನೌಕೆಯನ್ನು ಭೂ ಕಕ್ಷೆಗೆ ಸೇರಿಸಿತ್ತು. ಅಲ್ಲಿಂದ ಈ ನೌಕೆ ತನ್ನ ಗಮ್ಯ ಸ್ಥಾನವನ್ನು ತಲುಪಲು 44 ದಿನಗಳನ್ನು ತೆಗೆದುಕೊಂಡಿತು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.