43ರ ಮಿತಿಮೀರಿದ ವಯಸ್ಸಿನಲ್ಲೂ ಗೊಂಬೆಯಂತೆ ಕಂಗೊಳಿಸುತ್ತಿರುವ ಛಾಯಾ‌ ಸಿಂಗ್

 | 
N
43 ರ ಹರೆಯದಲ್ಲೂ ಕಂಗೊಳಿಸುವ ಛಾಯಾ ಸಿಂಗ್ ಇನ್ನು ನವ ತರುಣಿಯರ ಹಾಗೆ ಕಾಣ್ತಾರೆ.ಛಾಯಾ ಸಿಂಗ್‌ ಅವರು ಸಿಕ್ಕಾಪಟ್ಟೆ ನೀರು ಕುಡಿಯುತ್ತಾರೆ. ಇದರಿಂದ ದೇಹದ ಕಲ್ಮಶಗಳು ಹೊರಹೋಗುತ್ತವೆ ಎಂದು ಅವರು ನಂಬುತ್ತಾರೆ. ನೀರು ಜಾಸ್ತಿ ಕುಡಿದರೆ ವಾಶ್‌ ರೂಮ್‌ಗೆ ಹೋಗಬೇಕಾಗುತ್ತದೆ ಅಂತ ಹೇಳ್ತಾರೆ, ಆದರೆ ನಮಗೆ ನೀರು ಕುಡಿಯೋದು ರೂಢಿ ಆದರೆ ಆ ಸಮಸ್ಯೆ ಬರೋದಿಲ್ಲ ಎಂದು ಛಾಯಾ ಸಿಂಗ್‌ ಹೇಳಿದ್ದಾರೆ. 
ಛಾಯಾ ಸಿಂಗ್‌ ಅವರಿಗೆ ದಪ್ಪನೆಯ, ಕಪ್ಪನೆಯ ತಲೆಕೂದಲಿದೆ. ಛಾಯಾ ಸಿಂಗ್‌ ಅವರು ತಲೆಸ್ನಾನ ಮಾಡುವ ಮುನ್ನ ಎಣ್ಣೆ ಹಚ್ಚಿ ಬಿಡುತ್ತಾರೆ. ಇದು ದೊಡ್ಡ ರಹಸ್ಯ ಅಂತೆ. ಇನ್ನು ಪತಿಯ ಬೆಂಬಲದಿಂದ ವ್ಯಾಯಾಮ ಕೂಡ ಮಾಡುತ್ತಾರೆ. ವ್ಯಾಯಾಮದಿಂದ ನಮ್ಮ ಮೈಯೊಳಗಿನ ಬೆವರು ಕೂಡ ಹೋಗುವುದು, ಇದು ತುಂಬ ಒಳ್ಳೆಯದು ಎನ್ನುತ್ತಾರೆ ಛಾಯಾ ಸಿಂಗ್. 
ಛಾಯಾ ಸಿಂಗ್‌ ಅವರು ರೋಸ್‌ ವಾಟರ್‌ ಜೊತೆಗೆ ಅಥವಾ ನೀರಿನ ಜೊತೆಗೆ ಮುಲ್ತಾನಿ ಮುಟ್ಟಿಯನ್ನು ಮುಖಕ್ಕೆ ಹಚ್ಚುತ್ತಾರೆ. ಇದರಿಂದ ಅವರಿಗೆ ಮುಖದ ಮೇಲಿರುವ ಎಣ್ಣೆ ಹೋಗುತ್ತದೆಯಂತೆ. ಇನ್ನು ಕನ್ನಡ ಸಿನಿಮಾದ ಮೂಲಕ ಛಾಯಾ ಸಿಂಗ್ ತಮ್ಮ ನಟನಾ ಜೀವನಕ್ಕೆ ಮುನ್ನುಡಿ ಬರೆದರು, ನಂತರ ಸಾಲು ಸಾಲು ಕನ್ನಡ, ಮಲಯಾಳಂ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಛಾಯಾ ಸಿಂಗ್ ಸೈ ಎನಿಸಿಕೊಂಡರು.  
ಸಿನಿಮಾ ಅಷ್ಟೆ ಅಲ್ಲದೆ ಛಾಯಾ ಸಿಂಗ್ ನಿರೂಪಣೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೆ ಯಾಕೆ ನಟಿಗೆ ಡ್ಯಾನ್ಸ್ ಎಂದರೆ ಪ್ರಾಣ, ನೃತ್ಯದಲ್ಲಿ ನಟಿ ಛಾಯಾ ಸಿಂಗ್ ಪ್ರವೀಣೆ ಅಂತಾಲೆ ಹೇಳಬಹುದು.  ನಟಿ ಛಾಯಾ ಸಿಂಗ್ ಅವರು ಕನ್ನಡದಲ್ಲಿ ಅನೇಕ ಸಿನಿಮಾಗಳನ್ನು ಮಾಡಿದವರು ಅವರ ಪ್ರಮುಖ ಸಿನಿಮಾಗಳಲ್ಲಿ ತುಂಟಾಟ,  ಗುಟ್ಟು, ಬಲಗಾಲಿಟ್ಟು ಒಳಗೆ ಬಾ, ಹಸೀನಾ, ಚಿಟ್ಟೆ, ಖಾಕಿ, ಭೈರತಿ ರಣಗಲ್ ಹೀಗೆ ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.