ಡಾಲಿ ಧನಂಜಯ್ ಮದುವೆ ಬಳಿಕ ಡಾಕ್ಟರ್ ಕೆಲಸ ಬಿಟ್ಟು ಸ್ಕೂಲ್ ಟೀಚರ್ ಆದ ಪತ್ನಿ ಧನ್ಯತಾ

 | 
Jj
ಡಾಲಿ ಧನಂಜಯ್ ಒಳ್ಳೆಯ ನಟ, ನಿರ್ಮಾಪಕ ಆಗಿರುವ ಜೊತೆಗೆ ಸಾಮಾಜಿಕ ಕಾಳಜಿ ಇರುವ ವ್ಯಕ್ತಿ. ಮ ವೈದ್ಯೆ ಧನ್ಯತಾ ಜೊತೆ ವಿವಾಹವಾಗುವ ಡಾಲಿ ಧನಂಜಯ್, ಮದುವೆಗೆ ಮುಂಚೆ ಸಾಮಾಜಿಕ ಕಾರ್ಯವೊಂದನ್ನು ಕೈಗೆತ್ತಿಕೊಂಡಿದ್ದರು. ಡಾಲಿ ಧನಂಜಯ್ ಹುಟ್ಟೂರಿನಲ್ಲಿದ್ದ ಸರ್ಕಾರಿ ಶಾಲೆ ಹಳತಾಗಿತ್ತು, ಗೋಡೆಗಳು ಬಿರಕು ಬಿಟ್ಟಿದ್ದವು, ಛಾವಣಿ ಸೋರುತ್ತಿತ್ತು, ನೆಲ ಹಾಸು ಕಿತ್ತೇ ಹೋಗಿತ್ತು. ಇನ್ನೂ ಕೆಲವು ಸಮಸ್ಯೆಗಳು ಶಾಲೆಯಲ್ಲಿದ್ದವು. ಇದೀಗ ಡಾಲಿ ಧನಂಜಯ್ ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಯನ್ನು ನವೀಕರಣ ಮಾಡುತ್ತಿದ್ದಾರೆ.
ಅದರಂತೆ ಮದುವೆ ಆದಮೇಲೆ ಕೂಡ ಒಂದಿಷ್ಟು ಹಣವನ್ನು ಆಶ್ರಮಕ್ಕೆ ದಾನವಾಗಿ ನೀಡಿದ್ದಾರೆ. ಇನ್ನು ಅವರ ಪತ್ನಿ ಧನ್ಯತಾ ಅವರು ತಮ್ಮ ಹುಟ್ಟು ಹಬ್ಬದ ದಿನ ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿನ ಹೆಣ್ಣುಮಕ್ಕಳಿಗೆ ಸ್ವಚ್ಛತೆ ಕಾಪಾಡುವ ಬಗ್ಗೆ ಹಾಗೂ ದೇಹದ ಬದಲಾವಣೆಗಳ ಕುರಿತಾಗಿ ತಿಳಿ ಹೇಳಿದ್ದಾರೆ. ಅಲ್ಲದೆ ಹೆಣ್ಣು ಮಕ್ಕಳಿಗೆ ಪ್ಯಾಡ್ ವಿತರಿಸಿ ಚೆನ್ನಾಗಿ ಓದಿ ಎಂದು ಹರಸಿ ಹಾರೈಸಿದ್ದಾರೆ.
ಇನ್ನು ಡಾಲಿ ಧನಂಜಯ್, ಮೊದಲಿನಿಂದಲೂ ತಮ್ಮನ್ನು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಗತ್ಯ ಬಂದಾಗ ರೈತರ ಪರ, ಕನ್ನಡ ಪರ ಹೇಳಿಕೆಗಳನ್ನು, ಸಮಾನತೆಯ ಪರ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಈ ಹಿಂದೆ ದೇಸಿ ಉದ್ಯಮಳಿಗೆ ಬೆಂಬಲ ನೀಡುವ ಕಾರ್ಯವನ್ನು ಅವರು ಮಾಡಿದ್ದರು. ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ರಾಯಭಾರಿ ಆಗಿರುವ ಡಾಲಿ ಧನಂಜಯ್, ಚರ್ಮ ಮತ್ತು ಕರಕುಶಲ ಕಾರ್ಮಿಕರ ಜೀವನಕ್ಕೆ ಪರೋಕ್ಷವಾಗಿ ನೆರವಾಗುವ ಪ್ರಯತ್ನ ಮಾಡುತ್ತಿದ್ದಾರೆ.
ಡಾಲಿ ಧನಂಜಯ್ ಇದೀಗ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಉತ್ತರಕಾಂಡ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ಸಿನಿಮಾಗಳ ಮೇಲೆ ಬಂಡವಾಳವನ್ನೂ ಹೂಡಿದ್ದಾರೆ. ಅವರಿಗೆ ಧನ್ಯತಾ ತಕ್ಕ ಪತ್ನಿ ಎನಿಸಿಕೊಂಡಿದ್ದಾರೆ. ಇವರಿಬ್ಬರ ಸಮಾಜ ಸೇವೆ ಇನ್ನಷ್ಟು ಮುಂದುವರೆಯಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.