ರೇಣುಕಾಸ್ವಾಮಿ ಮಗುವನ್ನು ನೋಡಲು ಬಂದ ದರ್ಶನ್ ಪತ್ನಿ ವಿಜಯಲಕ್ಷ್ಮಿ
Feb 26, 2025, 19:23 IST
|

ಬೆಂಗಳೂರಲ್ಲಿ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಕೇಸ್ ಇನ್ನೂ ಮುಗಿದಿಲ್ಲ. ಆದರೆ ಘಟನೆ ನಡೆದು ತಿಂಗಳುಗಳೇ ಉರುಳಿ ಹೋದವು. ಆರೋಪಿಗಳು ಜಾಮೀನಿನ ಮೇಲೆ ರಿಲೀಸ್ ಆಗಿ ಬಂದರು. ಈಗ ರೇಣುಕಾಸ್ವಾಮಿ ಮನೆಯಲ್ಲಿ ಮಗನ ಸಾವಿನ ಎಷ್ಟೋ ತಿಂಗಳ ನಂತರ ಸಂಭ್ರಮ ಮನೆ ಮಾಡಿದೆ.ರೇಣುಕಸ್ವಾಮಿ ಮಗನಿಗೆ ಇಂದು ನಾಮಕರಣ ಶಾಸ್ತ್ರ ಕಾರ್ಯಕ್ರಮ ನಡೆಯಲಿದೆ. ದುಖಃದಲ್ಲಿದ್ದ ಸ್ವಾಮಿ ಕುಟುಂಬದಲ್ಲಿ ಇಂದು ಸಂಭ್ರಮದ ವಾತಾವರಣ ಮನೆ ಮಾಡಿದ್ದು, ಮಗನ ಸಾವಿನ 9 ತಿಂಗಳ ಬಳಿಕ ರೇಣುಕಾಸ್ವಾಮಿ ಮನೆಯಲ್ಲಿ ಸಂತಸದ ವಾತಾವರಣ ತುಂಬಿದೆ.
ಚಿತ್ರದುರ್ಗ ನಗರದ VRS ಬಡಾವಣೆಯ ನಿವಾಸದಲ್ಲಿ ನಾಮಕರಣ ಶಾಸ್ತ್ರ ನಡೆಯಲಿದ್ದು, ಮಗುವಿಗೆ 5 ತಿಂಗಳು ತುಂಬಿದ ಹಿನ್ನೆಲೆ ನಾಮಕರಣ ಶಾಸ್ತ್ರ ಮಾಡಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮಗನ ಸಾವಿನ ಬಳಿಕ ಮೊಮ್ಮಗನ ಶುಭ ಸಮಾರಂಭಕ್ಕೆ ತಂದೆ ತಾಯಿ ಸಂತಸ ಪಡುತ್ತಿದ್ದಾರೆ.ಮನೆ ಬಾಗಿಲಿಗೆ ಸ್ವತಃ ಹೂವಿನ ತೋರಣ ಕಟ್ಟಿದ ಕಾಶೀನಾಥ ಶಿವನಗೌಡ್ರ ಅವರು ಮೊಮ್ಮಗುವನ್ನು ಬರಮಾಡಿಕೊಳ್ಳಲು ಸಿದ್ದರಾಗಿದ್ದಾರೆ.ಮೊಮ್ಮಗನ ತೊಟ್ಟಿಲು ಶಾಸ್ತ್ರಕ್ಕೆ ರೇಣುಕಾಸ್ವಾಮಿ ಅವರ ತಾಯಿ ರತ್ನಪ್ರಭಾ ಅವರು ಕೂಡಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಈ ಕುರಿತಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಮಗುವಿಗೆ ಒಳ್ಳೆಯದಾಗಲಿ ಮಗುವಿನ ಶಿಕ್ಷಣಕ್ಕೆ ಹಣ ಬೇಕಾದಲ್ಲಿ ಕೇಳಿ ಎಂದಿದ್ದಾರೆ. ಆದರೆ ದರ್ಶನ್ ಅಭಿಮಾನಿಗಳು ಮಾತ್ರ ಅತ್ತಿಗೆ ಅವರಿಗೆ ಸಹಾಯ ಮಾಡ್ಬೇಡಿ ಎಂದಿದ್ದಾರೆ. ರೇಣುಕಾ ಸ್ವಾಮಿ ಮನೆಯಲ್ಲಿ ಸಂಭ್ರಮ ಮನೆಮಾಡಿದ್ದು ಆದ್ರೆ ಮಗನಿಲ್ಲ ಎಂಬ ನೋವು ಎಲ್ಲರನ್ನೂ ಕಾಡುತ್ತಿದೆ, ರೇಣುಕಾಸ್ವಾಮಿ ತಂದೆ ಮಗನನ್ನು ನೆನೆದು ಕಣ್ಣೀರು ಇಟ್ಟಿದ್ದಾರೆ. ಐದು ತಿಂಗಳ ಬಳಿಕ ಮೊದಲ ಬಾರಿ ಮಗು ಜೊತೆ ಸಹನಾ ಆಗಮಿಸಿದ್ದು ಮನೆಯಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025