ಶಿಕ್ಷಕರ ಜೊತೆ ಡಿಸಿಎಂ ಡಿಕೆಶಿ ಪುತ್ರಿ ಸಕ್ಕತ್ ಡ್ಯಾನ್ಸ್, ಮೆಚ್ಚುಗೆ ವ್ಯಕ್ತ ಪಡಿಸಿದ ಕನ್ನಡಿಗರು

 | 
Bx

ಡಿಕೆ ಶಿವಕುಮಾರ್ ರವರ ಪುತ್ರಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆಯೂ ಆಗಿರುವ ಐಶ್ವರ್ಯಾ ನೂರಾರು ಕೋಟಿ ಆಸ್ತಿಯ ಒಡತಿ. ಡಿ.ಕೆ ಶಿವಕುಮಾರ್ ನಡೆಸುತ್ತಿರುವ ಹಲವಾರು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಹೊತ್ತಿದ್ದಾರೆ ಐಶ್ವರ್ಯಾ ಶಿವಕುಮಾರ್, ಶಾಲಾ ಕಾರ್ಯಕ್ರಮದಲ್ಲಿ ಮೋಟಿವೇಷನಲ್ ಸ್ಪೀಕರ್ ಕೂಡಾ ಆಗಿದ್ದಾರೆ.

ಕೆಲ ವರ್ಷಗಳ ಹಿಂದಷ್ಟೇ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಮಗ ಅಮರ್ಥ್ಯರನ್ನು ವರಿಸಿ ಸಂಸಾರವನ್ನು ಹಾಗೂ ಕೆಲಸ ಕಾರ್ಯ ಎಲ್ಲವನ್ನು ಸಹ ತೂಗಿಸಿಕೊಂಡು ಹೋಗುತ್ತಿದ್ದಾರೆ. ಇತ್ತೀಚಿಗೆ ನಡೆದ ಶಿಕ್ಷಕರ ದಿನದಂದು ತಮ್ಮದೇ ಶಿಕ್ಷಣ ಸಂಸ್ಥೆಯ ಶಿಕ್ಷಕ ಸಿಬ್ಬಂದಿಗಳೊಂದಿಗೆ ಬೆರೆತು ನೃತ್ಯ ಮಾಡಿದ್ದಾರೆ. ಹಾಗೂ ಧೈರ್ಯ ತುಂಬುವ ನುಡಿಗಳನ್ನು ಅಡಿದ್ದಾರೆ.

ಯಶಸ್ಸು ಅನ್ನೋದು ಜೀವನದಲ್ಲಿ ಎಲ್ಲರಿಗೂ ಬೇಕು, ಅದು ಸಿಗಬೇಕಾದರೆ ಸರಿಯಾದ ದಾರಿಯಲ್ಲಿ ನಡೆಯಬೇಕಾದುದು ಮುಖ್ಯ ಜೀವನದಲ್ಲಿ ಯಶಸ್ಸು ಸಾಧಿಸ್ಬೇಕು ಅಂತ ಯಾರು ತಾನೇ ಬಯಸೋದಿಲ್ಲ ಹೇಳಿ, ಸಕ್ಸಸ್‌ ಎಲ್ಲರಿಗೂ ಬೇಕು ಆದರೆ ಈ ಗೆಲುವು ಎಲ್ಲರಿಗೂ ಸುಲಭವಾಗಿ ಸಿಗುವುದಿಲ್ಲ, ಹಾಗಿದ್ರೆ ಲೈಫ್‌ಲ್ಲಿ ಸಕ್ಸಸ್ ಆಗಲು ಏನು ಮಾಡಬೇಕು.

ಇಲ್ಲಿದೆ ಡಿ.ಕೆ ಶಿವಕುಮಾರ್ ಮಗಳು ಐಶ್ವರ್ಯಾ ಜೀವನ ಪಾಠ, ನಮ್ಮ ಜೀವನದ ಗುರಿಗಳನ್ನು ಸಾಧಿಸಲು ಮೊದಲ ಹೆಜ್ಜೆ ಇಡಲು ‘ನಾನು ಅದನ್ನು ಮಾಡಬಲ್ಲೆ’ ಎಂಬ ಮನಸ್ಥಿತಿಯೊಂದಿಗೆ ಯಾವುದೇ ಪ್ರಯತ್ನವನ್ನು ಪ್ರಾರಂಭಿಸುವುದು ಬಹಳ ಮುಖ್ಯ ಎಂದು ಡಿ.ಕೆ ಶಿವಕುಮಾರ್ ಅವರ ಮಗಳು ಐಶ್ವರ್ಯಾ ಹೇಳುತ್ತಾರೆ
ನಾನು ಅದನ್ನು ಮಾಡಲು ಪ್ರಯತ್ನಿಸುತ್ತೇನೆ ಎಂಬ ಪದವು ಅಪೇಕ್ಷಿತ ಫಲಿತಾಂಶವನ್ನು ಸಾಧಿಸುವ ನಮ್ಮ ಸಾಮರ್ಥ್ಯದಲ್ಲಿ ಅನಿಶ್ಚಿತತೆಯ ಮಟ್ಟವನ್ನು ಸೂಚಿಸುತ್ತದೆ. 

ನಾವು ಕೇವಲ ಪ್ರಯತ್ನಿಸಲು ಅವಕಾಶ ಪಡುತ್ತೇವೆ ಅಷ್ಟೆ. ಅಲ್ಲಿ ಸೋಲು ಸಹ ಉಂಟಾಗಬಹುದು
ಪ್ರಯತ್ನಿಸುತ್ತೇನೆ ಎನ್ನಬೇಡಿ ಮಾಡುತ್ತೇನೆ ಎನ್ನಿ ಪ್ರಯತ್ನಿಸುತ್ತೇನೆ ಎಂಬ ಪದವು ನಾವು ಗೆಲ್ಲುವುದರಿಂದ ನಮ್ಮನ್ನು ದೂರವಿಡಬಹುದು ನಮ್ಮ ಗುರಿಗಳನ್ನು ತಲುಪುವ ಬಗ್ಗೆ ನಮ್ಮಲ್ಲಿಯೂ ಅನುಮಾನ ಕಾಡಬಹುದು. 

ಹೀಗಾಗಿ ಪ್ರಯತ್ನಿಸುತ್ತೇನೆ ಎನ್ನುವುದಲ್ಲ ಬದಲಾಗಿ, ನಮ್ಮ ಗುರಿಗಳ ಕಡೆಗೆ ಕೆಲಸ ಮಾಡಲು, ಕ್ರೀಡಾ ಮನೋಭಾವದಿಂದ ಅವರನ್ನು ಸಮೀಪಿಸಲು ನಾವು ಪೂರ್ಣ ಹೃದಯದಿಂದ ಬದ್ಧರಾಗಿರುವುದು ಮುಖ್ಯ, ಸಂದೇಹವನ್ನು ತೊಡೆದುಹಾಕುವ ಮೂಲಕ ಮತ್ತು ಅದನ್ನು ಅಚಲವಾದ ಪ್ರಯತ್ನ ಮತ್ತು ನಂಬಿಕೆಯಿಂದ ಬದಲಾಯಿಸುವ ಮೂಲಕ, ನಾವು ನಮ್ಮ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತೇವೆ ಮತ್ತು ಹೆಚ್ಚು ಪೂರೈಸುವ ಪ್ರಯಾಣಕ್ಕಾಗಿ ನಮ್ಮನ್ನು ಹೊಂದಿಸುತ್ತೇವೆ ಎಂದು ಐಶ್ವರ್ಯ ಶಿಕ್ಷಕ ಸಿಬ್ಬಂದಿಗಳಿಗೆ ಸ್ಫೂರ್ತಿ ತುಂಬುವ ನುಡಿಗಳನ್ನು ಆಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.