ಧ್ರುವ ಸರ್ಜಾ ಬರ್ತಡೆಗೆ ಜನಸಾಗರ, ಇಷ್ಟೊಂದು ಜನರನ್ನು ನೋಡಿ ಬೆಚ್ಚಿಬಿದ್ದ ಧ್ರುವ

 | 
ರಿರೀೀರಾ

ಕನ್ನಡದ ಹೆಸರಾಂತ ಯುವ ನಟ ಧ್ರುವ ಸರ್ಜಾ ಇಂದು ಅಭಿಮಾನಿಗಳ ಜೊತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ನಾನಾ ಕಾರಣಗಳಿಂದಾಗಿ ಮೂರು ವರ್ಷಗಳಿಂದ ಧ್ರುವ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಈ ವರ್ಷ ಬೆಂಗಳೂರಿನ ಬಸವನಗುಡಿಯ ತಮ್ಮ ನಿವಾಸದಲ್ಲಿ ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. 

ರಾಜ್ಯದ ನಾನಾ ಭಾಗಗಳಿಂದ ಅಭಿಮಾನಿಗಳು ಅವರ ನಿವಾಸಕ್ಕೆ ಆಗಮಿಸಿದ್ದರು. ನೆಚ್ಚಿನ ನಟನನ್ನು ನೋಡಲು ರಾತ್ರಿಯಿಂದಲೇ ಅಭಿಮಾನಿಗಳು ಧ್ರುವ ಸರ್ಜಾ ಮನೆಯ ಮುಂದೆ ಜಮಾಯಿಸಿದ್ದರು. ನೆಚ್ಚಿನ ನಟನಿಗೆ ಶುಭಾಶಯಗಳನ್ನು ಕೋರಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಧ್ರುವ, ಈ ಹುಟ್ಟುಹಬ್ಬಕ್ಕೆ ಅಣ್ಣನ ಸಿನಿಮಾ ರಿಲೀಸ್ ಆಗುತ್ತಿರುವುದೇ ದೊಡ್ಡ ವಿಚಾರ. 

ಮೂರು ವರ್ಷಗಳ ನಂತರ ಅಣ್ಣನ ಸಿನಿಮಾ ತೆರೆಗೆ ಬರುತ್ತಿದೆ. ಹುಟ್ಟುಹಬ್ಬಕ್ಕಿಂತ ಅದೇ ನನಗೆ ದೊಡ್ಡದು. ಅಣ್ಣನನ್ನು ತೆರೆಯ ಮೇಲೆ ನೋಡುವುದೇ ಒಂದು ಸಂಭ್ರಮ ಎಂದಿದ್ದಾರೆ. ಈ ಹುಟ್ಟು ಹಬ್ಬಕ್ಕೆ ಚಿರಂಜೀವಿ ಸರ್ಜಾ ಅವರ ಸಿನಿಮಾ ರಿಲೀಸ್ ಆಗುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಗಣೇಶನ ಹಬ್ಬದಂದು ಮನೆಗೆ ಧ್ರುವ ಅವರ ಪುತ್ರ ಬಂದಿದ್ದಾರೆ. 

ಹೀಗಾಗಿ ಡಬಲ್ ಉಡುಗೊರೆಯನ್ನೇ ಧ್ರುವ ಸರ್ಜಾ ಪಡೆದಿದ್ದಾರೆ. ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಂತರ ಥಿಯೇಟರ್ ಗೆ ಬಂದು ಅಣ್ಣನ ಸಿನಿಮಾವನ್ನು ವೀಕ್ಷಿಸಲಿದ್ದಾರೆ ಧ್ರುವ ಅವರು. ಈ ಬಾರಿಯ ಹುಟ್ಟುಹಬ್ಬಕ್ಕೆ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದರು ಧ್ರುವ. 

ಕೇಕ್, ಹಾರ ತರುವ ಬದಲು ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವಂತೆ ಅಭಿಮಾನಿಗಳನ್ನು ಕೇಳಿದ್ದರು. ಸಾಕಷ್ಟು ಅಭಿಮಾನಿಗಳು ಪುಸ್ತಕದ ಉಡುಗೊರೆಯೊಂದಿಗೆ ಧ್ರುವ ಮನೆಗೆ ಆಗಮಿಸಿದ್ದು ವಿಶೇಷವಾಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.