ಉಪ್ಪಿ ಮಾತಿಗೆ ದರ್ಶನ್ ರಿಯಾಕ್ಷನ್ ಹೇಗಿತ್ತು ಗೊತ್ತಾ

 | 
ಕೀ

ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಮೇಲೆ ಕರ್ನಾಟಕ ವಿಧಾನಸಭೆಯ ಅತಿ ಕಿರಿಯ ಶಾಸಕರಾಗಿ ನಂಜನಗೂಡು ವಿಧಾನಸಭಾ ಕ್ಷೇತ್ರದ ದಿವಂಗತ ಆರ್‌. ಧ್ರುವನಾರಾಯಣ್‌ ಅವರ ಮಗ ದರ್ಶನ್‌ ಧ್ರುವನಾರಾಯಣ್‌ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಫೇಸ್​ಬುಕ್ ಲೈವ್​ನಲ್ಲಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದ ಉಪೇಂದ್ರ, ಗಾದೆ ಮಾತೊಂದನ್ನು ಹೇಳಿದ್ದರು. 

ಇದೀಗ ಈ ಮಾತು ಒಂದು ಸಮುದಾಯದವರನ್ನು ಬಡಿದೆಬ್ಬಿಸಿದೆ. ಈ ಸಂಬಂಧ ನಟ- ನಿರ್ದೇಶಕ ಉಪೇಂದ್ರ ವಿರುದ್ಧ ಎರಡನೇ ಎಫ್ ಐ ಆರ್ ದಾಖಲಾಗಿದೆ. ಇನ್ನು ಈ ಕುರಿತಾಗಿ ಹೇಳಿಕೆ ನೀಡಿರುವ ಶಾಸಕ ದರ್ಶನ್ ದೃವನಾರಾಯಣ ಅವರು ಉಪೇಂದ್ರ ಅವರ ಹೇಳಿಕೆ ಸಂಪೂರ್ಣ ತಪ್ಪು. ದಲಿತರನ್ನು ಗೌರವದಿಂದ ನಡೆಸಿಕೊಳ್ಳಿ. ಅವರು ಕೂಡ ಸಮಾನ ಹಕ್ಕು ಹೊಂದಿದ್ದಾರೆ ಎಂದಿದ್ದಾರೆ. ಅಲ್ಲದೆ ಅವರು ಮನಸ್ಸಿಗೆ ಬಂದಂತೆ ಮಾತಾಡಿ ಜನರ ಮನಸ್ಸಿಗೆ ನೋವುಂಟು ಮಾಡಿದ್ದಾರೆ. 

ಈ ತರದ ನಿರ್ಲಕ್ಷ್ಯ ಹೇಳಿಕೆ ನೀಡುವಾಗ ಮಾತಿನ ಬಗ್ಗೆ ಗಮನವಿರಲಿ ಎಂದಿದ್ದಾರೆ. ಉತ್ತಮ ಪ್ರಜಾಕೀಯ' ಪಕ್ಷದ 6ನೇ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 12 ರಂದು ಫೇಸ್‌ಬುಕ್‌ನಲ್ಲಿ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ ಉಪೇಂದ್ರ ಊರೆಂದರೆ ಹೊಲಗೇರಿ ಇದೆ. ಪ್ರತಿ ಹಳ್ಳಿಯಲ್ಲೂ ದಲಿತರ ಕುಗ್ರಾಮವಿದೆ ಎಂಬ ಹೇಳಿಕೆ ನೀಡಿ ಇದೀಗ ಟೀಕೆಗಳನ್ನು ಎದುರಿಸುತ್ತಿದ್ದಾರೆ. 

ತಮ್ಮ ಹೇಳಿಕೆ ವಿರುದ್ಧ ಯಾವುದೇ ಎಫ್‌ಐಆರ್‌ಗಳನ್ನು ದಾಖಲಿಸದಂತೆ ರಾಜ್ಯಾದ್ಯಂತ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಪೊಲೀಸ್ ಡಿಜಿ ಮತ್ತು ಐಜಿಗೆ ನಿರ್ದೇಶನ ಕೋರಬೇಕೆಂದು ಉಪೇಂದ್ರ ಕೋರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.