ಸ್ಪಂದನಾ ಸಾವಿನ ಬಳಿಕ ರಾಘು ನಡವಳಿಕೆ ಹೇಗಿದೆ ಗೊತ್ತಾ

 | 
Nx

ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಮುದ್ದಿನ ಪತ್ನಿ ಸ್ಪಂದಾನ ಲೋ ಬಿಪಿಯಿಂದ ಅಗಲಿದ್ದಾರೆ. ಆಪ್ತ ಕುಟುಂಬಸ್ಥರ ಜೊತೆ ಬ್ಯಾಂಕಾಕ್ ಪ್ರವಾಸ ಮಾಡಿದ ಸ್ಪಂದನಾ ಶಾಪಿಂಗ್ ಮುಗಿಸಿಕೊಂಡು ಬಂದು ಮಲಗಿದವರು ಮತ್ತೆ ಎದ್ದೇಳಲಿಲ್ಲ. ಸ್ಪಂದನಾ ಅಗಲಿ ಒಂದು ದಿನವಾಗುತ್ತಿದ್ದಂತೆ ಕರ್ನಾಟಕದಲ್ಲಿ ಅಭಿಮಾನಿಗಳು ಮತ್ತು ಸ್ನೇಹಿತರಿಗೆ ತಿಳಿಯಿತ್ತು. 

ಥೈಲ್ಯಾಂಡ್‌ ಎಂಬಸಿ ಜೊತೆ ಮಾತುಕತೆ ನಡೆಸಿ ಎರಡು ದಿನಗಳಲ್ಲಿ ಸ್ಪಂದನಾರನ್ನು ಬೆಂಗಳೂರಿಗೆ ಕಾರ್ಗೋ ವಿಮಾನದ ಮೂಲಕ ಕರೆ ತರಲಾಗಿತ್ತು.‌ ಮಲ್ಲೇಶ್ವರಂನಲ್ಲಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಬೆಂಗಳೂರಿನ ಹರಿಶ್ಚಂದ್ರ ಘಾಟನಲ್ಲಿ ಈಡಿಗ ಸಂಪ್ರದಾಯದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. 5ನೇ ದಿನ ಶ್ರೀರಂಗ ಪಟ್ಟಣದಲ್ಲಿ ಅಸ್ತಿ ವಿಸರ್ಜನೆ ಮಾಡಿ ಪೂಜೆ ಸಲ್ಲಿಸಿದ್ದಾರೆ.

ವಿಜಯ್ ರಾಘವೇಂದ್ರ ಧರ್ಮಪತ್ನಿ ಕಾರ್ಯಕ್ರಮವನ್ನು ಕ್ರಮವಾಗಿ ಮಾಡಲಾಗಿದೆ. ಶ್ರೀರಂಗ ಪಟ್ಟಣದ ಕಾವೇರಿ ತೀರದಲ್ಲಿ ಅಸ್ತಿ ವಿಸರ್ಜನಿ ಕಾರ್ಯಕ್ರಮ ಹಾಗೂ ಹೋಮ ಮಾಡಬೇಕು ಎಂದು ಚೆನ್ನೇಗೌಡರು ಹೇಳಿದ್ದರು. ಉತ್ತರಾಭಾದ್ರ ನಕ್ಷತ್ರದಲ್ಲಿ ಸ್ಪಂದಾನ ತೀರಿಕೊಂಡಿರುವ ಕಾರಣ ಶಾಂತಿ ಹೋಮ ಮಾಡಿಸಲಾಗಿದೆ. ಅದಕ್ಕೂ ಮುನ್ನ ವಿಜಯ್ ರಾಘವೇಂದ್ರ ಮಗ ಶೌರ್ಯ ಅವರಿಗೆ ಮುಡಿ ಕೊಡುವ ಶಾಸ್ತ್ರ ಮಾಡಿಸಿ ಹೋಮ ಮಾಡಲಾಗಿದೆ. ಒಂದು ಬೊಂಬೆಗೆ ಸ್ಪಂದನಾ ಅವರನ್ನು ಆಹ್ವಾಹನ ಮಾಡಿ ಅದನ್ನು ಸುಟ್ಟು ಹಾಕಲಾಗಿದೆ. 

ಅದನ್ನು ಮತ್ತೆ ಅಸ್ತಿ ಜೊತೆಗೆ ಸೇರಿಸಿಕೊಂಡು ಅಸ್ತಿನಾರಾಯಣ ಸ್ವಾಮಿ ಪೂಜೆಯನ್ನು ಕ್ರಮವಾಗಿ ರುಧ್ರ ಮತ್ತು ಸೂಕ್ತ ಕ್ರಮದಿಂದ ಪೂಜೆ ಮಾಡಿಸಿದ್ದೀವಿ. ಪಂಚಾಮೃತ ಅಂತಾ...ತುಪ್ಪ ಹಾಲು ಸಕ್ಕರ ಮೊಸರು ಜೇನುತುಪ್ಪ ಎಳನೀರು ಅಭಿಷೇಕ ಮಾಡಿ ಆ ಅಸ್ತಿಗೆ ಪೂಜೆ ಮಾಡುತ್ತೀವಿ. ಅವರಿಗೆ ಹಸಿವು ಬಾಯಾರಿಕೆ ಇರುತ್ತದೆ ಅದಿಕ್ಕೆ ಪಿಂಡ ಪ್ರಧಾನ ಮತ್ತು ಬಲಿ ಪ್ರಧಾನ ಮಾಡಲಾಗಿದೆ. ಆಗಮಿಸಿದ ಅವರು ಸ್ನೇಹಿತರು ಮತ್ತು ಬಂಧುಗಳು ಎಲ್ಲರ ಮೂಲಕ ಅವರಿಗೆ ಅರ್ಪಣೆ ಮಾಡಿದ ಫಲ ಮತ್ತು ಲಾಜ ಎನ್ನುತ್ತಾರೆ ನಮ್ಮ ಸಂಸ್ಕೃತದಲ್ಲಿ ಅದನ್ನು ಪೂರಿ ಎನ್ನುತ್ತಾರೆ. 

ಸ್ಪಂದನಾ ಅವರಿಗೆ ಸದ್ಗತಿ ಸಿಗಲಿ ಎಂದು ಅವುಗಳನ್ನು ಅರ್ಪಣೆ ಮಾಡಿ ಆ ಅಸ್ತಿಯನ್ನು ಕಾವೇರಿ ಜಲದಲ್ಲಿ ಅರ್ಪಣೆ ಮಾಡಿದ್ದಾರೆ. ಆದಷ್ಟು ಧಾರ್ಮಿಕ ಸ್ಥಳದಲ್ಲಿ ಈ ಪೂಜೆ ಮಾಡಬೇಕು, ಬಂದಿದ್ದು ತಡವಾದರೂ ಶ್ರದ್ಧೆಯಿಂದ ಮಾಡಿದ್ದಾರೆ. ಈ ಮದ್ಯೆ ಸ್ಪಂದನಾ ಇಲ್ಲದ ಮನೆ ಬಿಕೋ ಎನ್ನುತ್ತಿದೆ. ಸ್ಪಂದನಾ ಮನೆಯಲ್ಲಿ ನೀರವ ಮೌನ ತುಂಬಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.