ಡಿಕೆಶಿ ಕಾಂಗ್ರೆಸ್ ಗೆಲ್ಲಿಸುವುದಕ್ಕೆ ಅದೆಂತಹ ಸಾಧನೆ ಮಾಡಿದ್ದಾರೆ ಗೊತ್ತಾ, ಪವಿತ್ರ ಹಿಂದೂ ಧರ್ಮದ ಅರಿವು ಹುಟ್ಟಿದ್ದು ಹೇಗೆ

ಕರ್ನಾಟಕದ ಡಿಸಿಎಂ ಪಟ್ಟಕ್ಕೆ ಏರಿರುವ ಡಿಕೆ ಶಿವಕುಮಾರ್ ಅವರು ಬೆಳೆದು ಬಂದಿರುವ ಹಾದಿ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಹೌದು ನನ್ನ ರಾಜಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಬೆಂಬಲವಾಗಿದ್ದರು, ನನ್ನನ್ನು ಬೆಳೆಸಿದ ಧೀಮಂತ ನಾಯಕರಾಗಿದ್ದ ಅವರಿಗೆ ಯುವಕರನ್ನು ಸೆಳೆಯುವ ಶಕ್ತಿ ಇತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮಾಜಿ ಸಿಎಂ ಬಂಗಾರಪ್ಪ ಅನೇಕ ಕಾರಣಗಳಿಂದ ಪಕ್ಷ ತೊರೆದು ಹೋಗಿದ್ದರು, ಅವರ ಮಗ ಮಧು ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡಲಾಗಿದೆ.
ಎಐಸಿಸಿಯಿಂದ ಸೂಚನೆ ಬಂದ ಕೂಡಲೆ ಅವನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಬಂಗಾರಪ್ಪ ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಅವರ ಅಭಿಪ್ರಾಯ ಪಡೆದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನದ ಫಲವಾಗಿ ಜೆಡಿಎಸ್ ನಿಂದ ಮಾತ್ರವಲ್ಲ ಬೇರೆ ಯಾವ ಪಕ್ಷದಿಂದ, ಯಾವುದೆೇ ನಾಯಕರು ಬಂದರೂ ಅವರೆಲ್ಲರಿಗೂ ಕಾಂಗ್ರೆಸ್ ಬಾಗಿಲು ಸದಾ ತೆಗೆದಿರುತ್ತದೆ, ಸದಾ ಸ್ವಾಗತವೂ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕಾಗೋಡು ತಿಮ್ಮಪ್ಪ, ಜನಾರ್ಧನ ಪೂಜಾರಿ, ಬಂಗಾರಪ್ಪ ಅವರಂತಹ ಮೇಧಾವಿ ನಾಯಕರು ಪಕ್ಷಕ್ಕೆ ನೀಡಿರುವ ಕೊಡುಗೆ ಮರೆಯುವಂತಿಲ್ಲ. ಪಕ್ಷದ ತತ್ವ, ಸಿದ್ದಾಂತ ಒಪ್ಪಿ ಬಂದರೆ ರಾಜ್ಯಾಧ್ಯಕ್ಷನಾಗಿ ಸ್ವಾಗತ ಮಾಡುತ್ತೇನೆ ಎಂದೂ ಶಿವಕುಮಾರ್ ತಿಳಿಸಿದ್ದಾರೆ. ಇತ್ತೀಚೆಗೆ ಮಾಂಸಹಾರ ಸೇವನೆ ಬಿಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಈ ಬೆನ್ನಲ್ಲೇ ಡಿಕೆ ಶಿವಕುಮಾರ್ ಕೂಡ ನಾನು ಕೂಡ ಪ್ಯೂರ್ ವೆಜಿಟೇರಿಯನ್ ಆಗಿದ್ದೇನೆ ಎಂದಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ ‘ ಇಡಿ ಹಾಕಿದ ಕೇಸ್ ನಲ್ಲಿ ಜೈಲಿಗೆ ಹೋದ ಬಳಿಕ ಮಾಂಸ ತಿನ್ನೋದನ್ನು ಬಿಟ್ಟಿದ್ದೇನೆ ಎಂದಿದ್ದಾರೆ. ಹಾಗೆಯೇ 60 ವರ್ಷ ದಾಟಿದ ಬಳಿಕ ಆರೋಗ್ಯ ಚೆನ್ನಾಗಿರಬೇಕು, ಸಸ್ಯಹಾರ ಸೇವನೆ ಬಹಳ ಒಳ್ಳೆಯದು ಎಂಬ ವೈದ್ಯರ ಸಲಹೆಯನ್ನು ಫಾಲೋ ಮಾಡುತ್ತಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ.(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.