ಹುಲಿಯಂತೆ ಘರ್ಜಿಸುತ್ತಿದ್ದ ಪ್ರಕಾಶ್ ರಾಜ್.ಗೆ ಹಿಂದೂ ಯುವಕ ಕೇಳಿದ ಪ್ರಶ್ನೆ ಏನು ಗೊತ್ತಾ

 | 
ರಪ

ಚಂದ್ರಯಾನ 3 ಸಂಬಂಧಪಟ್ಟಂತೆ ಅಣಕವಾಡುವಂತಹ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿಕೊಂಡು ಭಾರೀ ಟ್ರೋಲ್‌ಗೊಳಗಾಗಿದ್ದ ಪ್ರಕಾಶ್ ರಾಜ್, ಈಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈ ಬಾರಿ ಅವರು ಧರ್ಮದ ವಿಚಾರವಾಗಿ ಮಾತನಾಡಿದ್ದಾರೆ. ನಾನು ಹುಟ್ಟಿರೋದು ನನ್ನ ಅಪ್ಪ-ಅಮ್ಮನಿಗೆ, ಸನಾತನ ಧರ್ಮಕ್ಕೆ ಅಲ್ಲ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಅವರು ಇತ್ತೀಚೆಗೆ ನಡೆದ ತಮಿಳುನಾಡಿನ ಕಾರ್ಯಕ್ರಮವೊಂದರಲ್ಲಿ ಹಿಂದು ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ಕೊಟ್ಟರು. ಈ ಒಂದು ಹೇಳಿಕೆ ದೊಡ್ಡ ಸಂಚಲನ ಮೂಡಿಸಿದ್ದು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಅದರ ಬೆನ್ನಲ್ಲೇ ಬೆಂಗಳೂರಿನಲ್ಲಿ ನಡೆದ ಗೌರಿ ನೆನಪು ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರಾಜ್ ಅವರು ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ಇತ್ತೀಚಿಗೆ ಮಾಧ್ಯಮದವರು ನಡೆಸಿದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ ಅವರಿಗೆ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು ಹಿಂದೂ ಯುವಕನೊಬ್ಬ ನೀವು ಹುಟ್ಟಿದ್ದೇ ಸನಾತನ ಹಿಂದೂ ಧರ್ಮದಲ್ಲಿ ಈಗ ಅದನ್ನೇ ಅವಹೇಳನ ಮಾಡತೊಡಗಿದ್ದೀರಿ ಎಂದು ಕೇಳಿದಾಗ ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ ಅಪ್ಪ ಅಮ್ಮ ನಿಗೆ ಹುಟ್ಟಿರುವೆ ನನಗೆ ಈ ಸನಾತನ ಧರ್ಮದ ಬಗ್ಗೆ ನಂಬಿಕೆಯಿಲ್ಲ ಎಂದು ಹೇಳಿಕೆ ನೀಡಿದ್ದಾರೆ. 

ಅಷ್ಟಕ್ಕೂ ಪ್ರಕಾಶ್ ರಾಜ್ ಅವರ ತಂದೆ ಹಿಂದು ಆಗಿದ್ದು, ತಾಯಿ ರೋಮನ್ ಕ್ಯಾಥೋಲಿಕ್‌ಗೆ ಸೇರಿದವರು. ಆದರೆ ಪ್ರಕಾಶ್ ರಾಜ್ ಅವರು ನಾನು ಯಾವುದೇ ಧರ್ಮಕ್ಕೆ ಸೇರಿಲ್ಲ ಎಂದು ಹೇಳುತ್ತಾರೆ. ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ರಾಜಕಾರಣಿ ಕೂಡ ಹೌದು ಆದರೆ ತಮ್ಮ ಬಂಡ ಹೇಳಿಕೆಗಳಿಂದ ಜನರ ಮನಗೆಲ್ಲುವಲ್ಲಿ ವಿಫಲವಾಗಿದ್ದಾರೆ ಅಷ್ಟೇ ಎಂದು ರಂಗಣ್ಣ ನುಡಿದ್ದಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.