ಅಕಾಲಿಕ ಮ.ರಣಕ್ಕೆ ನಿಜವಾದ ಕಾರಣ ಏನು ಗೊತ್ತಾ, ಸ್ಪಂದನಾ ಎಡವಿದ್ದೆಲ್ಲಿ

 | 
Nx

ಕನ್ನಡ ಚಲನಚಿತ್ರ ನಟ-ನಿರ್ದೇಶಕ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಸಾವಿನ ಸುದ್ದಿ ನಿಜಕ್ಕೂ ಶಾಕಿಂಗ್. ತನ್ನ ಕುಟುಂಬದೊಂದಿಗೆ ಥೈಲ್ಯಾಂಡ್ ಪ್ರವಾಸದಲ್ಲಿದ್ದಾಗ ಸ್ಪಂದನಾ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಭಾನುವಾರ ರಾತ್ರಿ ಮಲಗಿದ್ದ ಸ್ಪಂದನಾ ಬೆಳಗ್ಗೆ ಎದ್ದೇಳಲ್ಲಿಲ್ಲ ಎಂದು ವಿಜಯ್ ರಾಘವೇಂದ್ರ ಅವರ ಸಹೋದರ ಶ್ರೀ ಮುರಳಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಸ್ಪಂದನ ಮಾತ್ರವಲ್ಲ, ಮಲಗಿದ್ದ ವ್ಯಕ್ತಿ ಬೆಳಗ್ಗೆ ಎದ್ದೇಳಲಿಲ್ಲ ಎನ್ನುವ ಅನೇಕ ಪ್ರಕರಣಗಳನ್ನು ನಾವು ಕೇಳಿರುತ್ತೇವೆ. ಹಾಗಿದ್ದರೆ ನಿದ್ದೆಯಲ್ಲಿದ್ದಾಗ ಹಠಾತ್ತನೆ ಸಾವಿನೆಡೆಗೆ ಜಾರುವ ಹಿಂದಿರುವ ಕಾರಣ ಏನು ಎನ್ನುವ ಪ್ರಶ್ನೆ ಮನದಲ್ಲಿ ಮೂಡುತ್ತದೆ. ಇದರ ಬೆನ್ನಲ್ಲೇ ಅವರ ಸಾವಿಗೆ ಅತಿಯಾದ ಜಿಮ್ ಹಾಗೂ ಡಯಟ್ ಗೆ ಮೊರೆ ಹೋಗಿದ್ದೇ ಸಾವಿಗೆ ಕಾರಣವಾಗಿರಬಹುದಾ ಎಂಬ ಚರ್ಚೆ ಆರಂಭವಾಗಿದೆ‌.

ಇವರ ನಿಧನದ ವಿಚಾರ ಹೊರ ಬರುತ್ತಾ ಇದ್ದ ಹಾಗೆ ಸಾಕಷ್ಟು ಊಹ ಪೋಹಗಳಿಗೆ ದಾರಿ ಮಾಡಿಕೊಡುತ್ತದೆ, ಈ ಸಂದರ್ಭದಲ್ಲಿ ಮಾತನಾಡಿದ ವಿಜಯ ರಾಘವೇಂದ್ರ ಅವರ ಮಾವ ಬಿಕೆ ಶಿವರಾಂ ಸ್ಪಂಧನ ಎರಡು ಮೂರು ದಿನಗಳ ಹಿಂದಷ್ಟೇ ಸ್ನೇಹಿತರೊಂದಿಗೆ ಥೈಲ್ಯಾಂಡ್ ಹಾಗೂ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದರು. ವಿಜಯ ರಾಘವೇಂದ್ರ ಕೂಡ ಶೂಟಿಂಗ್ ಕೆಲಸಗಳನ್ನು ಮುಗಿಸಿ ಅವರೊಡನೆ ಜಾಯಿನ್ ಆಗಿದ್ದರು.

ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ಸ್ಪಂದನ ಅವರು ಫಿಟ್ನೆಸ್ ಕಾಯ್ದುಕೊಳ್ಳುವ ಸಲುವಾಗಿ ಜಿಮ್ನಲ್ಲಿಯೂ ವರ್ಕೌಟ್ ಮಾಡುತ್ತಿದ್ದರು. ಲೋ ಬಿಪಿ ಹೊರೆತುಪಡಿಸಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಅವರಿಗೆ ಇರಲಿಲ್ಲ, ಹೀಗೆ ಬಹಳ ಲವಲವಿಕೆ ಇಂದ ಎಲ್ಲರೊಂದಿಗೆ ಓಡಾಡಿಕೊಂಡಿದ್ದಂತಹ ಸ್ಪಂದನ ಇಹಲೋಕ ತ್ಯಜಿಸಿರುವುದು ಪ್ರತಿಯೊಬ್ಬರಿಗೂ ಅಗಾಧವಾದ ನೋವನ್ನುಂಟು ಮಾಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.