ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಮುದ್ದಾದ ಮಹಿಳೆ ಮಾಡಿದ ಕೆಲಸ ಏನು ಗೊತ್ತಾ

 | 
D

ತಾಯಿಯಾಗಬೇಕೆಂಬ ಆಸೆ ಪ್ರತಿ ಹೆಣ್ಣಿಗೂ ಇರುತ್ತದೆ. ಅದರಂತೆ ತಾಯಿಯಾಗ ಹೋಗಿ ಪ್ರಾಣವೇ ಕಳೆದುಕೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ. ಹೌದು ಮಾನಸಾ ಎಂಬ ಮಹಿಳೆಯ ಗರ್ಭಕೋಶದಲ್ಲಿ ಮೂರು ಗ್ರಾಂ ಗಡ್ಡೆಯಿದೆ ಆಪರೇಷನ್ ಮಾಡಬೇಕೆಂದು ವೈದ್ಯರು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡಿದ್ದರು. 

ಮೃತ ಮಾನಸ ಮಕ್ಕಳಾಗಿಲ್ಲವೆಂದು ಒಂದೂವರೆ ತಿಂಗಳಿನಿಂದ ವೈದ್ಯರ ಬಳಿ ತೋರಿಸಿಕೊಳ್ಳುತ್ತಿದ್ದರು. 
ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ಮಾನಸ ಹಾಗೂ ಅರುಣ್ ಮದುವೆಯಾಗಿದ್ದರು. ಮೃತ ಮಾನಸ ತುಮಕೂರು ವಿವಿಯಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಮೊನ್ನೆ ಸಂಜೆ ಆಪರೇಷನ್ ಎಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 

ತಡರಾತ್ರಿ ಆಪರೇಷನ್ ಮಾಡುವಾಗ ಮಾನಸ ಸಾವನ್ನಪ್ಪಿದ್ದಾರೆ. ಮಾನಸ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪತಿ ಹಾಗೂ ಕುಟುಂಬಸ್ಥರು ಆರೋಪಿಸಿ ಆಕ್ರೋಶವನ್ನ ಹೊರಹಾಕಿದ್ದಾರೆ. ಬೆಂಗಳೂರಿನ ಡಾ. ಶಶಿಕಲಾ ಆಪರೇಷನ್ ನಡೆಸಿದ್ದರು ಎನ್ನಲಾಗಿದೆ. ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಮೃತರ ಕುಟುಂಬಸ್ಥರು ದೂರು ನೀಡಿದ್ದಾರೆ. 

ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು 30 ವರ್ಷದ ಮಾನಸಾ ಮಕ್ಕಳ ಬಗ್ಗೆ ಬಹಳ ಆಸೆ ಇಟ್ಟುಕೊಂಡಿದ್ದರು. ಅಲ್ಲದೆ ಒಬ್ಬ ಒಳ್ಳೆಯ ಹೆಣ್ಣು ಮಗಳಾಗಿದ್ದರು ಎಂದು ನೆರೆಹೊರೆಯಲ್ಲಿ ಮಾತು ಕೇಳಿಬರ್ತಿದೆ. ಅಲ್ಲದೆ ವೈದ್ಯರ ನಿರ್ಲಕ್ಷ್ಯಕ್ಕೆ ಹಲವಾರು ಜನ ಖಂಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.