ಬೀದಿಗಿಳಿದು ಆಭ೯ಟಿಸಿದ ಚಕ್ರವತಿ೯ ಸೂಲಿಬೆಲೆ, ಇಸ್ರೇಲ್ ದಾಳಿ ಬಗ್ಗೆ ಹೇಳಿದ್ದೇನು ಗೊತ್ತಾ

 | 
Hgg

 ಕಾಂಗ್ರೆಸ್‌ ಸರ್ಕಾರ ಸ್ವಾರ್ಥ ಸಾಧನೆಗೆ ರಾಕ್ಷಸರ ಸಮರ್ಥನೆಗೆ ನಿಂತುಕೊಂಡಿದೆ. ಕೇವಲ ಮತಗಳಿಗಾಗಿ ಯಾರನ್ನಾದರೂ ಬೆಂಬಲಿಸುವ ಮನೋಭಾವ ಕಾಂಗ್ರೆಸ್‌ ಕೈಯಲ್ಲಿ ದೇಶ ಕೊಟ್ಟರೆ ಹೇಗೆ ಎಂಬ ಚಿಂತೆ ಈಗ ಎಲ್ಲೆಡೆ ಕಾಡುತ್ತಿದೆ ಎಂದು ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಯಾಲೆಸ್ಟೀನ್ ಉಗ್ರರು ನಡೆಸಿದ ಹೇಯ ಕೃತ್ಯವನ್ನು ಎಲ್ಲ ದೇಶಗಳು ಖಂಡಿಸಿವೆ. 40ಕ್ಕೂ ಹೆಚ್ಚು ಮಕ್ಕಳನ್ನು ಜೀವಂತವಾಗಿ ದಹಿಸಿದ್ದಾರೆ. ಇದು ಮನುಷ್ಯರು ಮಾಡುವ ಕೆಲಸವಲ್ಲ ರಾಕ್ಷಸರು ಮಾಡುವ ಕೆಲಸ. ಈ ರಾಕ್ಷಸರಿಗೆ ಬೆಂಬಲಿಸುತ್ತಿರುವವರು ಕತಾರ್‌, ಇರಾನ್‌, ಟರ್ಕಿ ರಾಷ್ಟ್ರಗಳು. ಅದನ್ನು ಬಿಟ್ಟರೆ ಕಾಂಗ್ರೆಸ್‌ ಬೆಂಬಲಿಸುತ್ತಿರುವುದು ದುರಂತದ ಸಂಗತಿ ಎಂದರು.

ಕಾಂಗ್ರೆಸ್‌ ನಿಲುವು ಭಾರತದ ಇತಿಹಾಸದ ಪಾಲಿಗೆ ಕಪ್ಪುಚುಕ್ಕೆಯಾಗಿ ಗುರುತಿಸಲ್ಪಡುತ್ತದೆ. ಕಾಂಗ್ರೆಸ್ಸಿನವರು ಕುಕ್ಕರ್‌ ಬಾಂಬ್‌ ಇಟ್ಟವರನ್ನು, ಗಲಭೆಕೋರರನ್ನು ನಮ್ಮ ಬ್ರದರ್ಸ್‌ಗಳು ಎಂದು ಹೇಳುತ್ತಾರೆ. ಇನ್ನೂ ಮುಂದೆ ಹೋಗಿ ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ತೊಂದರೆ ಮಾಡಿದವರನ್ನು ಬಿಡುಗಡೆ ಮಾಡುವಂತೆ ಪತ್ರ ಬರೆದಿದ್ದಾರೆ. ಇದನ್ನೆಲ್ಲ ಗಮನಿಸಿದರೆ ದುರಂತಕಾರಿ ಸಂಗತಿ. ತ್ರಿಶೂಲ ಕೈಯಲ್ಲಿಡಿದು ಹಿಂದೂಗಳು ಹೋಗಬೇಕಾದರೆ ಮುಸ್ಲಿಮರು ಏಕೆ ಕೈಯಲ್ಲಿ ತಲ್ವಾರ್‌ ಹಿಡಿಯಬಾರದು ಎಂದು ಪ್ರಶ್ನೆ ಕೇಳುತ್ತಾರೆ. ಇದನ್ನೆಲ್ಲ ನೋಡಿದರೆ ಕರ್ನಾಟಕ ಯಾವ ದಿಕ್ಕಿನೆಡೆಗೆ ಹೋಗುತ್ತಿದೆ ಎಂಬುದನ್ನು ತಿಳಿಸುತ್ತದೆ ಎಂದರು.

ಮಹಿಷಾ ರಾಕ್ಷಸರೇ ಆಗಿರಲಿ, ಹಮಾಸ ಉಗ್ರರೇ ಆಗಿರಲಿ, ಲಷ್ಕರೆ ತೊಯಿಬಾನೆ ಯಾರೇ ಆಗಿರಲಿ. ಕಾಂಗ್ರೆಸ್ಸಿನವರು ಸದಾ ರಾಕ್ಷಸರನ್ನೇ ಬೆಂಬಲಿಸಿಕೊಂಡು ಬರುತ್ತಿದ್ದಾರೆ. ಅವಕಾಶ ಸಿಕ್ಕರೆ ಹಮಾಸರ ಪರವಾಗಿ ಒಂದು ಜಯಂತಿ ಮಾಡಿದರೂ ಆಶ್ಚರ್ಯ ಪಡಬೇಕಿಲ್ಲ. ಟಿಪ್ಪು ಜಯಂತಿ ಆಚರಣೆಗೆ ತಂದಿದ್ದು ಇವರೇ. ಮುಸ್ಲಿಮರು ಪೈಗಂಬರರ ಜಯಂತಿ ಬಿಟ್ಟರೆ ಮತ್ತೆ ಯಾರ ಜಯಂತಿಯನ್ನೂ ಆಚರಿಸುವುದಿಲ್ಲ. ಯಾರು ಯಾರು ಹಿಂದುಗಳ ಮೇಲೆ ಆಕ್ರಮಣ ಮಾಡಿದ್ದಾರೋ ಅಂತಹ ರಾಕ್ಷಸರನ್ನು ಆಯ್ಕೆಮಾಡಿಕೊಂಡು ಅವರನ್ನು ವೈಭವಿಕರಿಸಿಕೊಳ್ಳುವುದು ಕಾಂಗ್ರೆಸ್ಸಿಗೆ ರೂಢಿಯಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಈ ಮಹಿಷಾ ದಸರಾ ಆಚರಣೆ ಎಂದು ಸೂಲಿಬೆಲೆ ಹೇಳಿದರು.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.