ಯುವಕರ ಚಂದುಳ್ಳಿ ಚೆಲುವೆಗೆ ಏನಾಯಿತು ಗೊತ್ತಾ, ಕಣ್ಣೀರಿಟ್ಟ ಕಿಚ್ಚ ಸುದೀಪ್

 | 
Hd

ನಟಿ ಸುಮನ್ ರಂಗನಾಥ್ ಗೆ ದಿಢೀರ್ ಆಘಾತ..
ಸ್ಯಾಂಡಲ್​​ವುಡ್​ ನಟಿ ಸುಮನ್​ ರಂಗನಾಥ್ ಯಾರಿಗೆ ತಾನೇ ಗೊತ್ತಿಲ್ಲ. ಎವರ್​ಗ್ರೀನ್​ ನಟಿ ಎಂದು ಹೆಸರು ಪಡೆದವರು.1989ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, ಈವರೆಗೆ ಕನ್ನಡ, ತಮಿಳು, ತೆಲುಗು, ಬೆಂಗಾಳಿ,ಬೋಜ್​ಪುರಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕನ್ನಡದ ಹೆಸರಾಂತ ನಟರಾದ ಶಂಕರ್ ನಾಗ್​, ವಿಷ್ಣುವರ್ಧನ್ ಅವರ ಜೊತೆಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.ಈ ನಟಿ ಹಿರಿಯ ನಟ ಶಂಕರ್ ನಾಗ್​ ಅವರಿಂದ ಹಿಡಿದು ಈಗಿನ ಯುವ ನಾಯಕರಾದ ಲೂಸ್​ ಮಾದ ಯೋಗಿ, ಡಾಲಿ ಧನಂಜಯ್, ನೀನಾಸಂ ಸತೀಶ್​ ಜೊತೆ ಸಹ ಅಭಿನಯಿಸಿದ್ದಾರೆ.Bz

ಶ್ರೀಧರ್ ಅಭಿನಯದ ಸಂತ ಶಿಶುನಾಳ ಶರೀಫ್ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಸುಮನ್ ಬಹು ಕಾಲ ಸಿನಿಮಾ ರಂಗದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದರು. ತದನಂತರ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದ ಸುಂದರಿ ಮರಳಿ ಬಂದಿದ್ದು, ಸಿನಿಮಾದಲ್ಲಿ ಆಕ್ಟೀವ್​ ಆಗಿದ್ದಾರೆ.ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗು, ಬೆಂಗಾಳಿ ಮತ್ತು ಭೋಜಪುರಿ ಭಾಷೆಯ ಸುಮಾರು 50ಕ್ಕೂ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದು, ಸದ್ಯ ಪೋಷಕ ಪಾತ್ರಗಳನ್ನು ಮಾಡುತ್ತಿದ್ದಾರೆ.ಸುಮನ್ ಅವರಿಗೆ ಸಿದ್ಲಿಂಗು ಚಿತ್ರದ ಅಮೋಘ ಅಭಿನಯಕ್ಕಾಗೆ ಫಿಲ್ಮಫೇರ್ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಸಹ ಲಭಿಸಿದೆ. Bb

ಈಗಲೂ ಸಹ ಚಿತ್ರದಲ್ಲಿ ಸಕ್ರಿಯರಾಗಿದ್ದು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.ಇತ್ತೀಚೆಗೆ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸತೀಶ್​ ನೀನಾಸಂ ಅಭಿನಯದ ಪೆಟ್ರೋಮ್ಯಾಕ್ಸ್​ ಸಿನಿಮಾ ಬಿಡುಗಡೆಯಾಗಿತ್ತು. ಯಾವಾಗಲೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಈ ಚೆಲುವೆ ಎಂದರೆ ಅಭಿಮಾನಿಗಳಿಗೆ ಬಹಳ ಇಷ್ಟ.ಆದ್ರೆ ಇದೀಗ ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಸಂಭವಿಸಿದೆ. ಹೌದು ಸುಮನ್​ ರಂಗನಾಥ್​  ಅವರ ಮನೆಯಲ್ಲಿ ಶೋಕ ಆವರಿಸಿದೆ. ಅವರ ತಾಯಿ ಜ್ಯೋತಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. Gcd

ಆದರೆ ಚಿಕಿತ್ಸೆ ಫಲಕಾರಿ ಆಗದೇ ಬೆಳಗ್ಗೆ 7.50ರ ಸುಮಾರಿಗೆ ಕೊನೆಯುಸಿರು ಎಳೆದಿದ್ದಾರೆ ಎಂಬುದು ತಿಳಿದುಬಂದಿದೆ. ರಕ್ತದೊತ್ತಡ  ಮತ್ತು ಉಸಿರಾಟದ ಸಮಸ್ಯೆಯಿಂದಾಗಿ ಅವರು ನಿಧನರಾಗಿದ್ದಾರೆ. ನಟಿ ಸುಮನ್​ ರಂಗನಾಥ್​ ಅವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅಭಿಮಾನಿಗಳು ಮತ್ತು ಆಪ್ತರು ಹೇಳಿದ್ದಾರೆ. ಜ್ಯೋತಿ ಅವರ ಅಗಲಿಕೆಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.


(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.