ಸ್ಪಂದನಾ ಸಾ.ವಿನ ಬಳಿಕ ರಾಘು ಮಾಡುತ್ತಿರುವ ಕೆಲಸ ಏನು ಗೊತ್ತಾ, ಕಣ್ಣೀರಿಟ್ಟ ಮಗ ಶೌರ್ಯ

 | 
Vc

ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧರಾಗಿ 
ಸರಿಸುಮಾರು ಎರಡು ತಿಂಗಳುಗಳೇ ಕಳೆದು ಹೋದ್ರು ನಟ ವಿಜಯ್ ರಾಘವೇಂದ್ರ ದುಃಖದಿಂದ ಹೊರಬಂದಿಲ್ಲ. ಸ್ಪಂದನಾ ನೆನಪುಗಳು ರಾಘುವನ್ನು ಬಿಟ್ಟು ಬಿಡದೆ ಕಾಡ್ತಿದೆ. ಸ್ಪಂದನಾ ಅಕಾಲಿಕ ಮರಣ ಇಡೀ ಕುಟುಂಬವನ್ನು ದುಃಖಕ್ಕೆ ದೂಡಿದೆ. ಎರಡು ದೇಹ ಒಂದೇ ಜೀವದಂತೆ ಬದುಕುತ್ತಿದ್ದ ವಿಜಯ್ ರಾಘವೇಂದ್ರ-ಸ್ಪಂದನಾ ಬಾಳಲ್ಲಿ ವಿಧಿ ಆಟವಾಡಿದ್ದು, ಸ್ಪಂದನಾ ಬಾರದ ಊರಿಗೆ ತೆರಳಿದ್ದಾರೆ.

ಅವರ ನೆನಪುಗಳೊಂದಿಗೆ ವಿಜಯ್ ರಾಘವೇಂದ್ರ ಮುಂದಿನ ಜೀವನವನ್ನು ಕಳೆಯುವ ಯೋಚನೆಯಲ್ಲಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸುವುದೇ ಇಲ್ಲವೇನೋ ಎಂದುಕೊಂಡಿದ್ದ ವಿಜಯ್ ರಾಘವೇಂದ್ರ ಅವರು ಇದೀಗ ಮತ್ತೆ ಸಿನಿಮಾ ರಂಗದತ್ತ ಮುಖ ಮಾಡಿದ್ದಾರೆ. 

ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಚಲನಚಿತ್ರ ಶೂಟಿಂಗ್ ನಿಮಿತ್ತ ಬಿಆರ್ ಟಿಗೆ ಬಂದಿದ್ದ ನಟ ವಿಜಯ್ ರಾಘವೇಂದ್ರ ಹಾಗು ಸಹಕಲಾವಿದರು, ಬಿಆರ್ ಟಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದೇವಾಲಯದಲ್ಲಿ ಪೂಜೆ ಮಾಡಿ, ಪುತ್ರ ಶೌರ್ಯನ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. 

ಮಗನ ಹೆಸರಲ್ಲಿ ಉರುಳು ಸೇವೆ ಮಾಡಿದರು. ಹಾಗೂ ದಾಸೋಹ ಭವನದಲ್ಲಿ ವಿಜಯ ರಾಘವೇಂದ್ರ ಪ್ರಸಾದ ಸೇವಿಸಿದ ಬಳಿಕ, ಮೆಚ್ಚಿನ ನಟನ ಜೊತೆ ಅಭಿಮಾನಿಗಳು ಫೋಟೊ ಕ್ಲಿಕ್ಕಿಸಿಕೊಳ್ಳಲು ಪೋಸ್ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.