ರಾಘು ಮನೆಯಲ್ಲಿ ಮಾಡುತ್ತಿರುವ ಕೆಲಸ ಏನು ಗೊತ್ತಾ, ಭಕ್ತಿ ಗೀತೆಯಲ್ಲಿ ದೇವರ ಸ್ಮರಣೆ

 | 
Nd

ಸ್ಯಾಂಡಲ್‌ವುಡ್‌ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ರಾಘವೇಂದ್ರ ನಿಧನರಾಗಿ ಎರಡು ವಾರ ಕಳೆಯುತ್ತ ಬಂತು. ಇಂದಿಗೂ ಆ ಎರಡೂ ಕುಟುಂಬಗಳಲ್ಲಿ ಕಣ್ಣೀರು ನಿಂತಿಲ್ಲ. ಅಲ್ಲಿ ಮಡುಗಟ್ಟಿದ ಮೌನ, ಉಮ್ಮಳಿಸಿ ಬರುವ ದುಃಖ ಕಡಿಮೆಯಾಗಿಲ್ಲ. ಎಲ್ಲಿ ನೋಡಿದರೂ ಸ್ಪಂದನಾ ಅವರ ಆ ನಗು ಮೊಗವೇ ಕಾಣುತ್ತಿದೆ. ಆ ಕಣ್ಣೀರಿನಲ್ಲಿಯೇ 11ನೇ ದಿನದ ಕಾರ್ಯವೂ ಮುಗಿದಿದೆ. 

ಇದೀಗ ಪತ್ನಿಯ ನಿಧನದ ಬಳಿಕ ವಿಜಯ್‌ ರಾಘವೇಂದ್ರ ಮೊದಲ ಬಾರಿ ಸೋಷಿಯಲ್‌ ಮೀಡಿಯಾದಲ್ಲಿ ಮಡದಿಯನ್ನು ನೆನಪಿಸಿಕೊಂಡಿದ್ದಾರೆ. ವಿಜಯ್‌ ರಾಘವೇಂದ್ರ ಮತ್ತು ಸ್ಪಂದನಾ ಅವರದ್ದು ಪ್ರೇಮ ವಿವಾಹ. ಇಬ್ಬರದ್ದು ಅತೀ ಆತ್ಮೀಯ ಬಂಧ. ಇನ್ನೇನು ಕೆಲ ದಿನಗಳಲ್ಲಿ 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ತರಾತುರಿಯಲ್ಲಿತ್ತು ಈ ಮುದ್ದಾದ ಜೋಡಿ. 

ಆದರೆ ಅದ್ಯಾವ ಮಸಣೆ ಕಣ್ಣು ಬಿತ್ತೋ ಏನೋ, ಸ್ಪಂದನಾ ವಿದೇಶದಲ್ಲಿಯೇ ಹೃದಯಾಘಾತದಿಂದ ನಿಧನರಾದರು. ಅದಾದ ಬಳಿಕ ಕಂಡಿದ್ದು ಬರೀ ಕಣ್ಣೀರು. ಈ ಸಾವಿಗೆ ಯಾರ ಸಾಂತ್ವನವೂ ತಲುಪದು. ಸ್ಪಂದನಾ ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ. ಕೇವಲ ನಿನ್ನವ ಎಂದು ವಿಜಯ್ ರಾಘವೇಂದ್ರ ಅವರು ಭಾವನ್ಮಾತಕವಾಗಿ ಸಾಲುಗಳನ್ನು ಹೇಳಿಕೊಂಡಿದ್ದಾರೆ.

ಹೀಗೆ ವಿಜಯ್ ರಾಘವೇಂದ್ರ ಅವರು ಭಾವುಕರಾಗಿ ಸಾಲುಗಳನ್ನು ಹೇಳಿಕೊಂಡಿದ್ದಾರೆ. ಅವರ ಧ್ವನಿಯಲ್ಲಿ ನೋವು ಕಾಣಿಸಿದೆ. ಸ್ಪಂದನಾ ಅವರು ಮೃಪಟ್ಟು ಇಂದಿಗೆ 13 ದಿನಗಳು ಕಳೆದಿವೆ. ಅವರು ಇಲ್ಲ ಎಂಬ ನೋವನ್ನು ಅರಗಿಸಿಕೊಳ್ಳೋಕೆ ಕುಟುಂಬದವರ ಬಳಿ ಇಂದಿಗೂ ಸಾಧ್ಯವಾಗುತ್ತಿಲ್ಲ. ಸ್ಪಂದನಾ ತಂದೆ ಶಿವರಾಂ, ಪತಿ ವಿಜಯ್ ರಾಘವೇಂದ್ರ, ಮಗ ಶೌರ್ಯ ಹೀಗೆ ಕುಟುಂಬದ ಎಲ್ಲಾ ಸದಸ್ಯರು ದುಃಖದಲ್ಲಿಯೇ ದಿನ ದೂಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.