ಪಾಕ್ ವಿರುದ್ಧ ಮ್ಯಾಚ್ ಗೆದ್ದ ನಂತರ ರೋಹಿತ್ ಶರ್ಮಾ ಹೇಳಿದ್ದೇನು ಗೊತ್ತಾ, ಇಡೀ ದೇಶವೇ ಶಾಕ್

 | 
Hf

 ಏಕದಿನ ವಿಶ್ವಕಪ್ 2023ರ ಪಂದ್ಯಾವಳಿಯ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅಬ್ಬರಿಸಿದರು. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿರುವ ಹಿಟ್‌ಮ್ಯಾನ್‌, ಪಾಕಿಸ್ತಾನದ ವಿರುದ್ಧದ ಪಂದ್ಯದ ಬಳಿಕ ಸಿಕ್ಸರ್ ಬಾರಿಸುವ ಬಗೆಗಿನ ಗುಟ್ಟು ಬಿಚ್ಚಿಟ್ಟಿದ್ದಾರೆ.

ರೋಹಿತ್ ಶರ್ಮಾ ಅವರು ಸುಲಭವಾಗಿ ಸಿಕ್ಸರ್ ಹೊಡೆಯುವುದನ್ನು ಕಂಡು ಸ್ವತಃ ಅಂಪೈರ್ ಕೂಡ ಅಚ್ಚರಿ ಪಟ್ಟಿದ್ದಾರೆ. ಮೈದಾನದಲ್ಲಿ ರೋಹಿತ್ ಬಳಿ ಅಷ್ಟು ದೂರ ಸಿಕ್ಸರ್ ಬಾರಿಸಿದ್ದೀಯಲ್ಲ ಬ್ಯಾಟ್‌ನಲ್ಲಿ ಏನಾದರೂ ಇದೆಯಾ ಎಂದು ಕೇಳಿದರು ಎಂದು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.

ಪಾಕಿಸ್ತಾನದ ವಿರುದ್ಧದ ಪಂದ್ಯ ಮುಕ್ತಾಯವಾದ ಬಳಿಕ ಹಾರ್ದಿಕ್ ಪಾಂಡ್ಯ ರೋಹಿತ್ ಶರ್ಮಾ ಬಳಿ ಬಂದು ಸಂದರ್ಶಕರಂತೆ ಪ್ರಶ್ನೆಗಳನ್ನು ಕೇಳಿದರು. ಸಿಕ್ಸರ್ ಸಿಡಿಸಿದ ನಂತರ ತಮ್ಮ ಸಂಭ್ರಮಾಚರಣೆ ಕುರಿತು ಮಾತನಾಡಿದ ರೋಹಿತ್, ಅವರು ಅಂಪೈರ್ ಮರೈಸ್ ಎರಾಸ್ಮಸ್ ನನ್ನನ್ನು ಕೇಳುತ್ತಿದ್ದರು, ನೀವು ಅಂತಹ ಸಿಕ್ಸರ್‌ಗಳನ್ನು ಹೇಗೆ ಹೊಡೆಯಲು ಸಾಧ್ಯವಾಯಿತು? ನಿಮ್ಮ ಬ್ಯಾಟ್‌ನಲ್ಲಿ ಏನಾದರೂ ಇದೆಯೇ? ನಾನು ಅವನಿಗೆ ಹೇಳಿದೆ, ಇಲ್ಲ ಬ್ಯಾಟ್‌ನಲ್ಲಿ ಅಲ್ಲ, ನನ್ನ ತೋಳಿನಲ್ಲಿದೆ ಎಂದು ಹೇಳಿದ್ದಾಗಿ ತಿಳಿಸಿದರು.

ಇನ್ನು ಸಿಕ್ಸರ್ ಬಾರಿಸುವಲ್ಲಿ ರೋಹಿತ್ ಶರ್ಮಾ ಮತ್ತೊಂದು ದಾಖಲೆ ಬರೆದಿದ್ದಾರೆ. ಅಫ್ಘಾನಿಸ್ತಾನದ ವಿರುದ್ದದ ಪಂದ್ಯದಲ್ಲಿ ಕ್ರಿಸ್ ಗೇಲ್ ದಾಖಲೆ ಮುರಿದು ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡರೆ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಏಕದಿನ ಮಾದರಿಯಲ್ಲಿ 300 ಸಿಕ್ಸರ್ ಪೂರೈಸಿದ್ದಾರೆ.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.