ಮದುವೆ ಮಂಟಪದಲ್ಲಿ ಮದುವೆ ಮುಗಿದ ತಕ್ಷಣ ವಧು ಮಾಡಿದ್ದೇನು ಗೊತ್ತಾ

 | 
Nx

 ಮದುವೆ ಜೀವನದ ಟರ್ನಿಂಗ್ ಪಾಯಿಂಟ್ ಎನ್ನುತ್ತಾರೆ ಆದರೆ ಎಕ್ಸಾಮ್ ಅದಕ್ಕಿಂತಲೂ ಹೆಚ್ಚು ಎಂದು ಮದುವೆಯ ದಿನವೇ ತಾಳಿ ಕಟ್ಟಿಸಿಕೊಂಡು ಎಕ್ಸಾಂ ಬರೆದ ವಧುವಿನ ಬಗ್ಗೆ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಿ.

ಮದುವೆ ಮುಗಿದ ಮರು ಕ್ಷಣವೆ ವಧು ವರನ ಜೊತೆಗೆ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪದವಿ ಪರೀಕ್ಷೆ ಬರೆದು ಗಮನ ಸೆಳೆದಿದ್ದಾಳೆ. ಶಿವಮೊಗ್ಗದ ಭರ್ಮಪ್ಪ ನಗರದ ಸತ್ಯವತಿ ಪರೀಕ್ಷೆ ಬರೆದ ನವ ವಧುವಾಗಿದ್ದಾಳೆ.

ಚೆನ್ನೈ ಮೂಲದ ಫ್ರಾನ್ಸಿಸ್‌ ಅವರ ಜೊತೆಗೆ ಸತ್ಯವತಿ ಭಾನುವಾರ ಶಿವಮೊಗ್ಗದಲ್ಲಿ ವಿವಾಹವಾದರು. ಮದುವೆ ಶಾಸ್ತ್ರ ಮುಗಿಯುತ್ತಿದ್ದಂತೆ ಮರುಕ್ಷಣವೆ ವರನ ಜೊತೆಗೆ ಕಮಲಾ ನೆಹರು ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದರು. ಅಂತಿಮ ವರ್ಷದ ಬಿ.ಎ ಪದವಿ ಪರೀಕ್ಷೆ ಬರೆದರು.

ಬೆಳಗ್ಗೆ 8 ಗಂಟೆಗೆ ಮದುವೆ ಶಾಸ್ತ್ರ ನಡೆಯಿತು. ಬೆಳಗ್ಗೆ 9.30ಕ್ಕೆ ಪದವಿ ಪರೀಕ್ಷೆ ಇತ್ತು. ಈ ಹಿನ್ನೆಲೆ ಮದುವೆ ಅಲಂಕಾರದಲ್ಲಿಯೇ ಸತ್ಯವತಿ ಕಾಲೇಜಿಗೆ ಹಾಜರಾದರು. ಹಾರ, ಆಭರಣ, ಅಲಂಕಾರದೊಂದಿಗೆ ವಧು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದು ಎಲ್ಲರ ಗಮನ ಸೆಳೆಯಿತು.
ಇನ್‌ಸ್ಟಾಗ್ರಾಂ ಮೂಲಕ ಆಗಿದ್ದ ಪರಿಚಯ ಪ್ರೀತಿಗೆ ತಿರುಗಿತ್ತು. ಚೆನ್ನೈನ ಫ್ರಾನ್ಸಿಸ್‌ ಮತ್ತು ಶಿವಮೊಗ್ಗದ ಸತ್ಯವತಿ ಹಿರಿಯರನ್ನು ಒಪ್ಪಿಸಿ ಇಬ್ಬರು ಭಾನುವಾರ ಸರಳವಾಗಿ ವಿವಾಹವಾದರು.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.