ಸೈಕಲ್ ನಲ್ಲಿ ಹೋಗುತ್ತಿದ್ದ ಮುದ್ದಾದ ವಿ.ದ್ಯಾರ್ಥಿನಿಗೆ ಕಿರಾತಕರು ಮಾಡಿದ್ದೇನು ಗೊತ್ತಾ

 | 
ಪುೀ

ಉತ್ತರ ಪ್ರದೇಶದಲ್ಲಿ ಕ್ರೈಮ್ ನೆಡೆದಲ್ಲೇ ಶಿಕ್ಷೆ ಸಿಗುತ್ತಿದೆ ಹೌದು ಅಲ್ಲಿಯೇ ಸ್ಪರ್ಧೆ ಅಪರಾಧಿಗಳಿಗೆ ಅಲ್ಲಿಯೇ ಬಹುಮಾನ ಬಾಲಕಿಯ ದುಪಟ್ಟಾ ಎಳೆದು ಆಕೆಯ ಸಾವಿಗೆ ಕಾರಣವಾಗಿದ್ದ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ನಡೆದಿತ್ತು. 

ವಿದ್ಯಾರ್ಥಿನಿಯೊಬ್ಬಳು ಶಾಲೆಯಿಂದ ಹಿಂದಿರುಗುತ್ತಿದ್ದ ವೇಳೆ ಬೈಕ್​ನಲ್ಲಿ ಬಂದ ಆರೋಪಿ ಆಕೆ ದುಪಟ್ಟಾವನ್ನು ಎಳೆದಿದ್ದ ಆಕೆ ಆ ರಭಸಕ್ಕೆ ಕೆಳಗೆ ಬಿದ್ದಿದ್ದಳು ಮತ್ತೊಂದು ಬೈಕ್​ನಲ್ಲಿ ಬಂದ ಇನ್ನೋರ್ವ ಆರೋಪಿ ಆಕೆಯ ಮೇಲೆ ಬೈಕ್ ಹತ್ತಿಸಿ ಹತ್ಯೆ ಮಾಡಿದ್ದ. ಇಬ್ಬರು ಆರೋಪಿಗಳಾದ ಶಹಬಾಜ್ ಮತ್ತು ಫೈಸಲ್ ಓಡಿ ಹೋಗಲು ಪ್ರಯತ್ನಿಸಿದರು ಹಾಗಾಗಿ ಅವರ ಕಾಲಿಗೆ ಗುಂಡು ಹಾರಿಸಲಾಗಿದೆ.

ಅಪ್ರಾಪ್ತ ವಯಸ್ಸಿನ ಮೂರನೇ ಆರೋಪಿ ಓಡುತ್ತಿರುವಾಗ ಕಾಲಿಗೆ ಮೂಳೆ ಮುರಿತವಾಗಿದೆ ಎಂದು ಎಸ್​ಪಿ ಅಜಿತ್ ಸಿನ್ಹಾ ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಘಟನೆಯ ವಿಡಿಯೋದಲ್ಲಿ, ದುಪಟ್ಟಾ ಎಳೆದ ತಕ್ಷಣ ಬಾಲಕಿ ಸೈಕಲ್​ನಿಂದ ನಿಯಂತ್ರಣ ಕಳೆದುಕೊಂಡು ಬಿದ್ದಿದ್ದಾಳೆ, ಆಗ ಆರೋಪಿ ಆಕೆಯ ಮೇಲೆ ಬೈಕ್ ಹತ್ತಿಸಿದ್ದಾನೆ.

ತಕ್ಷಣ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದು, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ನಂತರ ಸಂತ್ರಸ್ತೆಯ ತಂದೆಯಿಂದ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಲಾಗಿದೆ.ಇನ್ನು ಈ ಕುರಿತಾಗಿ ಡಾ. ಮೋನಿಕಾ ಲಾಂಗೆ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೇರ್​ ಮಾಡಿರುವ ವಿಡಿಯೋದಲ್ಲಿ ಮೂವರು ಆರೋಪಿಗಳು ನಡೆದಾಡಲು ಆಗದೆ ತೆವಳಿಕೊಂಡು ಹೋಗುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದಾರೆ. 

ದೃಶ್ಯದಲ್ಲಿ ಕಂಡಾಗ ಮೂವರು ಆರೋಪಿಗಳು ಕಾಲುಗಳು ಬಲವಿಲ್ಲ ಎಂಬಂತೆ ಕಾಣಿಸಿದೆ. ಇನ್ನು ಈ ವಿಡಿಯೋ ಹಂಚಿಕೊಂಡ ಡಾ. ಮೋನಿಕಾ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಯನ್ನು ಹಾಡಿ ಹೊಗಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.